ಕೂಡಿಗೆ, ಮಾ. ೨೫: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಅಳುವಾರದಲ್ಲಿ ಕಳೆದ ೨೦ ದಿನಗಳಿಂದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಸರಿಪಡಿಸದೆ ಈ ವ್ಯಾಪ್ತಿಯ ಅನೇಕ ಕುಟುಂಬದವರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಸರಿಪಡಿಸುವಂತೆ ಗ್ರಾಮದÀ ಪ್ರಮುಖರ ಒತ್ತಾಯವಾಗಿದೆ. ದೊಡ್ಡಅಳುವಾರ ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಕುಸಿತದಿಂದಾಗಿ ನೀರು ಕಡಿಮೆಯಾಗಿದೆ. ಅಲ್ಲದೆ ದೊಡ್ಡಅಳುವಾರ ಮತ್ತು ಚಿಕ್ಕಅಳುವಾರ ಗ್ರಾಮಗಳ ವಿಸ್ತಾರವು ಹೆಚ್ಚಾಗಿರುವುದರಿಂದಾಗಿ ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಗ್ರಾಮಸ್ಥರಾದ ಬುದ್ದೇಶ್ ಅವರು ಗ್ರಾಮ ಪಂಚಾಯಿತಿಗೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸಂಬAಧಿಸಿದ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.