ಪೊನ್ನಂಪೇಟೆ, ಮಾ. ೨೪: ಗೋಣಿಕೊಪ್ಪಲು ಕಾವೇರಿ ಕಾಲೇಜು ವಿಜ್ಞಾನ ವಿಭಾಗ, ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಬೆಂಗಳೂರು, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ನ್ಯೂ ಡೆಲ್ಲಿ, ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಅಲಹಾಬಾದ್ ಮತ್ತು ಕಾವೇರಿ ಕಾಲೇಜು ಐ.ಕ್ಯೂ.ಎ.ಸಿ. ಸೆಲ್ನ ಸಂಯುಕ್ತಾಶ್ರಯದಲ್ಲಿ ವಿಜ್ಞಾನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗಾಗಿ "ರೀಸೆಂಟ್ ಅಡ್ವಾನ್ಸ್ ಇನ್ ಜೆನೆಟಿಕ್ಸ್ " ಎಂಬ ವಿಷಯದ ಬಗ್ಗೆ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸ ಲಾಗಿತ್ತು. ಕಾರ್ಯಾಗಾರ ಸಂಚಾಲಕ ಪ್ರೊ. ಎನ್.ಬಿ. ರಾಮಚಂದ್ರ ಮಾತನಾಡಿ, ತಂತ್ರಜ್ಞಾನದ ಬಳಕೆಯಿಂದ ಇಂದು ಸಂವಹನ ಅತಂತ್ಯ ಸುಲಭವಾಗಿದೆ.
ವಿಜ್ಞಾನ ದಿಂದ ಮನುಷ್ಯನನ್ನು ತಯಾರು ಮಾಡಿ ಕೆಲಸವನ್ನು ಮಾಡಿಸಿ ಕೊಳ್ಳಬಹುದು. ಆದರೆ ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಲು ವಿಜ್ಞಾನಕ್ಕೆ ಸಾಧ್ಯವಿಲ್ಲ. ಒಳ್ಳೆಯ ಗುಣವನ್ನು ಮನುಷ್ಯ ತನ್ನಿಂತಾನೆ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ಮಡ್ಡಿಕ ಸುಬ್ಬಾ ರೆಡ್ಡಿ, ಪ್ರೊ. ಉಪೇಂದ್ರ ನೋಂಗ್ ತೋಬ, ಪ್ರೊ. ಟಿ. ಶಿವನಂದಪ್ಪ ಮತ್ತು ಪ್ರೊ. ಎನ್.ಬಿ. ರಾಮಚಂದ್ರ ಅವರು ಜೆನೆಟಿಕ್ಸ್ ಗೆ ಸಂಬAಧಿಸಿದ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಪ್ರೊ. ಐ.ಕೆ. ಬಿದ್ದಪ್ಪ, ಗೌರವ ಕಾರ್ಯದರ್ಶಿ ಕೆ.ಪಿ. ಬೋಪಣ್ಣ, ಉಪಾಧ್ಯಕ್ಷ ಕೆ.ಎಂ. ಸುಬ್ರಮಣಿ, ನಿರ್ದೇಶಕರಾದ ಪ್ರೊ. ಎಂ.ಕೆ. ಮೊಣ್ಣಪ್ಪ, ಕೆ.ಎಂ. ಬೆಳ್ಳಿಯಪ್ಪ, ಬಿ.ಎ. ಚಂಗಪ್ಪ, ಪಿ.ಟಿ. ಸುಭಾಷ್ ಸುಬ್ಬಯ್ಯ, ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ, ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ನಯನ ತಮ್ಮಯ್ಯ, ಕಾರ್ಯಕ್ರಮ ಸಂಯೋಜಕರಾದ ಸಿ. ಅಕ್ಷತಾ ಮತ್ತು ಭಾವನ, ವಿವಿಧ ಕಾಲೇಜುಗಳ ಉಪನ್ಯಾಸಕರು ಮತ್ತು ವಿಜ್ಞಾನ ವಿದ್ಯಾರ್ಥಿಗಳು ಭಾಗವಹಿಸಿದ್ದರು.