ಕೂಡಿಗೆ, ಮಾ. ೨೪: ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ದೈಹಿಕ ಶಿಕ್ಷಣ ವಿಭಾಗ ಆಶ್ರಯದಲ್ಲಿ ಕೂಡಿಗೆ ಕ್ರೀಡಾಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಅಂತರ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಪುರುಷರ ತಂಡ ಪ್ರಥಮ ಸ್ಧಾನ ಗಳಿಸಿತು. ಮಹಿಳಾ ವಿಭಾಗದಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾಲೇಜು ಮಹಿಳೆಯರ ತಂಡ ಪ್ರಥಮ ಸ್ಥಾನ ಗಳಿಸಿ ಟ್ರೋಫಿಯನ್ನು ತಮ್ಮದಾಗಿಸಿ ಕೊಂಡರು.
ಪ್ರಥಮ ಸೆಮಿಫೈನಲ್ ಪಂದ್ಯ ವೀರಾಜಪೇಟೆ ಕಾವೇರಿ ಕಾಲೇಜು ಪುರುಷರ ತಂಡ ಮತ್ತು ಮೂರ್ನಾಡು ಪ್ರಥಮ ಕಾಲೇಜು ಪುರುಷರ ತಂಡದ ನಡುವೆ ನಡೆದು ೧-೦ ಗೋಲುಗಳ ಅಂತರದಿAದ ಮೂರ್ನಾಡು ತಂಡ ಜಯಗಳಿಸಿತು.ಎರಡನೇ ಸೆಮಿಫೈನಲ್ನಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಬಾಲಕರ ತಂಡ ಮತ್ತು ಮಡಿಕೇರಿ ಎಫ್ಎಂಸಿ ಕಾಲೇಜುಗಳ ನಡುವೆ ನಡೆದು ೩-೧ ಗೋಲುಗಳಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಜಯಗಳಿಸಿತು. ನಂತರ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಹಾಗೂ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡಗಳ ನಡುವೆ ನಡೆದ ಪೈನಲ್ ಪಂದ್ಯದಲ್ಲಿ ಟ್ರೆöÊ ಬ್ರೇಕರ್ನಲ್ಲಿ ೩-೧ ಗೋಲುಗಳ ಅಂತರದಿAದ ಗೋಣಿಕೊಪ್ಪಲು ಕಾವೇರಿ ಕಾಲೇಜು ಪುರುಷರ ತಂಡ ಜಯಗಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮೂರ್ನಾಡು ಕಾಲೇಜು ಎರಡನೇ ಸ್ಥಾನಗಳಿಸಿತು.
ಮಹಿಳೆಯರ ವಿಭಾಗದಲ್ಲಿ ಮೂರು ಕಾಲೇಜು ತಂಡಗಳು ಭಾಗವಹಿಸಿದ್ದು, ಗೋಣಿಕೊಪ್ಪಲು ಕಾವೇರಿ ಕಾಲೇಜು ಮಹಿಳೆಯರ ತಂಡ ಮತ್ತು ಮಡಿಕೇರಿ ಎಫ್ಎಂಸಿ ಕಾಲೇಜು ಮಹಿಳೆಯರ ತಂಡದ ನಡುವೆ ನಡೆದ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಿAದ ಮಡಿಕೇರಿ ಎಫ್ಎಂಸಿ ಕಾಲೇಜು ಮಹಿಳೆಯರ ತಂಡ ಜಯಗಳಿಸಿತು. ನಂತರ ನಡೆದ ಫೈನಲ್ ಪಂದ್ಯದಲ್ಲಿ ಮಡಿಕೇರಿ ಎಫ್ಎಂಸಿ ಕಾಲೇಜು ಮಹಿಳೆಯರ ತಂಡ ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜು ತಂಡಗಳ ನಡುವೆ ಹಣಾಹಣಿ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಿAದ ಮಡಿಕೇರಿ ಎಫ್ಎಂಸಿ ಕಾಲೇಜು ಮಹಿಳೆಯರು ಜಯಗಳಿಸಿ, ಪ್ರಥಮ ಬಹುಮಾನ ಗಳಿಸಿತು. ಮೂಡುಬಿದಿರೆ ಆಳ್ವಾಸ್ ಕಾಲೇಜು ದ್ವಿತೀಯ ಸ್ಥಾನಗಳಿಸಿತು.
ಪುರುಷರ ವಿಭಾಗದಲ್ಲಿ ಮೂರನೆಯ ಸ್ಥಾನವನ್ನು ಮಡಿಕೇರಿ ಎಫ್ಎಂಸಿ ಕಾಲೇಜು, ನಾಲ್ಕನೇ ಸ್ಥಾನವನ್ನು ವೀರಾಜಪೇಟೆ ಕಾವೇರಿ ಮೂರು ಕಾಲೇಜು ತಂಡಗಳು ಭಾಗವಹಿಸಿದ್ದು, ಗೋಣಿಕೊಪ್ಪಲು ಕಾವೇರಿ ಕಾಲೇಜು ಮಹಿಳೆಯರ ತಂಡ ಮತ್ತು ಮಡಿಕೇರಿ ಎಫ್ಎಂಸಿ ಕಾಲೇಜು ಮಹಿಳೆಯರ ತಂಡದ ನಡುವೆ ನಡೆದ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಿAದ ಮಡಿಕೇರಿ ಎಫ್ಎಂಸಿ ಕಾಲೇಜು ಮಹಿಳೆಯರ ತಂಡ ಜಯಗಳಿಸಿತು. ನಂತರ ನಡೆದ ಫೈನಲ್ ಪಂದ್ಯದಲ್ಲಿ ಮಡಿಕೇರಿ ಎಫ್ಎಂಸಿ ಕಾಲೇಜು ಮಹಿಳೆಯರ ತಂಡ ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜು ತಂಡಗಳ ನಡುವೆ ಹಣಾಹಣಿ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಿAದ ಮಡಿಕೇರಿ ಎಫ್ಎಂಸಿ ಕಾಲೇಜು ಮಹಿಳೆಯರು ಜಯಗಳಿಸಿ, ಪ್ರಥಮ ಬಹುಮಾನ ಗಳಿಸಿತು. ಮೂಡುಬಿದಿರೆ ಆಳ್ವಾಸ್ ಕಾಲೇಜು ದ್ವಿತೀಯ ಸ್ಥಾನಗಳಿಸಿತು.
ಪುರುಷರ ವಿಭಾಗದಲ್ಲಿ ಮೂರನೆಯ ಸ್ಥಾನವನ್ನು ಮಡಿಕೇರಿ ಎಫ್ಎಂಸಿ ಕಾಲೇಜು, ನಾಲ್ಕನೇ ಸ್ಥಾನವನ್ನು ವೀರಾಜಪೇಟೆ ಕಾವೇರಿ ಕಾಲೇಜು ತಂಡ ಪಡೆದುಕೊಂಡಿತು. ಪಂದ್ಯಾವಳಿಯ ತೀರ್ಪಗಾರಾಗಿ ಕೂರ್ಗ್ ಹಾಕಿ ಸಂಸ್ಥೆ ಹಾಕಿ ತರಬೇತಿ ದಾರರು ಕಾರ್ಯ ನಿರ್ವಹಿಸಿದರು.
ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ಬಹುಮಾನವನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಮಂಗಳೂರು ವಿಶ್ವವಿದ್ಯಾನಿಲಯದ ವೀಕ್ಷಕರಾದ ಮತ್ತು ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ರಾಡ್ರಿಗಸ್, ಕುಶಾಲನಗರ ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಪ್ರವೀಣ್ಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪಿ.ಪಿ. ಜಯಂತಿ ಸೇರಿದಂತೆ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.