ಸುಂಟಿಕೊಪ್ಪ, ಮಾ. ೨೪: ಗರಿಗಳ ಭಾನುವಾರವನ್ನು ಜಿಲ್ಲೆಯಾದ್ಯಂತ ಕ್ರೆöÊಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಪ್ರಭುಕ್ರಿಸ್ತರು ಮಾನವರ ಪಾಪಕ್ಕಾಗಿ, ಲೋಕೋದ್ಧಾರಕ್ಕಾಗಿ ಮರಣ ಅಪ್ಪಿದ ಪ್ರಯುಕ್ತ ಈ ವಾರವನ್ನು ಕ್ರೆöÊಸ್ತ ಬಾಂಧವರು ಪವಿತ್ರ ವಾರವನ್ನಾಗಿ ಆಚರಿಸುವ ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರೆöÊಸ್ತ ಬಾಂಧವರು ತಾ. ೨೪ ರಂದು ಗರಿಗಳ ಭಾನುವಾರವನ್ನು ಆಚರಿಸಿದರು.

ಸುಂಟಿಕೊಪ್ಪದ ಸಂತ ಅಂತೋಣಿಯವರ ದೇವಾಲಯದಲ್ಲಿ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು. ದೇವಾಲಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್, ಸಹಾಯಕ ಧರ್ಮಗುರುಗಳಾದ ನವೀನ್ ಅವರುಗಳು ಸಂತ ಮೇರಿ ಶಾಲಾ ಮೈದಾನದಲ್ಲಿ ತೆಂಗಿನ ಗರಿಗಳನ್ನು ಆಶಿರ್ವಚಿಸಿ ನಂತರ ಕ್ರೆöÊಸ್ತ ಬಾಂದವರಿಗೆ ವಿತರಿಸಿದರು.

ಶಾಲಾವರಣದಿಂದ ದೇವಾಲಯದವರೆಗೆ ಮೆರವಣಿಗೆ ನಡೆಸಿ ನಂತರ ದೇವಾಲಯದಲ್ಲಿ ಬಲಿಪೂಜೆಯನ್ನು ಆರ್ಪಿಸುವ ಮೂಲಕ ಮುಂದಿನ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.