ಚೆಯ್ಯಂಡಾಣೆ, ಮಾ. ೨೪: ಮುಖ್ಯಮಂತ್ರಿಗಳ ಕಾನೂನು ಸಲಹೆ ಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ತುಲಾಭಾರ ಸೇವೆ ಅರ್ಪಿಸಿದರು. ಪತ್ನಿ ಕಾಂಚನ್ ಪೊನ್ನಣ್ಣ ಅವರೊಂದಿಗೆ ಸನ್ನಿಧಿಗೆ ಆಗಮಿಸಿದ ಪೊನ್ನಣ್ಣ ಅವರು ಇಗ್ಗುತಪ್ಪ ದೇವರ ಆದಿ ಸ್ಥಳ ಮಲ್ಮ ಕುಂದ್‌ಗೆ ತೆರಳಿ ಪುಷ್ಪ ಅಲಂಕಾರವನ್ನು ಸ್ವತಃ ಮಾಡುವ ಮೂಲಕ ಸಾಂಪ್ರದಾಯಿಕ ಆಚರಣೆ ಪಾಲಿಸಿದರು. ದೇವತಕ್ಕ ಪರದಂಡ ಸುಬ್ರಮಣಿ, ಪರದಂಡ ಪ್ರಿನ್ಸ್, ಬಾದುಮಂಡ ಲವ ಚಿಣ್ಣಪ್ಪ, ತೆನ್ನಿರ ಮೈನಾ, ಕಲಿಯಂಡ ಸಂಪತ್, ಬೊಳ್ಳಂಡ ಶರಿ, ಅಪ್ಪಚೆಟ್ಟೋಳಂಡ ಮಿಥುನ್, ಮಂಜು, ಪಟ್ಟಡ ರಕ್ಷಿತ್, ಸೋಮಣ್ಣ, ಸೇರಿದಂತೆ ಗ್ರಾಮದ ಮುಖ್ಯಸ್ಥರು, ಸ್ಥಳೀಯ ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ನೆರೆದಿದ್ದ ಭಕ್ತರು ದೇವತಾ ಕಾರ್ಯದಲ್ಲಿ ಭಾಗಿಯಾಗಿದ್ದರು.