ವೀರಾಜಪೇಟೆ, ಮಾ. ೨೪: ಮಹಿಳೆಯರು ಸ್ವ ಸಹಾಯ ಸಂಘಗಳ ಮೂಲಕ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಅವಕಾಶವಿದೆ ಎಂದು ಒಡಿಪಿ ಸಂಸ್ಥೆಯ ಮೈಸೂರು ಸಂಯೋಜಕರಾದ ಮೋಲಿ ಪುಡ್ತಾದೊ ಹೇಳಿದರು.
ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಒ.ಡಿ.ಪಿ. ಸಂಸ್ಥೆ ಕೇಂದ್ರ ಸಮಿತಿಯ ಸ್ವ ಸಹಾಯ ಸಂಘಗಳು, ಮಹಿಳೋದಯ ಮಹಿಳಾ ಒಕ್ಕೂಟ ಮಡಿಕೇರಿ ಇವರ ಜಂಟಿ ಆಶ್ರಯದಲ್ಲಿ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಡಿಪಿ ಸಂಸ್ಥೆಯು ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಸೇರಿದಂತೆ ೪ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ೨ ಸಾವಿರಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳು, ೪೦ ಸಾವಿರ ಮಹಿಳೆಯರನ್ನು ಒಗ್ಗೂಡಿಸುತ್ತಿದೆ. ಮಹಿಳೆಯರು ಸಂಘದೊAದಿಗೆ ಸಮಾಜ ಸೇವೆಯಲ್ಲಿ ತೊಡಗುವ ಮನೋಭಾವದೊಂದಿಗೆ ಪ್ರತಿಯೊಬ್ಬರು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸಬೇಕು, ಪ್ಲಾಸ್ಟಿಕ್ ಬ್ಯಾಗ್ ಉಪಯೋಗಿಸುವುದನ್ನು ಕಡಿಮೆ ಮಾಡಬೇಕು. ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಯತ್ತ ಮುಂದಾಗಬೇಕೆAದು ಹೇಳಿದರು.
ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಕೆ. ಪ್ರಮೋದ್ ಮಾತನಾಡಿ, ಸ್ವ ಸಹಾಯ ಸಂಘಗಳ ಸದಸ್ಯರು ಸಮಸ್ಯೆಗಳು ಬಂದಾಗ ಚಿಂತೆ ಪಡದೆ ಧೈರ್ಯದಿಂದ ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು ಎಂದರು.
ಆರ್ಜಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜನ್ ಮಾತನಾಡಿ, ಭಾರತ ದೇಶದಲ್ಲಿ ಮಹಿಳೆಗೆ ಉತ್ತಮ ಗೌರವ ನೀಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೆ ಮತದಾನ ಮಾಡಬೇಕು. ಯಾರು ಮತದಾನದಿಂದ ವಂಚಿತರಾಗಬಾರದು ಎಂದರು.
ಒಡಿಪಿ ಸಂಸ್ಥೆಯ ಮೈಸೂರಿನ ಎಫ್.ಪಿ.ಒ ಸಂಯೋಜಕ ಜಾನ್ ರಾಡ್ರಿಗಸ್ ಮಾತನಾಡಿ, ಕುಡಿಯುವ ನೀರನ್ನು ಉಳಿಸಬೇಕು. ವ್ಯರ್ಥ ಮಾಡಬಾರದು, ಪ್ರತಿಯೊಬ್ಬ ಸದಸ್ಯರು ನೀರು ಹರಿದು ಹೋಗದಂತೆ ಇಂಗು ಗುಂಡಿಯಲ್ಲಿ ಬಿಡುವ ಮೂಲಕ ನೀರನ್ನು ಉಳಿತಾಯ ಮಾಡಬೇಕು ಎಂದರು.
ಮಹಿಳೋದಯ ಮಹಿಳಾ ಒಕ್ಕೂಟ ಸ್ವ ಸಹಾಯ ಸಂಘದ ವತಿಯಿಂದ, ಒಡಿಪಿ ಸಂಸ್ಥೆಯ ಮೈಸೂರು ಸಂಯೋಜಕರಾದ ಮೋಲಿ ಪುಡ್ತಾದೊ ಹಾಗೂ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮಿನೆಜೇಸ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮಹಿಳೋದಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಇಂದಿರಾವತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಒಡಿಪಿ ಕಾರ್ಯಕರ್ತರಾದ ರೀಟಾ, ಮತ್ತು ಅನೀಲ್, ಮಹಾ ಒಕ್ಕೂಟದ ದುರ್ಗಾ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಾದ ರೀನಾ ಮತ್ತು ಸೌಮ್ಯ, ನವಚೈತನ್ಯ ಘಟಕದ ವಿಪಿನ್ನ, ಸಂಘದ ವಿನಿತ ಉಪಸ್ಥಿತರಿದ್ದರು. ನಂತರ ಸಂಘದ ಸದಸ್ಯರಿಂದ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.