ಇಂದು ವಿಶ್ವ ಕ್ಷಯರೋಗ ದಿನ

ಕ್ಷಯರೋಗ (ಖಿubeಡಿಛಿuಟosis) ಎನ್ನುವುದು ಜನಸಾಮಾನ್ಯರಲ್ಲಿ ಕೇಳಲ್ಪಡುವ ಒಂದು ಸಾಮಾನ್ಯ ಸಾಂಕ್ರಾಮಿಕ ಖಾಯಿಲೆ. ಇದು ಮೈಕೊಬ್ಯಾಕ್ಟೀರಿಯಂ ಟ್ಯೂಬರ್ಕುಲೊಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ.

ಇದು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಶ್ವಾಸಕೋಶದ ಕ್ಷಯ ಎಂದು ಕರೆಯಲಾಗುತ್ತದೆ. ಆದರೆ ಇದು ಮೆದುಳು, ಬೆನ್ನು ಮೂಳೆ, ಗರ್ಭಾಶಯ, ಹೃದಯ, ಚರ್ಮ ಮುಂತಾದ ಇತರ ಅಂಗಗಳ ಮೇಲೆ ಪರಿಣಾಮ ಬೀರಿದರೆ, ಅದನ್ನು ಎಕ್ಟಾç-ಪಲ್ಮನರಿ ಟಿಬಿ ಎಂದು ಕರೆಯಲಾಗುತ್ತದೆ.

ಒಬ್ಬರಿಂದೊಬ್ಬರಿಗೆ ಸುಲಭವಾಗಿಯೇ ಹರಡುವ ಈ ಖಾಯಿಲೆ, ಇಡೀ ಪ್ರಪಂಚದಲ್ಲಿ, ಅದರಲ್ಲೂ ಭಾರತದಲ್ಲಿ ಆರೋಗ್ಯ ಕ್ಷೇತ್ರದ ಅತಿ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ.

ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ ೨೪ ರಂದು ವಿಶ್ವ ಕ್ಷಯರೋಗ ದಿನ (ತಿoಡಿಟಜ ಣubeಡಿಛಿuಟosis ಜಚಿಥಿ) ಆಚರಿಸಲಾಗುತ್ತದೆ.

ವಿಶ್ವ ಕ್ಷಯರೋಗ ದಿನ ೨೦೨೪ ರ ಥೀಮ್: ಹೌದು! ನಾವು ಕ್ಷಯ ರೋಗವನ್ನು ಕೊನೆಗೊಳಿಸಬಹುದು (“ಙes! We ಛಿಚಿಟಿ eಟಿಜ ಖಿಃ”) ಎಂಬುದಾಗಿದೆ.

ಕ್ಷಯ ರೋಗದ ಇತಿಹಾಸ

ಸುಮಾರು ದಶಕಗಳ ಹಿಂದೆ ಕ್ಷಯರೋಗವನ್ನು ಸಾವಿನ ನಾಯಕನೆಂದು ಕರೆಯಲಾಗುತ್ತಿತ್ತು. ೧೮೮೨ ರಲ್ಲಿ ರಾಬರ್ಟ ಕಾಕ್ ಅವರು ಕ್ಷಯರೋಗಕ್ಕೆ ಮೈಕೋ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯೂಲೊಸಿಸ್ ಎಂಬ ಬ್ಯಾಕ್ಟೀರಿಯ ಕಾರಣ ಎಂದು ಪತ್ತೆ ಹಚ್ಚಿದರು.

೧೯೫೦ ರಿಂದ ೧೯೬೦ ರ ಅವಧಿಯಲ್ಲಿ ಟಿಬಿ ರೀಸರ್ಚ್ ಸೆಂಟರ್ ಮತ್ತು ನ್ಯಾಶನಲ್ ಟಿಬಿ ಇನ್ಸಿ÷್ಟಟ್ಯೂಟ್‌ಗಳಲ್ಲಿ ಬಹು ಮುಖ್ಯ ಸಂಶೋಧನೆ ನಡೆಯಿತು. ೧೯೬೨ ರಲ್ಲಿ ರಾಷ್ಟಿçÃಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ (ಆರ್‌ಎನ್‌ಟಿಸಿಪಿ) ಜಾರಿಗೆ ಬಂದಿತು. ಸುಮಾರು ಮೂರು ದಶಕಗಳ ಕಾಲ ಕಾರ್ಯಕ್ರಮದಲ್ಲಿ ಅಷ್ಟು ಪ್ರಗತಿ ಕಾಣಲಿಲ್ಲ.

೧೯೯೨ ರಲ್ಲಿ ಕಾರ್ಯಕ್ರಮವನ್ನು ಪುನರಾವಲೋಕನ ಮಾಡಲಾಯಿತು. ೧೯೯೩ ರಲ್ಲಿ ಪರಿಷ್ಕೃತ ರಾಷ್ಟಿçÃಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಡಾಟ್ಸ್ ಪ್ರಕ್ರಿಯೆಯನ್ನು ಅಳವಡಿಸಲಾಯಿತು. ಡಾಟ್ಸ್ ಪ್ರಕ್ರಿಯೆ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿದ್ದು ಹಂತ ಹಂತವಾಗಿ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು.

ಕ್ಷಯರೋಗದ ಗುಣಲಕ್ಷಣಗಳು

ಸಂಜೆ ವೇಳೆ ಜ್ವರ, ಎರಡು ವಾರ ಅಥವಾ ಅದಕ್ಕೂ ಹೆಚ್ಚಿನ ದಿನದಿಂದ ಕಫ ಸಹಿತ ಕೆಮ್ಮು, ಹಸಿವಿಲ್ಲದೆ ದೇಹದ ತೂಕ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮೊದಮೊದಲು ಶ್ವಾಸಕೋಶಗಳಿಗಷ್ಟೇ ಸೀಮಿತವಾಗಿ ಶುರುವಾಗುವ ಕ್ಷಯ, ಮುಂದೆ ಮೆದುಳು, ಬೆನ್ನುಮೂಳೆ, ಸಣ್ಣಕರುಳು, ದೊಡ್ಡಕರುಳು, ಹೀಗೆ ವಿವಿಧ ಅಂಗಾAಗಗಳಿಗೆ ಹರಡಬಲ್ಲದು.

ಹೆಚ್.ಐ.ವಿ. ಸೋಕು ಇರುವ ವ್ಯಕ್ತಿಗಳಿಗೆ ಸುಲಭವಾಗಿ ಈ ಸೋಂಕು ಅಂಟಿಕೊAಡು, ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಜೊತೆಯಲ್ಲಿ ಅಪೌಷ್ಟಿಕತೆಯೂ ಇದ್ದಲ್ಲಿ, ರೋಗಾಣು ಬೇಗನೇ ಎಲ್ಲಾ ಅಂಗಾAಗಗಳನ್ನು ಆವರಿಸಿಕೊಳ್ಳುತ್ತದೆ.

ಕ್ಷಯರೋಗದ ಚಿಕಿತ್ಸೆ

ಇದನ್ನು ಕಂಡು ಹಿಡಿಯಲು ಕಫ ಪರೀಕ್ಷೆ, ಎಕ್ಸ್ರೇ ರಕ್ತ ಪರೀಕ್ಷೆಗಳನ್ನು ಮಾಡಿಸಬೇಕು. ಕ್ಷಯರೋಗದ ಚಿಕಿತ್ಸೆಯಲ್ಲಿ ಮುಖ್ಯವಾಗಿ ೫ ರೀತಿಯ ಧಾತುಗಳನ್ನೊಳಗೊಂಡ ಮಾತ್ರೆಗಳನ್ನು ನೀಡಲಾಗುತ್ತದೆ. ಐಸೊನಿಯಾಝಿಡ್, ರಿಫಾಂಪಿಸಿನ್, ಪೈರಝಿನಮೈಡ್, ಎಥಾಂಬುಟಾಲ್, ಸ್ಪೆçಪ್ಟೊಮೈಸಿನ್, ಈ ಎಲ್ಲಾ ಮಾತ್ರೆಗಳನ್ನು ವಿವಿಧ ರೀತಿಯಲ್ಲಿ ಪ್ರತಿದಿನದಂತೆ ಸೇವಿಸಬೇಕಾಗುತ್ತದೆ.

ಕ್ಷಯ ಬರದಂತೆ ತಡೆಗಟ್ಟಲು ಕ್ರಮಗಳು

ಕ್ಷಯ ಹೊಂದಿರುವ ರೋಗಿಗಳೊಡನೆ ಸಂಪರ್ಕದಿAದ ದೂರ ಇರುವುದು. ಒಂದು ವೇಳೆ ಆ ರೀತಿ ಉಂಟಾದರೆ ತಕ್ಷಣವೇ ವೈದ್ಯರ ಸಲಹೆ ಪಡೆದು, ಅವಶ್ಯಕತೆಯಿದ್ದರೆ ಚಿಕಿತ್ಸೆಯನ್ನೂ ಶುರು ಮಾಡುವುದು.

ಕೈಗಳ ಮತ್ತು ದೇಹದ ಸ್ವಚ್ಛತೆ ಕಾಪಾಡಿಕೊಳ್ಳುವುದು ಮಾಂಸಾಹಾರ ಸೇವಿಸುವವರು, ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿಕೊಂಡು ಸೇವಿಸಬೇಕು.

ಧೂಮಪಾನ, ಮದ್ಯಪಾನಗಳಿಗೆ ಕಡಿವಾಣ ಹಾಕಬೇಕು. ಆಗಾಗ್ಗೆ ಉಸಿರಾಟ ತೊಂದರೆ ಇರುವವರು ವೈದ್ಯರ ಬಳಿ ಸಮಾಲೋಚನೆ ಪಡೆದು ಬಹುಬೇಗ ಸೂಕ್ತ ಚಿಕಿತ್ಸೆ ಪಡೆಯಬೇಕು.

ಪ್ರಮುಖವಾಗಿ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಮತ್ತು ನೀರು ಸೇವಿಸುವುದು ಕ್ಷಯ ಹೊಂದಿರುವವರು ಅನುಸರಿಸಬೇಕಾದ ಅಂಶಗಳು. ಕ್ಷಯರೋಗಿ ಎಂದು ಗೊತ್ತಾದ ದಿನದಿಂದಲೇ ಅದನ್ನು ಅರಿತುಕೊಂಡು ವೈದ್ಯರ ಸಲಹೆ ಮೇರೆಗೆ ಚಾಚೂತಪ್ಪದೆ ಸಮಯಕ್ಕೆ ಸರಿಯಾಗಿ ಅವಧಿ ಮುಗಿಯುವವರೆಗೂ ಪ್ರತಿದಿನವೂ ಔಷಧಗಳನ್ನು ಸೇವಿಸಲು ಮಾನಸಿಕವಾಗಿ ಸಿದ್ಧರಾಗಬೇಕು.

ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗು ಎರಡಕ್ಕೂ ಕರ್ಚೀಫ್‌ನಿಂದ ಮರೆಮಾಡಿಕೊಳ್ಳಬೇಕು. ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯ ಜೊತೆ ಇರುವಾಗ ಅಥವಾ ವ್ಯವಹರಿಸುವಾಗ ಅವರಿಗೆ ರೋಗ ಹರಡದಂತೆ ಗಮನ ಹರಿಸುವುದು ಪ್ರತಿ ರೋಗಿಯ ಕರ್ತವ್ಯ. ಕ್ಷಯ ರೋಗ ಮುಕ್ತ ಭಾರತವನ್ನು ಕಟ್ಟೋಣ

- ಡಾ. ಶೈಲು ವಿ., ಕುಶಾಲನಗರ. ಮೊ. ೯೭೪೧೪೩೬೫೧೮