ಸೋಮವಾರಪೇಟೆ, ಮಾ. ೨೩: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಸಕ್ತ ಸಾಲಿನ ಜಾತ್ರೋತ್ಸವದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ರಾಜಗೋಪುರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಪ್ರಮುಖರಾದ ಬಿ.ಬಿ. ಸತೀಶ್, ಚೇತನ್, ವಿನಿ, ಹೆಚ್.ಎ. ನಾಗರಾಜು, ಮೀನಾಕುಮಾರಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್‌ಕುಮಾರ್, ದೇವಾಲಯ ಸಮಿತಿ ಪದಾಧಿಕಾರಿಗಳಾದ ಪ್ರಸನ್ನ ನಾಯರ್, ರಾಧಾಕೃಷ್ಣ, ಪಿ.ಕೆ. ರಾಜನ್, ಎನ್.ಜಿ. ಮೋಹನ್, ಕೆ.ಸಿ. ದಿನೇಶ್ ಮತ್ತು ನಿರ್ದೇಶಕರುಗಳು ಕ್ಷೇತ್ರದ ಭಕ್ತಾದಿಗಳು ಇದ್ದರು. ಪೂಜಾ ವಿಧಿ ವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ನಡೆಸಿಕೊಟ್ಟರು.