ಮಡಿಕೇರಿ, ಮಾ. ೨೩: ಏಪ್ರಿಲ್ ೪ ರವರೆಗೆ ಮಡಿಕೇರಿಯಲ್ಲಿ ಮುಳಿಯ ಸ್ವರ್ಣಾಭರಣಗಳ ಸಂಸ್ಥೆ ವತಿಯಿಂದ "ಡೈಮಂಡ್ ಫೆಸ್ಟ್" ನಡೆಯಲಿದೆ. ಈ ಚಿನ್ನಾಭರಣಗಳ ಉತ್ಸವದ ಉದ್ಘಾಟನಾ ಸಮಾರಂಭ ಮಡಿಕೇರಿ ಮುಳಿಯ ಜ್ಯುವೆಲ್ಲರಿಯಲ್ಲಿ ನಡೆಯಿತು.

ಉದ್ಘಾಟನೆಯನ್ನು ಕಿರುತೆರೆಯ ರಿಯಾಲಿಟಿ ಶೋ ಖ್ಯಾತಿಯ ಶಾಂತೆಯAಡ ನಯನಾ ಕಾವೇರಪ್ಪ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರ ಮಾತಂಡ ಕಾರ್ಯಪ್ಪ ಪಾಲ್ಗೊಂಡಿದ್ದರು.

ಮಡಿಕೇರಿಯ ಅಂಚೆ ಇಲಾಖೆಯ ಅಧಿಕಾರಿ ಟಿ.ಪಿ. ಶ್ರೀನಿವಾಸ್, ಅಂಚೆ ಇಲಾಖೆಯ ಪೋಸ್ಟಲ್ ಹೆಡ್ ಸುದರ್ಶನ್, ಸಿಬ್ಬಂದಿಗಳಾದ ರಾಕೇಶ್, ಬಿ.ಎಂ. ಗೀತಾ, ಜೆ.ಟಿ. ರಾಜಣ್ಣ, ಹೆಚ್.ಎಸ್. ಉಷಾ, ಆರ್.ಜೆ. ನವೀನ್ ಕುಮಾರ್, ಕೆ.ಬಿ. ಭೀಮಯ್ಯ, ಕೆ.ಎನ್. ರಜಿತ್ ಕುಮಾರ್, ಬಿ.ಎನ್. ಜೀವನ್, ಹೆಚ್.ಬಿ. ಸುನೀಲ್ ಕುಮಾರ್, ಜಿ.ಎಂ. ಯಶವಂತ್, ಪೊನ್ನಮ್ಮ, ಹಂಸ ಅವರನ್ನು ಮುಳಿಯ ಚಿನ್ನಾಭರಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.