ಸೋಮವಾರಪೇಟೆ, ಮಾ. ೨೪: ಕಳೆದ ೨೦೧೭ರ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಆಡಳಿತದಲ್ಲಿ, ರಾಜ್ಯಾದ್ಯಂತ ಅನುಷ್ಠಾನಗೊಂಡ ಇಂದಿರಾ ಕ್ಯಾಂಟಿನ್ ಯೋಜನೆಗೆ ಸೋಮ ವಾರಪೇಟೆಯಲ್ಲಿ ಎದುರಾಗಿದ್ದ ಗ್ರಹಣ ಇದೀಗ ಬಿಟ್ಟಿದೆ!

ಸೋಮವಾರಪೇಟೆಯ ಇಂದಿರಾ ಕ್ಯಾಂಟಿನ್ ಇದೀಗ ಗ್ರಹಣ ಮುಕ್ತ ಗೊಂಡಿದ್ದು, ೨೦೧೭ರ ಯೋಜನೆಗೆ ೨೦೨೪ರಲ್ಲಿ ಚಾಲನೆ ದೊರೆತಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕಿಂತಲೂ ಮುಂಚಿನ ಸಾಲಿನಲ್ಲಿ (೨೦೧೭) ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಯೋಜನೆಯನ್ನು ಜಾರಿಗೆ ತಂದಿದ್ದು, ಬಹುತೇಕ ಕಡೆಗಳಲ್ಲಿ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದೆ. ಆದರೆ ಸೋಮವಾರಪೇಟೆ ಪಟ್ಟಣದಲ್ಲಿ ಮಾತ್ರ ಈ ಕ್ಯಾಂಟೀನ್‌ನ ಕಟ್ಟಡ ಕಾಮಗಾರಿಗೆ ಕಾಲ ಕೂಡಿ ಬಂದಿರಲಿಲ್ಲ.

ವರ್ಷಗಳು ಉರುಳಿ, ಆಡಳಿತವೂ ಬದಲಾವಣೆಯಾದಂತೆ ಇದೀಗ ಮತ್ತೆ ಇಂದಿರಾ ಕ್ಯಾಂಟಿನ್ ನಿರ್ಮಾಣ ಕಾಮಗಾರಿ ಆರಂಭಗೊAಡಿದೆ. ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಈ ಬಗ್ಗೆ ವಿಧಾನ ಸಭೆಯಲ್ಲಿಯೂ ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಬೃಹತ್ ಯಂತ್ರದ ಮೂಲಕ ‘ಸ್ಲಾö್ಯಬ್ ವಾಲ್’ಗಳ ಅಳವಡಿಕೆ ಕಾಮಗಾರಿ ಆರಂಭಗೊAಡಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಂದಿರಾ ಕ್ಯಾಂಟಿನ್‌ನ ಊಟಕ್ಕೆ ಒಂದೆರಡು ತಿಂಗಳು ಕಾಯಬೇಕಿದೆ!

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಿ.ಕೆ. ಸುಬ್ಬಯ್ಯ ರಸ್ತೆಗೆ ಹೊಂದಿಕೊAಡಿರುವ ಮಾರ್ಕೆಟ್ ಏರಿಯಾದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆಂದು ಒಂದೆರಡು ಲಕ್ಷ ವ್ಯಯ ಮಾಡಿ ಮಣ್ಣು ಅಗೆದು ತಳಪಾಯ ನಿರ್ಮಿಸಿದ್ದನ್ನು ಹೊರತುಪಡಿಸಿದರೆ ಇತರ ಕಾಮಗಾರಿ ಕೈಗೊಳ್ಳದ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಈ ಭಾಗಕ್ಕೆ ಕನ್ನಡಿಯೊಳಗಿನ ಗಂಟಿನAತಾಗಿತ್ತು.

ಇಲ್ಲಿನ ಮಾರ್ಕೆಟ್ ಏರಿಯಾದ ಸಿ.ಕೆ. ಸುಬ್ಬಯ್ಯ ರಸ್ತೆಗೆ ಒತ್ತಿಕೊಂಡAತಿರುವ ಪ.ಪಂ. ವಾಣಿಜ್ಯ ಸಂಕೀರ್ಣದ ಮುಂಭಾಗ ಸುಮಾರು ೮.೫ ಸೆಂಟ್ಸ್ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಅದರಂತೆ ಕ್ಯಾಂಟಿನ್‌ನ ತಳಪಾಯದ ಕಾಮಗಾರಿ ಮುಕ್ತಾಯಗೊಂಡು ೬ ವರ್ಷಗಳೇ ಕಳೆದಿದ್ದವು.

ಆದರೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮಾತ್ರ ಚಾಲನೆ ನೀಡಿರಲಿಲ್ಲ. ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಅವರ ನೇತೃತ್ವದಲ್ಲಿ, ಸಂಘಟನೆಯ ಮೂಲಕ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ತಾಂತ್ರಿಕ ಕಾರಣಗಳನ್ನು ನೀಡುತ್ತಿದ್ದರೇ ಹೊರತು, ಯಾವುದೇ ಪ್ರಗತಿಗೆ ಮುಂದಾಗಿರಲಿಲ್ಲ.

ಇದೀಗ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಕಾಲ ಕೂಡಿಬಂದಿದ್ದು, ಬೃಹತ್ ಯಂತ್ರಗಳ ಮೂಲಕ ‘ಸ್ಲಾö್ಯಬ್ ವಾಲ್’ಗಳ ಅಳವಡಿಕೆಗೆ ಚಾಲನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮುಗಿಯಲಿದೆ. ಒಟ್ಟಾರೆ ಕಳೆದ ೭ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯೊಂದು ಇದೀಗ ಜೀವ ಪಡೆದುಕೊಂಡಿದ್ದು, ಇದರ ‘ಕ್ರೆಡಿಟ್’ ಯಾರಿಗೆ ಸಲ್ಲಬೇಕೆಂದು ನೀತಿ ಸಂಹಿತೆ ಹಿನ್ನೆಲೆ ಹೇಳುವಂತಿಲ್ಲ!!

- ವಿಜಯ್ ಹಾನಗಲ್