ಗೋಣಿಕೊಪ್ಪಲು, ಮಾ. ೨೨: ದ. ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಹುಲಿಗಳ ಕಾಟ ಹೆಚ್ಚಾಗುತ್ತಿದ್ದು ಟಿ.ಶೆಟ್ಟಿಗೇರಿ, ಶ್ರೀಮಂಗಲ ಮುಖ್ಯ ರಸ್ತೆಯ ಅನತಿ ದೂರದಲ್ಲಿ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿದ್ದು ಹಸುವು ಗಂಭೀರ ಸ್ವರೂಪದ ಗಾಯದಿಂದ ನರಳುತ್ತಿದೆ. ಗ್ರಾಮದ ಚಟ್ಟಂಗಡ ನಿತೇಶ್ ಬಿದ್ದಪ್ಪ ಎಂಬವರಿಗೆ ಸೇರಿದ ಹಸುವಿನ ಮೇಲೆ ಸಂಜೆಯ ವೇಳೆ ಹುಲಿ ದಾಳಿ ನಡೆಸಿದೆ. ಈ ವೇಳೆ ಗೋಣಿಕೊಪ್ಪಲು, ಮಾ. ೨೨: ದ. ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಹುಲಿಗಳ ಕಾಟ ಹೆಚ್ಚಾಗುತ್ತಿದ್ದು ಟಿ.ಶೆಟ್ಟಿಗೇರಿ, ಶ್ರೀಮಂಗಲ ಮುಖ್ಯ ರಸ್ತೆಯ ಅನತಿ ದೂರದಲ್ಲಿ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿದ್ದು ಹಸುವು ಗಂಭೀರ ಸ್ವರೂಪದ ಗಾಯದಿಂದ ನರಳುತ್ತಿದೆ. ಗ್ರಾಮದ ಚಟ್ಟಂಗಡ ನಿತೇಶ್ ಬಿದ್ದಪ್ಪ ಎಂಬವರಿಗೆ ಸೇರಿದ ಹಸುವಿನ ಮೇಲೆ ಸಂಜೆಯ ವೇಳೆ ಹುಲಿ ದಾಳಿ ನಡೆಸಿದೆ. ಈ ವೇಳೆ ರಾಜಪ್ಪ, ಅಯ್ಯಮಾಡ ಹ್ಯಾರಿ, ಲೋಕೇಶ್ ಸೇರಿದಂತೆ ಹಲವು ಪ್ರಮುಖರು ರೈತನ ಮನೆಗ ಭೇಟಿ ನೀಡಿದರು.

ಸಮೀಪದ ನಾಗರಹೊಳೆ ಅರಣ್ಯ ವ್ಯಾಪ್ತಿಯಿಂದ ಹುಲಿಯು ಈ ಭಾಗದ ರೈತರ ತೋಟಗಳಿಗೆ ಆಗಮಿಸಿರ ಬಹುದೆಂದು ಅಂದಾಜಿಸಲಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೊಖಂ ಹೂಡಿದ್ದು ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಪಟ್ಟಣದ ಅನತಿ ದೂರದಲ್ಲಿ ಹುಲಿಗಳು ಮತ್ತೆ ಕಾಣಿಸಿಕೊಂಡಿರುವು ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಕಾಫಿ ಬೆಳೆಗಾರರಿಗೆ ನಿದ್ದೆ ಗೆಡಿಸಿದೆ. ರೈತ ಹಾಗೂ ಬೆಳೆಗಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ. ದ.ಕೊಡಗಿನಲ್ಲಿ ನಿರಂತರ ಹುಲಿ ದಾಳಿ ಮುಂದುವರೆಯುತ್ತಿದೆ. ಪ್ರಮುಖವಾಗಿ ರೈತರ ಜಾನುವಾರುಗಳ ಮೇಲೆ ದಾಳಿ ನಡೆಯುತ್ತಿದೆ. ಕಳೆದ ಎರಡು ತಿಂಗಳಿನಿAದ ದ.ಕೊಡಗಿನ ವಿವಿಧ ಭಾಗದಲ್ಲಿ ಜಾನುವಾರುಗಳ ಮೇಲೆ ಹುಲಿಯು ದಾಳಿ ನಡೆದಿದೆ.

ಅರಣ್ಯ ಪ್ರದೇಶದಿಂದ ಇದೀಗ ಮತ್ತೆ ನಾಡಿನತ್ತ ಹುಲಿಯು ಆಗಮಿಸುತ್ತಿದೆ. ಇದರಿಂದಾಗಿ ಬಹುತೇಕ ರೈತರ ಕಾಫಿ ತೋಟದಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿರುವು ದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ವ್ಯಾಪ್ತಿಯಿಂದ ಆಗಮಿಸಿರುವ ಹುಲಿಗಳು ದಿನನಿತ್ಯದ ಆಹಾರಕ್ಕಾಗಿ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ಎರಗುವುದು ಮಾಮೂಲಿ ಯಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಹಲವು ಹುಲಿಗಳು ರೈತರ ತೋಟಗಳತ್ತ ಹೆಜ್ಜೆ ಹಾಕುತ್ತಿದ್ದು, ಈ ವೇಳೆ ಆಹಾರಕ್ಕಾಗಿ ಜಾನುವಾರು ಗಳ ಮೇಲೆ ಎರಗುತ್ತಿರುವುದಾಗಿ ತಿಳಿದು ಬಂದಿದೆ. -ಹೆಚ್.ಕೆ. ಜಗದೀಶ್