ಮಡಿಕೇರಿ, ಮಾ, ೨೨: ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಇರ್ಪು ಜಲಪಾತ ಪ್ರವಾಸ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ತಾ.೨೪ರಂದು ನಡೆಯಲಿದೆ.
ಇರ್ಪು ಜಲಪಾತ ಬಳಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಗಾಯಕ ಹಾಗೂ ಹಿರಿಯ ವೈದ್ಯ ಡಾ. ಕಾಳಿಮಾಡ ಶಿವಪ್ಪ ಉದ್ಘಾಟಿಸುವರು. ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇರ್ಪು ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮದ್ರಿರ ಪಿ.ವಿಷ್ಣು, ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಅರವಿಂದ್, ಬೆಳೆಗಾರ ಕೆ.ಎನ್. ಸಂದೀಪ್, ಸಾಹಿತಿ ಡಾ. ಉಳುವಂಗಡ ಕಾವೇರಿ, ಕ.ಸಾ.ಪ. ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಉಪಸ್ಥಿತರಿರುವರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಕವಿಗೋಷ್ಠಿ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಮೈಸೂರು ಪೀಪಲ್ಸ್ ಪಾರ್ಕ್ ಬಾಲಕಿಯರ ಪ.ಪೂ. ಕಾಲೇಜು ಪ್ರಾಂಶುಪಾಲ ಪಿ.ಎಸ್. ಜಾನ್, ಶಿಕ್ಷಕಿ ಡಿ.ಹೆಚ್. ಪುಷ್ಪ, ಸಾಹಿತಿ ರಜಿತ ಕಾರ್ಯಪ್ಪ, ಶಿಕ್ಷಕಿ ಆಶಾ ಸೋಮವಾರಪೇಟೆ ಭಾಗವಹಿಸಲಿದ್ದಾರೆ.