ಮಡಿಕೇರಿ, ಮಾ. ೨೨: ಕುಣಿಗಲ್ ನಿವಾಸಿ, ಮದೆನಾಡು ಪಿ.ಯು ಕಾಲೇಜಿನಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಅಮೋಘ್(೨೭) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಾ.೨೧ ರಂದು ಮಡಿಕೇರಿ ನಗರದಲ್ಲಿ ಪಾರ್ಕ್ ಮಾಡಲಾಗಿದ್ದ ತಮ್ಮ ಬೈಕನ್ನೇರಲು ಹ್ಯಾಂಡಲ್ ತಿರುಗಿಸುವ ಸಂದರ್ಭದಲ್ಲಿ ಕುಸಿದ ಬಿದ್ದ ಅಮೋಘ್ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.