ಮಡಿಕೇರಿ, ಮಾ. ೨೨: ಕಾನೂನಿನ ನಿಯಮದಂತೆ ಹರಿಯುವ ನೀರು, ನಡೆಯುವ ದಾರಿಗೆ ಯಾರೂ ಕೂಡ ಅಡ್ಡಿ ಪಡಿಸಬಾರದೆಂಬದಿದೆ., ಆದರೆ., ಇಲ್ಲಿ ಕುಟುಂಬ ವೈಷಮ್ಯವನ್ನು ಮುಂದಿಟ್ಟುಕೊAಡು ಸಾರ್ವಜನಿಕರು ನಡೆದಾಡುವ ರಸ್ತೆಯನ್ನೇ ಮಣ್ಣು ಕೊರೆಯುವ ಯಂತ್ರ ಬಳಸಿ ರಾತೋರಾತ್ರಿ ಬಗೆದು ಉದ್ದಕ್ಕೂ ಗುಂಡಿ ತೋಡಿರುವ ವಿಚಿತ್ರ ಘಟನೆ ಇಲ್ಲಿಗೆ ಸಮೀಪದ ಗಾಳಿಬೀಡಿನಲ್ಲಿ ನಡೆದಿದೆ. ಕುಟುಂಬ ನಡೆಸುವ ವೆಂಕಟರಮಣ ಹರಿಸೇವೆ ನಡೆಸ ಬಾರದೆಂಬ ಕಾರಣಕ್ಕಾಗಿ ಈ ರೀತಿ ಮಾಡಿದ್ದು, ಇದೀಗ ಈ ರಸ್ತೆಯನ್ನು ಅವಲಂಬಿಸಿರುವ ಗ್ರಾಮಸ್ಥರು ಅಸಹಾಯಕರಾಗಿದ್ದಾರೆ.
ಗಾಳಿಬೀಡು ಗ್ರಾಮದಲ್ಲಿ ವಾಸ ವಿರುವ ಯಾಲದಾಳು ಕುಟುಂಬಸ್ಥರು ಗೌಡ ಜನಾಂಗದ ಸಂಪ್ರದಾಯ, ಪದ್ಧತಿಯಲ್ಲೊಂದಾಗಿರುವ ಶ್ರೀ ವೆಂಕಟರಮಣ ದೇವರ ಹರಿಸೇವೆ ಕಾರ್ಯ ಹಮ್ಮಿಕೊಂಡಿದ್ದು, ತಾ.೨೩ರಂದು (ಇಂದು) ನಡೆಯಲಿದೆ. ಆದರೆ, ಇದಕ್ಕೂ ಮುನ್ನ ಇದೇ ಕುಟುಂಬದ, ವಕೀಲರಾಗಿರುವ ಮನೋಜ್ ಬೋಪಯ್ಯ ಅವರುಗಳ ಭಾಗದವರು ಹರಿಸೇವೆ ಮಾಡಿದ್ದು, ಇದೀಗ ಕುಟುಂಬಸ್ಥರೆಲ್ಲ ಸೇರಿ ಹಮ್ಮಿಕೊಂಡಿರುವ ಹರಿಸೇವೆಗೆ ತಡೆ ಮಾಡುವ ಉದ್ದೇಶದೊಂದಿಗೆ ಈ ರೀತಿ ರಸ್ತೆಯನ್ನೇ ಬಗೆದು ಹಾಕಿದ್ದಾರೆ. ಕುಟುಂಬಸ್ಥರು ಹಮ್ಮಿಕೊಂಡಿರುವ ಹರಿಸೇವೆ ನಡೆಯುವ ಮನೆಗೆ ತೆರಳುವ ರಸ್ತೆಯನ್ನು ಸುಮಾರು ಒಂದು ಕಿ.ಮೀ. ವರೆಗೆ ಎರಡೂ ಬದಿಯಲ್ಲಿಯೂ ಬಗೆದು ವಾಹನಗಳು ಸಂಚರಿಸದAತೆ ಮಾಡಲಾಗಿದೆ. ಬುಧವಾರ ರಾತ್ರಿ ಏಕಾಏಕಿ ಎರಡು ಯಂತ್ರಗಳನ್ನು ಬಳಸಿಕೊಂಡು ರಸ್ತೆಯನ್ನು ಹಾಳುಗೆಡಹಲಾಗಿದೆ.
ಕುಟುಂಬಸ್ಥರ ದೇಣಿಗೆ
ಈ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕುಟುಂಬಸ್ಥರು ಕೂಡ ದೇಣಿಗೆ ನೀಡಿದ್ದಾರೆ. ಕುಟುಂಬದ ಏಳು ಭಾಗದವರು ತಲಾ ರೂ.೧೫ ಸಾವಿರದಂತೆ ಮನೋಜ್ ಬೊಪಯ್ಯ ಅವರಿಗೆ ನೀಡಲಾಗಿದೆ. ಇದಲ್ಲದೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯಾಲದಾಳು ಪದ್ಮಾವತಿ ಅವರು ಕೂಡ ಅನುದಾನ ಒದಗಿಸಿದ್ದು, ಅದರಲ್ಲಿ ಒಂದಿಷ್ಟು ದೂರ ಕಾಂಕ್ರಿಟ್ ರಸ್ತೆ ಕೂಡ ಮಾಡಲಾಗಿದೆ. ಆದರೆ, ಇದೀಗ ತಾನು ಮಾಡಿದ ರಸ್ತೆ ಎಂದು ಮನೋಜ್ ರಸ್ತೆಯನ್ನು ಬಗೆದು ಹಾಕಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹೇಳುತ್ತಾರೆ.
ಮಕ್ಕಳ ಪರದಾಟ
ಈ ರಸ್ತೆಯಲ್ಲಿ ಹೆಬ್ಬಟ್ಟಗೇರಿ ಗ್ರಾಮದವರು, ಗ್ರಾಮದ ಶಾಲಾ ಮಕ್ಕಳು ಕೂಡ ಸಂಚರಿಸುತ್ತಾರೆ. ಇದುವರೆಗೆ ಶಾಲಾ ವಾಹನಗಳಲ್ಲಿ ಮಕ್ಕಳು ತೆರಳುತ್ತಿದ್ದರು. ಇದೀಗ ವಾಹನಗಳು ಬರುತ್ತಿಲ್ಲ, ಪುಟಾಣಿ ಮಕ್ಕಳು ಧೂಳುಮಯ ರಸ್ತೆಯಲ್ಲಿ ನಡೆದುಕೊಂಡೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಕ್ಕಳ ಪೋಷಕರು ಬೇಸರ ವ್ಯಕ್ತಪಡಿಸಿದರು.
ರಸ್ತೆಗೆ ಹಾನಿ ಮಾಡಬಾರದು
ಸರಕಾರದ ನಿಯಮದಂತೆ ಯಾವದೇ ರಸ್ತೆಗೆ ಯಾರೂ ಕೂಡ ಹಾನಿ ಮಾಡಬಾರದು. ಆದರೆ, ಇಲ್ಲಿ ತಿಳಿದವರೇ ರಸ್ತೆಯನ್ನು ಹಾನಿ ಗೊಳಿಸಿದ್ದಾರೆ. ನಿಯಮಾನುಸಾರ ರಸ್ತೆಯನ್ನು ಹಾನಿಗೊಳಿಸಿದ ಮಣ್ಣು ಕೊರೆಯುವ ಯಂತ್ರದ ಮಾಲೀಕ ಹಾಗೂ ಚಾಲಕ ಕೂಡ ಇದರಲ್ಲಿ ಅಪರಾಧಿಯಾಗುತ್ತಾರೆ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದರು.
ಸ್ಥಳದಲ್ಲಿ ಯಾಲದಾಳು ಕುಟುಂಬದ ನಿವೃತ್ತ ಡಿವೈಎಸ್‌ಪಿ ಕೇಶವಾನಂದ, ದೇವಪ್ಪ, ಪದ್ಮಾವತಿ, ಲೀಲಾವತಿ, ಗ್ರಾ. ಪಂ. ಸದಸ್ಯ ರಾಜಶೇಖರ್, ಎನ್.ಎ.ಲವ, ನವೀನ್ ಸೇರಿದಂತೆ ಹಲವರು ಮಾಹಿತಿ ನೀಡಿದರು.ಕೇಶವಾನಂದ, ದೇವಪ್ಪ, ಪದ್ಮಾವತಿ, ಲೀಲಾವತಿ, ಗ್ರಾ. ಪಂ. ಸದಸ್ಯ ರಾಜಶೇಖರ್, ಎನ್.ಎ.ಲವ, ನವೀನ್ ಸೇರಿದಂತೆ ಹಲವರು ಮಾಹಿತಿ ನೀಡಿದರು.