ಸಿದ್ದಾಪುರ, ಮಾ. ೨೧: ಹಾಡಹಗಲೇ ಕಾಡಾನೆಯೊಂದು ಪ್ರವಾಸಿಗರ ಕಾರಿನ ಮೇಲೆ ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊAಡಿದ್ದು, ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತ್ಯಾಗತ್ತೂರು ಗ್ರಾಮದಲ್ಲಿ ಸಂಭವಿಸಿದೆ.

ಬೆAಗಳೂರಿನಿAದ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರು ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ತ್ಯಾಗತ್ತೂರುವಿನ ಮೂಲಕ ದುಬಾರೆಯತ್ತ ಕಾರಿನಲ್ಲಿ (ಕೆ.ಎ. ೦೩. ಎ.ಜಿ. ೧೪೪೬) ತೆರಳಿತ್ತಿದ್ದರು. ಈ ಸಂದರ್ಭದಲ್ಲಿ ವಾಲ್ನೂರು - ತ್ಯಾಗತ್ತೂರು ಗ್ರಾಮದ ಕಾಫಿ ತೋಟವೊಂದರಿAದ ಬೆಳಿಗ್ಗೆ ಅಂದಾಜು ೧೦.೩೩ ರ ಸಮಯಕ್ಕೆ ಕಾಡಾನೆಯೊಂದು ಮುಖ್ಯ ರಸ್ತೆಗೆ ಅಡ್ಡಲಾಗಿ ದಾಟುತ್ತಿದ್ದಾಗ ಕಾರಿನ ಮೇಲೆ ದಾಳಿ ಮಾಡಿದೆ. ಕಾರಿನ ಹಿಂಭಾಗ ಜಖಂಗೊAಡಿದೆ. ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ವಿಚಾರ ತಿಳಿದು ಸ್ಥಳಕ್ಕೆ ಕುಶಾಲನಗರದ ಮೀನುಕೊಲ್ಲಿ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಳಿ ನಡೆಸಿದ ಕಾಡಾನೆಯ ಚಲನವಲನ ಕಂಡುಹಿಡಿಯಲು ಅಗತ್ಯ ಕ್ರಮ ಕೈಗೊಳ್ಳವುದಾಗಿ ತಿಳಿಸಿದರು. ವಾಲ್ನೂರು - ತ್ಯಾಗತ್ತೂರು ಹಾಗೂ ನೆಲ್ಲಿಹುದಿಕೇರಿ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ. ಈ ಹಿಂದೆ ಕೂಡ ವಾಲ್ನೂರು ಗ್ರಾಮದಲ್ಲಿ ಹಲವಾರು ವಾಹನಗಳ ಮೇಲೆ ಸಲಗಗಳು ರಾತ್ರಿ ದಾಳಿ ನಡೆಸಿರುವ ಘಟನೆಗಳು ನಡೆದಿತ್ತು. ಇದೀಗ ಹಗಲೇ ದಾಳಿ ನಡೆಸಿದ್ದು, ಕಾರ್ಮಿಕರು ಭಯಭೀತರಾಗಿದ್ದಾರೆ. - ವಾಸು