ವೀರಾಜಪೇಟೆ, ಮಾ. ೨೧: ಚಾಣಕ್ಯ ಕೋಚಿಂಗ್ ಸೆಂಟರ್‌ನ ವತಿಯಿಂದ ತಾ.೨೩ ಹಾಗೂ ೨೪ ರಂದು ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಚಾಣಕ್ಯ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷೆ ಕವಿತಾ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ತಾ.೨೩ ರಂದು ಬೆಳಿಗ್ಗೆ ೯ಕ್ಕೆ ವೀರಾಜಪೇಟೆಯ ಜೈನರ ಬೀದಿಯಲ್ಲಿನ ಚಾಣಕ್ಯ ಕೋಚಿಂಗ್ ಸೆಂಟರ್‌ನಲ್ಲಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗುವುದು. ಮಾ.೨೩ ರಂದು ನಡೆಯುವ ಕಾರ್ಯಾಗಾರವನ್ನು ಮಂಗಳೂರಿನ ಖ್ಯಾತ ಗಣಿತ ಶಾಸ್ತçಜ್ಞ ಹಾಗೂ ಸಹ್ಯಾದ್ರಿ ಇಂಜಿನಿಯರಿAಗ್ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ರಾವ್ ನಡೆಸಿಕೊಡಲಿದ್ದಾರೆ.

ತಾ.೨೪ ರಂದು ನಡೆಯುವ ಕಾರ್ಯಾಗಾರವನ್ನು ಮೈಸೂರಿನ ಚಂದನ್ ನಡೆಸಿಕೊಡಲಿದ್ದಾರೆ. ಕಾರ್ಯಾಗಾರದ ಬಳಿಕ ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪರೀಕ್ಷಾರ್ಥಿಗಳಿಗೆ ಒಂದು ತಿಂಗಳ ಅವಧಿಯ ತರಬೇತಿ ಕಾರ್ಯಕ್ರಮ ನಡೆಯಲಿದೆ. ನೋಂದಣಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ದೂ.ಸಂ: ೮೨೭೭೪೯೬೦೦೭ ಹಾಗೂ ೯೪೮೦೦೮೫೫೪೧ ಅನ್ನು ಸಂಪರ್ಕಿಸುವAತೆ ಅವರು ತಿಳಿಸಿದ್ದಾರೆ.