ಇಂದು ವಿಶ್ವ ಜಲ ದಿನ

‘ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇ ಯಸ್ಮಿನ್ ಸನ್ನಿಧಿಂ ಕುರು’ ಇದು ಸಪ್ತ ನದಿಗಳ ಕುರಿತು ಇರುವ ಜಲ ಮಂತ್ರ.

ಹಿಮಾಲಯದ ನೆತ್ತಿಯಿಂದ ಮಂಜು ಹನಿ ಕರಗಿ ನೀರಾಗಿ ಹರಿದು ಬರುವಾಗ ಗಿಡಮೂಲಿಕೆಗಳ ಬೇರುಗಳ ರಸವನ್ನು ತನ್ನೊಂದಿಗೆ ಔಷಧೀಯ ರೂಪದಲ್ಲಿ ಭೂಮಿಗೆ ಹೊತ್ತು ತರುತ್ತದೆ. ಆದರೆ ಭೂಮಿಗೆ ಬಿದ್ದ ನಂತರ ಅದು ಮನುಷ್ಯನ ಕೈ ಸೇರಿ ಹೊಲಸಾಗುತ್ತದೆ. ಪ್ರಕೃತಿಯ ಅತಿ ಅದ್ಭುತಗಳಲ್ಲಿ ನೀರು ಒಂದು. ಆಕೆ ಶುಭ್ರ ಸುಂದರಿ. ಭೂಮಿಯ ಮೇಲಿನ ಅತ್ಯಮೂಲ್ಯ ಸಂಪನ್ಮೂಲ.

ಕ್ಷಣ ಕುಳಿತು ಅದ ನೋಡಿದರೆ ಆಕಾಶದಿಂದ ಬೀಳುವ ಆ ಸೌಂದರ್ಯ ಅದು ದೇವಲೋಕದ ದೇವಗಂಗೆ ಅಲ್ಲವೇ ? ಆ ನೀರನ್ನು ನಾವು ನಮ್ಮ ಉಪಯೋಗಕ್ಕೆ ಬಳಸಿಕೊಳ್ಳುವುದು ಒಂದು ತರದ ರೋಮಾಂಚನವನ್ನು ಉಂಟುಮಾಡುತ್ತದೆ. ಇದು ಸಂಜೀವಿನಿಯಾಗಿದ್ದು ಇದನ್ನು ನಾವು "ಜೀವದ ಹನಿ"ಯಾಗಿ ಸ್ವೀಕರಿಸಿ ಸಂರಕ್ಷಿಸಿಕೊಳ್ಳಬೇಕು. ನಮಗೂ ಮುಂದಿನ ಪೀಳಿಗೆಗೂ ಇದು ಅಮೃತವೇ ಸರಿ. ಭಗೀರಥನ ಪ್ರಯತ್ನದಿಂದ ಶಿವನ ಜಟೆಯ ಮೂಲಕ ಭೂಮಿಗಿಳಿದು ಬಂದ ಪವಿತ್ರ ಗಂಗೆ. ಗುಪ್ತಗಾಮಿನಿ ಕವೇರ ಮುನಿಯ ಮಗಳು ಕಾವೇರಿ ನಮ್ಮನ್ನು ಪಾವನಗೊಳಿಸಿ ಹಸಿರ ಜೊತೆ ಅನ್ನ ನೀಡುವ ಭಾಗ್ಯ ದೇವತೆ.

ರಾಮಾಯಣ-ಮಹಾಭಾರತದ ಕಾಲದಿಂದಲೂ ನೀರಿನ ಮಹತ್ವವನ್ನು ಕಾಣುತ್ತೇವೆ. ಸೀತೆ ವನವಾಸದ ಸಂದರ್ಭದಲ್ಲಿ ಬಾಯಾರಿ ನಡೆಯಲಾಗದೆ ರಾಮ-ಲಕ್ಷö್ಮಣರಲ್ಲಿ ನೀರನ್ನು ಕೇಳಿದಾಗ ಅವರು ಬಾಣ ಬಿಟ್ಟು ನೀರನ್ನು ಚಿಮ್ಮುವಂತೆ ಮಾಡಿದ್ದು, ಅದು ಈಗಲೂ ರಾಮತೀರ್ಥ-ಲಕ್ಷö್ಮಣತೀರ್ಥ ಎಂಬ ಹೆಸರಿನಲ್ಲಿ ನಮ್ಮ ಮುಂದಿರುವುದನ್ನು ಕಾಣುತ್ತೇವೆ. ದುರ್ಯೋಧನನು ೧೭ ದಿನಗಳ ಕುರುಕ್ಷೇತ್ರ ಯುದ್ಧದ ನಂತರ ವೈಶಂಪಾಯನ ಸರೋವರದಲ್ಲಿ ಬಚ್ಚಿಟ್ಟುಕೊಳ್ಳಲು ಬಂದಾಗ ನೀರನ್ನು ಕುಡಿದು ಜಲಮಂತ್ರವನ್ನು ಪಠಿಸಿದ್ದನು. ಜನಪದರಲ್ಲಿ ಕೆರೆಗೆ ಹಾರ ಕಥೆಯನ್ನು ನಾವು ಕೇಳಿ ಬೆಳೆದಿಲ್ಲವೇ ?

ನಮ್ಮ ಪೂರ್ವಜರು ಹೊಳೆ ಕೆರೆಗಳಲ್ಲಿ ಕೈಕಾಲು ತೊಳೆದು ಮನಸೋ ಇಚ್ಛೆ ಬೊಗಸೆ ನೀರು ಕುಡಿಯುತ್ತಿದ್ದರು. ನಂತರ ನಮ್ಮ ತಂದೆ-ತಾಯಿಯರ ಕಾಲದಲ್ಲಿ ಬಾವಿಯಿಂದ ನೀರನ್ನು ತರುವುದು ಬೇಸಿಗೆ ಕಾಲದಲ್ಲಿ ಕಿಲೋಮಿಟರ್ ದೂರದ ಕೆರೆ, ನೆಲ ಬಾವಿಗಳಿಂದ ಹೊತ್ತು ತರುವುದು, ತದನಂತರ ಬೋರ್ವೆಲ್ ನೀರನ್ನು ಬೊಗಸೆಯಲ್ಲಿ ಕುಡಿಯುವುದು ಕಂಡುಬAದಿತು. ಅಲ್ಲಿಂದ ಮಕ್ಕಳು ಬಿಸಿಲರಿ ಬಾಟಲ್‌ಗಳಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದು ಕಂಡುಬAದಿದೆ. ದಿನ ಕಳೆದಂತೆ ಬಾಟಲು ಹಾಗೂ ನೀರು ಎರಡು ವಿಷಯವಾಗಿ ಕಣ್ಣಮುಂದೆ ಅಂತರ್ಜಲ ಬತ್ತಿ ಮರುಭೂಮಿಯಂತೆ ನೆಲ ಒಣಗಿ ಬಾಯಿಬಿಡುತ್ತಾ ಜನ ನೀರಿಗಾಗಿ ಪರಿತಪಿಸುತ್ತಾ ನಾಲ್ಕು ಹನಿ ನೀರಿಗಾಗಿ ರಸ್ತೆ ಬದಿ ನಿಂತು ಯುದ್ಧ ಮಾಡುವಂತಹ ಭೀಕರ ಪರಿಸ್ಥಿತಿ ಮುಂದಿನ ದಿನಗಳಿಗೆ ಕಾದಿದೆಯೇ ಎಂಬ ಆತಂಕ ಎದುರಾಗಿದೆ.

ಹಿಂದಿನ ಕಾಲದಲ್ಲಿ ನೀರು ಬೇಕೆಂದಾಗ ಅಲ್ಲಲ್ಲೇ ಸಿಗುತ್ತಿತ್ತು. ಕಾಲ್ನಡಿಗೆಯಲ್ಲಿ ಹೋಗುವಾಗ ಕೆರೆ, ಕಾಲುವೆ, ನೆಲಬಾವಿ, ಹೊಳೆಗಳಲ್ಲಿ ಬೊಗಸೆ ತುಂಬಾ ನೀರನ್ನು ಕುಡಿದು ಆಯಾಸವನ್ನು ಪರಿಹರಿಸಿಕೊಂಡು ಮುಂದೆ ಹೋಗುತ್ತಿದ್ದರು. ದಿನ ಕಳೆದಂತೆ ಕೆರೆ ಬಾವಿಗಳಿಗೆ ಸಿಮೆಂಟ್ ಗೋಡೆಗಳ ಪ್ರವೇಶವಾಗಿ ನೀರು ಕ್ರಮೇಣವಾಗಿ ಕ್ಷೀಣಿಸಲು ಪ್ರಾರಂಭಿಸಿತು. ಹಲವಾರು ಕೆರೆಗಳು ಮುಚ್ಚಿ ಹೋದವು. ಕೆರೆಗಳ ಒಳಗೆ ತ್ಯಾಜ್ಯವನ್ನು ಎಸೆಯುವುದರ ಮೂಲಕ ಅದನ್ನು ಇನ್ನಷ್ಟು ಮಲೀನ ಮಾಡಿದೆವು. ಮೀನು ಹಿಡಿಯುವುದಕೋಸ್ಕರ ಕೆರೆಗಳಿಗೆ ವಿಷವನ್ನು ಹಾಕಿ ದಾರಿಹೋಕರು ಆ ನೀರನ್ನು ಕುಡಿಯದಂತೆ ನಾವೇ ಮಾಡಿದೆವು. ನಾವು ಪ್ರಕೃತಿಯ ವಿರುದ್ಧ ನಡೆದಾಗ ಅದು ನಮಗೆ ಹೇಗೆ ಪಾಠವನ್ನು ಕಲಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ ಎಂದರೆ ನೀರಿನ ಸಂರಕ್ಷಣೆ ಮಾಡಿಕೊಳ್ಳದೆ ಇರುವುದು. ಯಾವಾಗ ಭತ್ತದ ಗದ್ದೆಗಳಲ್ಲಿ ಶುಂಠಿ ಆವರಿಸಿತೋ, ಭತ್ತದ ಗದ್ದೆಗಳು ಯಾವಾಗ ಒಣಗಲು ಪ್ರಾರಂಭಿಸಿದವೋ, ಆಗ ಅಂತರ್ಜಲದ ಕುಗ್ಗುವಿಕೆ ಪ್ರಾರಂಭವಾಯಿತು. ಅಲ್ಲಲ್ಲಿ ಬೋರ್ವೆಲ್‌ಗಳ ಹೆಚ್ಚಳದಿಂದ ಅಂತರ್ಜಲ ಮತ್ತಷ್ಟು ಕುಸಿಯಿತು. ಮನೆ ಮುಂದೆ ಮಣ್ಣು ಹೋಗಿ ಇಂಟರ್‌ಲಾಕ್, ಕಾಂಕ್ರೀಟ್ ಆವರಿಸಿತೋ ಅಂದೇ ಬಾವಿಯಲ್ಲಿ ನೀರಿನ ಸೆಲೆ ಕುಗ್ಗಿತು. ಇದು ಒಂದು ಕಡೆಯಾದರೆ...

ಮನೆಯ ಒಳಗಡೆ ನೀರಿಗೂ ನೀರೆಗೂ ಅವಿನಾಭಾವ ಸಂಬAಧ. ರವಿ ಮೂಡುವುದಕ್ಕೂ ಮೊದಲು ಮನೆಯೇ ಮುಂದೆ ಗುಡಿಸಿ ನೀರು ಹಾಕಿ ಹೊಸ್ತಿಲು ತೊಳೆಯುವುದರೊಂದಿಗೆ ನೀರಿನೊಂದಿಗೆ ಬಾಂಧವ್ಯ ಪ್ರಾರಂಭವಾಗುತ್ತದೆ. "ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು" ಎನ್ನುವಂತೆ ನೀರಿನ ಉಳಿತಾಯದ ಮೂಲ ಬೇರು ಇರುವುದು ಮನೆಯಲ್ಲಿಯೇ. ಅದರಲ್ಲೂ ಅದು ಅಡುಗೆ ಮನೆಯಿಂದಲೇ ಆರಂಭವಾಗಬೇಕು. ನಾಳೆಗಳಿಗಾಗಿ ಜಲ ಸಂರಕ್ಷಣೆಯನ್ನು ಮಾಡಬೇಕಾಗಿದೆ.

ನೀರಿನ ಮಿತ ಬಳಕೆ ಹೇಗೆ ?

ಹೂವಿನ ಕುಂಡಗಳಲ್ಲಿ ಇರುವ ಮಣ್ಣಿಗೆ ಎಷ್ಟು ನೀರಿನ ಅವಶ್ಯಕತೆ ಇದೆಯೋ ಅಷ್ಟು ನೀರನ್ನು ಮಾತ್ರ ಹಾಕುವುದರಲ್ಲಿ ಜಾಗೃತಿ ವಹಿಸುವುದು. ಕುಂಡದ ತಳಭಾಗದಲ್ಲಿರುವ ರಂಧ್ರವನ್ನು ತಾತ್ಕಾಲಿಕವಾಗಿ (ಬೇಸಿಗೆ ಕಳೆಯುವವರೆಗೆ) ಮುಚ್ಚಿ ಮಣ್ಣಿನ ತಟ್ಟೆಗಳನ್ನು ಇಡುವುದು. ನರ್ಸರಿ ಗಿಡಗಳಿದ್ದರೆ ಅವುಗಳನ್ನು ಬಾಳೆಗಿಡದ ಬುಡದಲ್ಲಿ ಅಥವಾ ಮರದ ನೆರಳಿನಲ್ಲಿ ಇಡುವುದು. ಹೂವಿನ ಗಿಡಗಳ, ತರಕಾರಿ ಗಿಡಗಳ ಬುಡಕ್ಕೆ ತರಗೆಲೆಗಳನ್ನು ಹಾಕಿ ನೀರಿನ ಪಸೆ ಇರುವಂತೆ ನೋಡಿಕೊಳ್ಳುವುದು.

ನೆಲ ಒರೆಸಿದ ಹಾಗೂ ಬಟ್ಟೆ ಒಗೆದ ನೀರನ್ನು ದೊಡ್ಡ ದೊಡ್ಡ ಮರಗಳ ಬುಡಕ್ಕೆ, ಬೇಲಿಗೆ, ಮನೆಯ ಸುತ್ತಲೆಲ್ಲಾದರೂ ಮಣ್ಣಿನ ಮೇಲೆ, ಹಟ್ಟಿಯಲ್ಲಿ ಅಥವಾ ಗೇಟ್ ಬಳಿ ಹಾಕುವುದು. ತರಕಾರಿ-ಸೊಪ್ಪು ತೊಳೆಯುವಾಗ ಹರಿಯುವ ನೀರಿನಲ್ಲಿ ತೊಳೆಯದೆ ಪಾತ್ರೆಯಲ್ಲಿ ನೀರು ಸಂಗ್ರಹಿಸಿ ತೊಳೆದು ಆ ನೀರನ್ನು ಹೂವಿನ ಕುಂಡಗಳಿಗೆ ಮರುಬಳಕೆ ಮಾಡಬಹುದು. ಅಡುಗೆ ಮನೆಯಲ್ಲಿ ಒಂದು ಬಕೆಟ್ ಇಡುವುದು ವ್ಯರ್ಥವಾಗಿ ಚೆಲ್ಲುವ ನೀರನ್ನು ಬಕೆಟ್‌ನಲ್ಲಿ ಸಂಗ್ರಹಿಸುವುದು. ಉದಾ: ಸಣ್ಣ ಮಕ್ಕಳು ಅರ್ಧ ಕುಡಿದು ಇಟ್ಟ ನೀರು, ಶಾಲೆಗೆ ಕೊಂಡೊಯ್ದಿದ್ದ ಬಾಟಲಿಯಲ್ಲಿ ಮಿಕ್ಕಿದ ನೀರು, ಅಡುಗೆಯ ಅಳತೆಯಿಂದ ಹೆಚ್ಚಾದ ನೀರು.

ಮನೆಯ ಸಿಂಕ್‌ಗಳ ಬಳಿ ಅಡುಗೆ ಕೋಣೆಯಲ್ಲಿ, ಸ್ನಾನದ ಗೃಹದಲ್ಲಿ, ಎಲ್ಲಾ ನಲ್ಲಿಗಳ ಬಳಿ ನೀರನ್ನು ಮಿತವಾಗಿ ಬಳಸಲು "ನೀರು ಉಳಿಸಿ" ಮತ್ತು "sಚಿve ತಿಚಿಣeಡಿ" ಎಂದು ಮಕ್ಕಳ ಕೈಯಿಂದ ಬೋರ್ಡನ್ನು ಬರೆಸಿ ಹಾಕಿಸುವುದು. ಮಕ್ಕಳೇ ಬರೆಯುವುದರಿಂದ ಅವರಿಗೂ ಹೆಚ್ಚು ಜವಾಬ್ದಾರಿ ಬರುತ್ತದೆ. ಕಾರು ತೊಳೆಯುವಾಗ ಕನಿಷ್ಟ ನೀರಿನಲ್ಲಿ ತೊಳೆಯುವಂತೆ ಆ ನೀರು ಗಿಡ-ಮರಗಳಿಗೆ ಅಥವಾ ಉದ್ಯಾನವನಕ್ಕೆ ಹೋಗುವಂತೆ ಎಚ್ಚರಿಕೆವಹಿಸುವುದು. ಅಡುಗೆ ಮನೆಯ ಪಾತ್ರೆಗಳನ್ನು ತೊಳೆಯುವಾಗ ಹೆಚ್ಚು ಪಾತ್ರೆಗಳನ್ನು ಒಟ್ಟಿಗೆ ತೊಳೆಯುವುದು. ಉದ್ಯಾನವನಗಳಿಗೆ ನೀರನ್ನು ಹಾಕುವಾಗ ಪೈಪನ್ನು ಉಪಯೋಗಿಸದೆ ಕ್ಯಾನ್‌ನಲ್ಲಿ ಮಿತವಾಗಿ ಹಾಕುವುದರಿಂದ ಅತಿ ಹೆಚ್ಚು ನೀರಿನ ಉಳಿತಾಯವಾಗುತ್ತದೆ. ಕಡಿಮೆ ನೀರು ಬೇಕಾಗಿರುವ ಗಿಡಗಳನ್ನು ಬೆಳೆಸುವುದು. ಉದ್ಯಾನವನದ ಸ್ಪಿçಂಕ್ಲರ್‌ನ ಕೆಳಗೆ ಮಕ್ಕಳು ಆಟವಾಡದಂತೆ ತಡೆಯುವುದು. ಫ್ರೀಜರ್‌ನ ಐಸ್ ಚೂರುಗಳನ್ನು ಸಂಗ್ರಹಿಸಿ ಅದು ಕರಗಿದ ನಂತರ ಆ ನೀರನ್ನು ಗಿಡಗಳಿಗೆ ಉಪಯೋಗಿಸಬಹುದು.

ಪಟ್ಟಣಗಳಲ್ಲಿ ಮನೆಯ ಮುಂದೆ ಬಿಂದಿಗೆ ಗಟ್ಟಲೆ ನೀರನ್ನು ಚೆಲ್ಲುವುದನ್ನು ಸ್ವತ: ತಾವೇ ಕಡಿಮೆ ಮಾಡಿಕೊಳ್ಳುವುದು. ಕೆಲವೊಮ್ಮೆ ನಮ್ಮ ಮರೆವು ಕೂಡ ನೀರು ಪೋಲಾಗುವಂತೆ ಮಾಡುತ್ತದೆ. ಬಕೆಟ್‌ಗಳಿಗೆ ನೀರನ್ನು ಬಿಟ್ಟು ಬೇರೆ ಕೆಲಸಕ್ಕೆ ಅತ್ತ ಇತ್ತಾ ಬಂದಾಗ ಮರೆತು ನೀರು ಪೋಲಾಗುತ್ತದೆ. ಮನೆಯಲ್ಲಿ ಹಲ್ಲುಜ್ಜಿ ಮುಗಿಯುವವರೆಗೂ ನೀರು ಪೋಲಾಗಿ ಹೋಗುವುದನ್ನು ಮೊದಲು ತಡೆಗಟ್ಟಬೇಕಿದೆ. ಸಂಪುಗಳಲ್ಲಿ ನೀರು ತುಂಬಿ ಹರಿದು ಹೋಗದಂತೆ ನೋಡಿಕೊಳ್ಳಬೇಕು. ಸಿಂಟೆಕ್ಸ್ ತುಂಬಿ ನೀರು ವ್ಯರ್ಥವಾಗಿ ಹೋಗುತ್ತಿರುತ್ತದೆ. ಆ ಸ್ಥಳಕ್ಕೆ ಬಕೆಟ್ ಇಟ್ಟು ಎರಡು ಬಿಂದಿಗೆ ನೀರು ಸಂಗ್ರಹಿಸಬಹುದು. ಮಳೆಗಾಲದಲ್ಲಿ ಟ್ಯಾಂಕುಗಳ ಮೂಲಕ ಹೆಚ್ಚು ನೀರನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರೆ ಬೇಸಿಗೆ ಕಾಲದಲ್ಲಿ ಗಿಡಗಳಿಗೆ ಮನೆ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಬೇಸಿಗೆಯ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬೀಳುವ ಮಳೆಯ ನೀರನ್ನು ಸಂಗ್ರಹಿಸಿಕೊAಡರೆ ಬೇಸಿಗೆಯ ಕಾಲದಲ್ಲಿ ಆ ನೀರನ್ನು ಗಿಡಗಳಿಗೆ, ತರಕಾರಿ ಗಿಡಕ್ಕೆ, ನೆಲ ಒರೆಸಲು, ಕಾರು ತೊಳೆಯಲು, ತಿಂಗಳುಗಟ್ಟಲೆ ಉಪಯೋಗಿಸಬಹುದು. ಲೀಕಾಗುವ ನಲ್ಲಿಗಳನ್ನು ಸರಿಪಡಿಸಿಕೊಳ್ಳುವುದು. ಮನೆ ನಿರ್ಮಾಣ ಮಾಡುವಾಗಲೇ ಇಂಗು ಗುಂಡಿಗಳನ್ನು ನಿರ್ಮಿಸಲು ಆಸಕ್ತಿ ವಹಿಸುವುದು.

ಕಾರ್ಪೊರೇಷನ್ ನೀರು ಬಂದಾಗ ಅವಶ್ಯವಿದ್ದಷ್ಟು ತುಂಬಿಸಿಕೊAಡು ಕೂಡಲೇ ಬಂದ್ ಮಾಡುವುದು. ದೊಡ್ಡ ದೊಡ್ಡ ಉದ್ಯಾನವನ ಹೊಂದಿದವರು ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುವುದು. ಶೌಚಾಲಯಗಳಿಗೆ ಗುಣಮಟ್ಟದ ಫ್ಲಶ್‌ಅನ್ನು ಉಪಯೋಗಿಸುವುದು.

ಪಕ್ಷಿ ಸಂಕುಲ ರಕ್ಷಣೆ

ಹಾಗೆಯೇ ಮನೆಯ ಸುತ್ತಮುತ್ತಲಿರುವ ಪಕ್ಷಿಗಳಿಗಾಗಿ ಮನೆಯ ಮೇಲೆ, ಮನೆಯ ಹಿಂದೆ-ಮುAದೆ ಗಿಡಗಳ ಪೊದೆಗಳಲ್ಲಿ ಹೆಚ್ಚು ನೀರನ್ನು ಬಕೆಟ್‌ಗಳಲ್ಲಿ ಇಡುವುದು. ಅವು ಕುಡಿಯುವುದರೊಂದಿಗೆ ಆ ನೀರಿನಲ್ಲಿ ಸ್ನಾನವನ್ನು ಮಾಡುತ್ತವೆ. ಅಕ್ಕಿ, ಹಣ್ಣು, ಮೊಳಕೆ ಕಾಳುಗಳನ್ನು ಮನೆಯ ಬಳಿ ನೆರಳಿನಲ್ಲಿ ಅಲ್ಲಲ್ಲಿ ಇಡುವುದು. ಗ್ರಾಮಗಳಲ್ಲಿ ದೂರದ ಸ್ಥಳಗಳಿಂದ ಕಾಲುನಡಿಗೆಯಲ್ಲಿ ನಡೆದು ಬರುವ ಜನರಿಗಾಗಿ ಅಲ್ಲಲ್ಲಿ ಇರುವ ಮನೆಗಳವರು ಕುಡಿಯುವ ನೀರನ್ನು ಇಟ್ಟು ಸಹಕರಿಸಬಹುದು.

ಅಂತರ್ಜಲ ಹೆಚ್ಚಿಸಲು ಕ್ರಮ

ಇಂಗು ಗುಂಡಿಗಳನ್ನು ತೆಗೆದು ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸುವುದು, ಮುಚ್ಚಿ ಹೋಗಿರುವ ಕೆರೆಗಳನ್ನು ಹೂಳೆತ್ತುವ ಕಾರ್ಯದಿಂದ ಸರಿಪಡಿಸಿ ಆದಷ್ಟು ನೀರು ಮಳೆಗಾಲದಲ್ಲಿ ಭೂಮಿಯಲ್ಲಿ ಇಂಗುವAತೆ ಮಾಡುವುದು. ಬಾವಿಗಳ ಬಳಿಯಲ್ಲಿ ಬೋರ್ವೆಲ್‌ಗಳ ಬಳಿ ಮಳೆ ಕೊಯ್ಲು ಮಾಡಿ ಮನೆ ಸುತ್ತಮುತ್ತಲ ನೀರು ಆ ಇಂಗುಗುAಡಿಗೆ ಹೋಗುವಂತೆ ಮುತುವರ್ಜಿ ವಹಿಸುವುದು. ಬಚ್ಚಲು ಮನೆಯ ಹಾಗೂ ಅಡುಗೆ ಮನೆ ನೀರು ಕಾಂಕ್ರೀಟ್ ಗುಂಡಿಯೊಳಗೆ ಹೋಗದಂತೆ ಬಾಳೆ ಗಿಡಕ್ಕೋ, ಕೈತೋಟದ ಒಳಗಡೆಯೋ ಹೋಗುವಂತೆ ನೋಡಿಕೊಳ್ಳುವುದು. ಗದ್ದೆಗಳ ಬಳಿ ನೆಲಬಾವಿಗಳನ್ನು ತೋಡಿಸುವುದು. ನೀರು ಸರಬರಾಜು ಮಾಡುವ ಪಟ್ಟಣದ ದೊಡ್ಡ ದೊಡ್ಡ ಟ್ಯಾಂಕ್‌ಗಳಲ್ಲಿ ನೀರು ಪೋಲಾಗದಂತೆ ಅತಿ ಎಚ್ಚರ ವಹಿಸುವುದು. ಶಾಲಾ, ಕಾಲೇಜುಗಳಲ್ಲಿ, ಮಕ್ಕಳಿಗೆ, ಅನಕ್ಷರಸ್ಥರಿಗೆ, ಮನೆಗೆಲಸದ ಮಹಿಳೆಯರಿಗೆ, ಜಾಗೃತಿ ಮೂಡಿಸುವುದು. ಈ ಎಲ್ಲದಕ್ಕಿಂತ ಹೆಚ್ಚಾಗಿ ವಿದ್ಯಾವಂತರಿಗೆ ಹೆಚ್ಚು ಮಾರ್ಗದರ್ಶನ ಬೇಕಾಗಿದೆ ಎಂದು ಕೆಲವೊಮ್ಮೆ ಅನ್ನಿಸಿಬಿಡುತ್ತದೆ. ಇನ್ನಾದರೂ ಜಲ ಸಂರಕ್ಷಣೆಯೊAದಿಗೆ ಪ್ರಬುದ್ಧರಾಗಿ ಆಲೋಚಿಸೋಣ. ನೀರಿನ ಉಳಿತಾಯ ಮತ್ತು ಮಿತ ಬಳಕೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಾವು ನೀರಿನ ಬಳಕೆ ಕಡಿಮೆ ಮಾಡಿದಷ್ಟು ಪರಿಸರದಲ್ಲಿ ನೀರಿನ ಉಳಿತಾಯವಾಗುತ್ತದೆ. ಅದು ಸಸ್ಯ, ಜಲಚರಗಳಿಗೆ ಮತ್ತು ಪ್ರಾಣಿಗಳಿಗೆ ಸಹಕಾರಿಯಾಗುತ್ತದೆ. ಇದು ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಮಹತ್ವದ್ದಾಗಿದೆ.

ಕೊನೆ ಹನಿ: ಮಳೆ ಬಾರದಕ್ಕೆ, ನೀರು ಬತ್ತಿ ಹೋದದ್ದಕ್ಕೆ ದೇವರ ಮುನಿಸೇ ಕಾರಣ ಎಂದು ತಿಳಿದ ಜನರು ಊರ ಮುಂದಿನ ದೊಡ್ಡ ಮರಗಳನ್ನು ಕಡಿದು ದೇವಾಲಯ ನಿರ್ಮಿಸಿದರಂತೆ...!

? ಎಸ್.ಎಂ. ರಜನಿ, ಸಹಾಯಕ ಪ್ರಾಧ್ಯಾಪಕರು,

ಕಾವೇರಿ ಕಾಲೇಜು, ಗೋಣಿಕೊಪ್ಪಲು.