ಮಡಿಕೇರಿ, ಮಾ. ೨೦: ಸೋಮವಾರಪೇಟೆ ತಾಲೂಕಿನ ವಾಲ್ನೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಸಿದ್ಧೇಶ್ವರ ಸ್ವಾಮಿ ಹಾಗೂ ಶ್ರೀ ರಾಮ ದೇವರ ವಾರ್ಷಿಕ ಉತ್ಸವ ತಾ. ೨೪ ರಿಂದ ೨೬ ರವರೆಗೆ ನಡೆಯಲಿದೆ.
ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ತಾ. ೨೪ ರಂದು ರಾತ್ರಿ ೮ ಗಂಟೆಗೆ ಕದಳಿ ಕಟ್ಟುವುದು, ತಾ. ೨೫ ರಂದು ಮಧ್ಯಾಹ್ನ ೧೨ ಗಂಟೆಗೆ ಶ್ರೀ ಮಾದೇಶ್ವರ ಸ್ವಾಮಿ ಪರ್ವ, ಮಧ್ಯಾಹ್ನ ೩ ಗಂಟೆಗೆ ತೆಂಗಿನಕಾಯಿಗೆ ಗುಂಡು ಹಾರಿಸುವುದು, ಸಂಜೆ ೫ ಗಂಟೆಗೆ ಮಹಾಪೂಜೆ, ಮಂಗಳಾರತಿ, ಸಂಜೆ ೬ ಗಂಟೆಗೆ ಉತ್ಸವಮೂರ್ತಿ ಬಸವಣ್ಣ ದೇವರ ಮೆರವಣಿಗೆ ನಡೆಯಲಿದೆ.
ತಾ. ೨೬ ರಂದು ಮಧ್ಯಾಹ್ನ ೧೨ ಗಂಟೆಗೆ ಸಾಮೂಹಿಕ ಭೋಜನದ ಪ್ರಸಾದ, ಸಂಜೆ ೪.೩೦ ಗಂಟೆಗೆ ಕೊಂಡ ಹಾಯುವುದು, ಸಂಜೆ ೫ ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ತಿಳಿಸಿದ್ದಾರೆ.