ಸೋಮವಾರಪೇಟೆ, ಮಾ. ೨೦: ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ಏ. ೧೭ ರಂದು ಅದ್ದೂರಿ ರಾಮನವಮಿ ಉತ್ಸವ ಆಯೋಜಿಸಲಾಗಿದೆ. ಈ ಪ್ರಯುಕ್ತ ಏ. ೯ ರಿಂದ ದೇವಾಲಯದಲ್ಲಿ ಪ್ರತಿದಿನ ವಿಶೇಷ ಪೂಜೆಗಳು ನಡೆಯಲಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್ ತಿಳಿಸಿದ್ದಾರೆ.
ರಾಮನವಮಿ ಅಂಗವಾಗಿ ಏ. ೯ ರಿಂದ ೧೭ ರವರೆಗೆ ಪ್ರತಿದಿನ ಬೆಳಿಗ್ಗೆ ೬ ರಿಂದ ೮, ಸಂಜೆ ೬ ರಿಂದ ೮ ರವರೆಗೆ ವಿಶೇಷ ಪೂಜೆ, ಏ. ೯ ರಂದು ಆಂಜನೇಯ ದೇವರಿಗೆ ಗಂಧದ ಅಲಂಕಾರ, ಏ. ೧೦ ರಂದು ವೀಳ್ಯದೆಲೆ ಅಲಂಕಾರ, ಏ. ೧೧ ರಂದು ಬೆಣ್ಣೆ ಅಲಂಕಾರ, ಏ. ೧೨ ರಂದು ಕೇಸರಿ ಅಲಂಕಾರ, ಏ. ೧೩ ರಂದು ಧಾನ್ಯ, ಏ. ೧೪ ರಂದು ತುಳಸಿ, ಏ. ೧೫ ರಂದು ಒಣಹಣ್ಣಿನ ಅಲಂಕಾರ, ಏ. ೧೬ರಂದು ವಸ್ತಾçಲಂಕಾರ, ಏ. ೧೭ ರಂದು ನಾಣ್ಯದ ಅಲಂಕಾರ ನಡೆಯಲಿದೆ. ಏ. ೧೭ ರಂದು ಸಂಜೆ ೬ ಗಂಟೆಯಿAದ ರಾಮಾಂಜನೇಯೋತ್ಸವ ನಡೆಯಲಿದ್ದು, ಉತ್ಸವ ಮೂರ್ತಿಯನ್ನು ದೀಪಾ ಲಂಕಾರ, ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ಗೋಪಾಲ್ ಮಾಹಿತಿ ನೀಡಿದ್ದಾರೆ.