ಚೆಯ್ಯAಡಾಣೆ, ಮಾ. ೨೦: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಶಜಾಪುರ್ ಮೂಲದ ಮನೀಶ್ ಮಾಲ್ವಿಯ (೨೬) ಬಂದಿತ ಆರೋಪಿ. ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟವೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ದಂಪತಿಯ ಪುತ್ರಿ ೧೩ ವರ್ಷದ ಬಾಲಕಿಯನ್ನು ಲೈನ್ ಮನೆಯ ಪಕ್ಕದ ರೂಮಿನಲ್ಲಿ ವಾಸವಾಗಿದ್ದ ಆರೋಪಿ ಮನೀಶ್ ಎಂಬಾತ ರಾತ್ರಿ ಸಮಯ ಬಾಲಕಿಯ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ ಸಂದರ್ಭ ಪುಸಲಾಯಿಸಿ ತನ್ನ ರೂಮಿಗೆ ಕರೆದೊಯ್ದು ಕೃತ್ಯ ಎಸಗಿದ್ದಾನೆ. ಬಳಿಕ ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಸುಮ್ಮನೆ ಬಿಡುವುದಿಲ್ಲವೆಂದು ಬಾಲಕಿಯನ್ನು ಬೆದರಿಸಿ ಕಳುಹಿಸಿದ್ದಾನೆ.

ಕೃತ್ಯ ನಡೆದ ಮರುದಿನ ಬೆಳಿಗ್ಗೆ ಬಾಲಕಿಗೆ ಹೊಟ್ಟೆನೋವು, ವಾಂತಿ, ರಕ್ತಸ್ರಾವ ಕಾಣಿಸಿಕೊಂಡಿದೆ. ಪೋಷಕರು ಮಗಳು ಋತುಮತಿ ಆಗಿರಬಹುದೆಂದು ಭಾವಿಸಿ ನಾಪೋಕ್ಲುವಿನಿಂದ ಔಷಧಿಯನ್ನು ತಂದು ನೀಡಿದ್ದಾರೆ. ಆರೋಪಿ ಬೆದರಿಕೆ ಒಡ್ಡಿದ್ದರಿಂದ ನಡೆದ ಕೃತ್ಯವನ್ನು ಬಾಲಕಿ ಪೋಷಕರಿಗೆ ಹೇಳದೇ ಮುಚ್ಚಿಟ್ಟಿದ್ದಾಳೆ. ಮರುದಿನವು ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿAದ ಅನುಮಾನಗೊಂಡ ಪೋಷಕರು ಪಕ್ಕದ ಮನೆಯ ಮಹಿಳೆಯೊಬ್ಬರಿಂದ ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ ನಡೆದ ಕೃತ್ಯದ ಬಗ್ಗೆ ಬಾಲಕಿ ತಿಳಿಸಿದ್ದಾಳೆ.

ಘಟನೆ ಗೊತ್ತಾಗುತ್ತಿದ್ದಂತೆ ಆರೋಪಿ ಮನೀಶ್ ಎಂಬಾತ ಅಷ್ಟರಲ್ಲೇ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ತೋಟದ ಮ್ಯಾನೇಜರ್ ಅವರ ಗಮನಕ್ಕೆ ತಂದ ಬಾಲಕಿಯ ಪೋಷಕರು ನಾಪೋಕ್ಲು ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ನಿರ್ದೇಶನದಂತೆ ವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.