ಮಡಿಕೇರಿ, ಮಾ. ೨೦: ಖಾತೆ ವರ್ಗಾವಣೆ ವಿಚಾರದಲ್ಲಿ ಬ್ರೋಕರ್ ಮೂಲಕ ಲಂಚ ಪಡೆಯಲು ಮುಂದಾಗಿದ್ದ ಉಪನೋಂದಣಾಧಿಕಾರಿ ಪರಾರಿಯಾಗಿದ್ದು, ದಲ್ಲಾಳಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ದಲ್ಲಾಳಿ ಹರಿದತ್ತ ಲೋಕಾಯುಕ್ತ ವಶದಲ್ಲಿದ್ದು, ತಲೆಮರೆಸಿಕೊಂಡಿರುವ ಅಧಿಕಾರಿ ಸೌಮ್ಯಲತಾ ಪತ್ತೆಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಕೋರಂಗಾಲದ ನಿವಾಸಿ ಎನ್.ಎಸ್. ಕುಮಾರ್ ಎಂಬವರು ಕೋರಂಗಾಲದ ಸರ್ವೆ ನಂಬರ್ ೧೪೩/೭ ರಲ್ಲಿ ೩.೮೦ ಎಕರೆ ಕಾಫಿ ತೋಟ, ೧೪೩/೧ ರಲ್ಲಿ ೧.೮೦ ಎಕರೆ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಈ ಆಸ್ತಿಯನ್ನು ಕುಮಾರ್ ಹೆಸರಿಗೆ ಸಹೋದರಿಯು ಖಾತೆ ವರ್ಗಾವಣೆ ಮಾಡಲು ಇಚ್ಛಿಸಿದ್ದರು. ಇದರನ್ವಯ ಮಡಿಕೇರಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಈ ಸಂಬAಧ ಪ್ರಕ್ರಿಯೆ ನಡೆಸಲು ಅಧಿಕಾರಿ ಸೌಮ್ಯಲತಾ ಅವರನ್ನು ಸಂಪರ್ಕಿಸಿದ ಸಂದರ್ಭ ದಲ್ಲಾಳಿ ಹರಿದತ್ತ ಅವರ ಮೂಲಕ ರೂ. ೫೦ ಸಾವಿರ ಲಂಚಕ್ಕೆ ಬೇಡಿಕೆಯೊಡ್ಡಿದ್ದಾರೆ.
ಈ ಸಂಬAಧ ಮಡಿಕೇರಿ ಲೋಕಾಯುಕ್ತ ಠಾಣೆಗೆ ಕುಮಾರ್ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇಂದು ೫ ಮಂದಿ ಸಾಕ್ಷಿದಾರರೊಂದಿಗೆ ಸಬ್ ರಿಜಿಸ್ಟಾçರ್ ಕಚೇರಿಗೆ ತೆರಳಿದ ಕುಮಾರ್, ಸೌಮ್ಯಲತಾ ಅವರ ಸೂಚನೆ ಮೇರೆಗೆ ಲಂಚದ ಹಣವನ್ನು ದಲ್ಲಾಳಿ ಹರಿದತ್ತ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ನೀಡಿದರು. ಈ ಸಂದರ್ಭ ದಾಳಿ ನಡೆಸಿದ ಅಧಿಕಾರಿಗಳು ಹರಿದತ್ತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಷಯ ತಿಳಿದ ಸಬ್ರಿಜಿಸ್ಟಾçರ್ ಸೌಮ್ಯಲತಾ ಕಚೇರಿಯಿಂದ ಪರಾರಿಯಾಗಿದ್ದಾರೆ.
ಲೋಕಾಯುಕ್ತ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಮಹಾನಿರೀಕ್ಷಕ ಸುಬ್ರಮಣ್ಯೇಶ್ವರ ರಾವ್, ಅಧೀಕ್ಷಕ ವಿ.ಜೆ. ಸಜೀತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಲೋಕಾಯುಕ್ತ ನಿರೀಕ್ಷಕ ಲೋಕೇಶ್, ಮೈಸೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕಿ ರೂಪಶ್ರೀ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. -ವರದಿ : ಟಿ.ಜಿ. ಸತೀಶ್