ಮಡಿಕೇರಿ, ಮಾ. ೨೦: ನಗರದ ಹೊಸಬಡಾವಣೆಯಲ್ಲಿರುವ ಯೂರೋಕಿಡ್ಸ್ ಪಬ್ಲಿಕ್ ಶಾಲೆಯ ಪದವಿ ಪ್ರದಾನ ಹಾಗೂ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿತು. ಮುಖ್ಯ ಅತಿಥಿಗಳಾಗಿದ್ದ ಮೊಣ್ಣಂಡ ಶೋಭಾ ಸುಬ್ಬಯ್ಯ ಮಕ್ಕಳಿಗೆ ಪಾಲಕರು ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಕಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರನ್ನು ಶಾಲಾ ಆಡಳಿತ ಮಂಡಳಿಯಿAದ ಸನ್ಮಾನಿಸಲಾಯಿತು. ಶಾಲಾ ಮಂಡಳಿಯ ಅಧ್ಯಕ್ಷರಾದ ಕೆ.ಎಂ. ನಾಣಯ್ಯ ಮಕ್ಕಳಲ್ಲಿ ಭಾರತೀಯತೆಯನ್ನು ಅಳವಡಿಸಿ, ಸುಸಂಸ್ಕೃತ ಪ್ರಜೆಗಳನ್ನಾಗಿ ದೇಶಕ್ಕೆ ಕೊಡುಗೆ ನೀಡಬೇಕೆಂದು ಹೇಳಿದರು.
ಮಕ್ಕಳಿಗೆ ಪ್ರಮಾಣ ಪತ್ರವನ್ನು ಶಾಲಾ ಪ್ರಾಂಶುಪಾಲರಾದ ಕೆ.ಎನ್. ರಶ್ಮಿದೀಪ ಪ್ರದಾನ ಮಾಡಿದರು. ದೇಶಭಕ್ತಿ ಗೀತೆಗಳ ನೃತ್ಯ ರೂಪಕದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಗೊAಡಿತು. ಶಾಲಾ ಪ್ರಾಂಶುಪಾಲೆ ರಶ್ಮಿದೀಪ್ ಕೆ.ಎನ್. ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.