ವೀರಾಜಪೇಟೆ, ಮಾ. ೧೯: ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಉಪನ್ಯಾಸಕರು ಹಾಗೂ ಮುಖ್ಯ ಶಿಕ್ಷಕರುಗಳು ಚುನಾವಣಾ ಕರ್ತವ್ಯದಲ್ಲಿ ಮಾಸ್ಟರ್ ಟ್ರೆöÊನರ್ಸ್ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದು, ಯಾವುದೇ ರೀತಿಯ ಸಂಭಾವನೆ ಇದುವರೆಗೂ ಸಹ ದೊರಕಿರುವುದಿಲ್ಲ ಎಂದು ವೀರಾಜಪೇಟೆ ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಲಾಲ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಕಳೆದು ವರ್ಷಗಳು ಆಗುತ್ತಾ ಬಂದಿದೆ. ಮುಂದಿನ ಲೋಕಸಭೆ ಚುನಾವಣೆ ಸಹ ಹತ್ತಿರ ಬರುತ್ತಿದ್ದಂತೆ ಹಿಂದಿನ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದ ಸುಮಾರು ಉಪನ್ಯಾಸಕರುಗಳು ಹಾಗೂ ಮುಖ್ಯ ಶಿಕ್ಷಕರುಗಳಿಗೆ ಇದುವರೆಗೂ ಸಹ ಗೌರವಧನವನ್ನು ನೀಡದಿರುವುದು ಬೇಸರವನ್ನುಂಟು ಮಾಡಿದೆ. ಇನ್ನು ಕೆಲವೇ ದಿನಗಳು ಲೋಕಸಭೆ ಚುನಾವಣೆ ಇರುವುದರಿಂದ ಮಾಸ್ಟರ್ ಟ್ರೆöÊನರ್ಸ್ ಆಗಿ ಕರ್ತವ್ಯ ನಿರ್ವಹಿಸಿರುವ ಎಲ್ಲರಿಗೂ ಸಹ ಸಂಭಾವನೆಯನ್ನು ತಕ್ಷಣ ನೀಡಬೇಕು ಎಂದು ಶಿಕ್ಷಕರ ಸಂಘದ ಪರವಾಗಿ ಒತ್ತಾಯಿಸಿದ್ದಾರೆ.