ಸೋಮವಾರಪೇಟೆ,ಮಾ.೧೯: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಗೊಂಡ ಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಇದರನ್ವಯ ಗಡಿಗಳಲ್ಲಿ ತಪಾಸಣೆ ಆರಂಭವಾಗಿದೆ.
ಪೊಲೀಸ್, ಗೃಹರಕ್ಷಕ, ಅರಣ್ಯ, ಶಿಕ್ಷಣ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಸಿಬ್ಬಂದಿಗಳನ್ನು ಗಡಿಗಳಲ್ಲಿ ವಾಹನ ತಪಾಸಣೆಗೆ ನಿಯೋಜಿಸಲಾಗಿದ್ದು, ದಿನದ ೨೪ ಗಂಟೆಯೂ ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ನಿರ್ದೇಶಿಸಲಾಗಿದೆ.
ಅದರಂತೆ ಗಡಿಭಾಗದ ಮೂಲಕ ಒಳಬರುವ/ಹೊರ ಹೋಗುವ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಪಾರದರ್ಶಕ ಮತ್ತು ಕಟ್ಟುನಿಟ್ಟಿನ ಚುನಾವಣೆ ನಡೆಸಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ವಾಹನಗಳಲ್ಲಿ ಹಣ, ಕೊಡುಗೆಯ ವಸ್ತುಗಳು ಸೇರಿದಂತೆ ಮತದಾರರಿಗೆ ಆಮಿಷ ಒಡ್ಡುವ ಯಾವುದೇ ವಸ್ತುಗಳ ಸಾಗಾಟದ ಮೇಲೆ ನಿಗಾ ವಹಿಸಲಾಗಿದೆ.
ಕೊಡಗು-ಹಾಸನ ಗಡಿಯನ್ನು ಹೊಂದಿಕೊAಡಿರುವ ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯ ಬಾಣಾವರ ಗೇಟ್ನಲ್ಲೂ ತಪಾಸಣೆ ಆರಂಭಗೊAಡಿದ್ದು, ಸಿಬ್ಬಂದಿಗಳು ವಾಹನಗಳನ್ನು ತಡೆದು ತಪಾಸಣೆ ನಡೆಸುವುದರೊಂದಿಗೆ, ವಾಹನಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಸೌಲಭ್ಯದ ಕೊರತೆ-ಸಿಬ್ಬಂದಿಗಳಿಗೆ ಸಮಸ್ಯೆ: ದಿನದ ೨೪ ಗಂಟೆಯೂ ಗೇಟ್ನಲ್ಲಿ ತಪಾಸಣೆಗೆ ನಿಯುಕ್ತಿಗೊಂಡಿರುವ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯದ ಕೊರತೆ ಎದುರಾಗಿದೆ.
ಪ್ರಮುಖವಾಗಿ ಬಾಣಾವರ ಗೇಟ್ನಲ್ಲಿ ಟೆಂಟ್ನ ವ್ಯವಸ್ಥೆಯೇ ಇಲ್ಲವಾಗಿದೆ. ಹಗಲಿನ ವೇಳೆ ರಣ ಬಿಸಿಲು, ರಾತ್ರಿ ವೇಳೆಯ ಚಳಿ, ಇಬ್ಬನಿಯಿಂದ ರಕ್ಷಣೆ ಪಡೆಯಲು ಸೂಕ್ತ ಸೂರಿನ ಅಗತ್ಯತೆ ಹೆಚ್ಚಿದ್ದರೂ, ಈ ಬಗ್ಗೆ ಸಂಬAಧಪಟ್ಟ ಇಲಾಖೆ, ಸ್ಥಳೀಯ ಗ್ರಾಮಾಡಳಿತ ಗಮನ ಹರಿಸಿದಂತೆ ಕಂಡುಬAದಿಲ್ಲ.
ಇದೀಗ ತೆಂಗಿನ ಗರಿಗಳನ್ನು ತಂದು ಚಪ್ಪರ ಹಾಕಲು ಮುಂದಾಗಿದ್ದು, ಸುಮಾರು ಒಂದು ತಿಂಗಳ ಕಾಲ ಈ ತೆಂಗಿನ ಗರಿಯ ಚಪ್ಪರದೊಳಗೆ ಆಶ್ರಯ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ಉದ್ಬವಿಸಿದೆ. ಕನಿಷ್ಟ ತಪಾಸಣಾ ಗೇಟ್ನಲ್ಲಿ ತಿಂಗಳ ಮಟ್ಟಿಗಾದರೂ ಶಾಮಿಯಾನದ ವ್ಯವಸ್ಥೆ ಕಲ್ಪಿಸಿದರೆ ಸಿಬ್ಬಂದಿಗಳು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಬಹುದು. ಬಿಸಿಲು, ಚಳಿಯ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಟ ಸೌಕರ್ಯ ಕಲ್ಪಿಸಲು ಚುನಾವಣಾಧಿಕಾರಿಗಳು ಮುಂದಾಗಬೇಕಿದೆ. - ವಿಜಯ್ ಹಾನಗಲ್