ಮಡಿಕೇರಿ, ಮಾ. ೧೯: ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಭಕ್ತ ಜನಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ೧೫ ವರ್ಷಗಳಿಂದ ಕಾಂಡAಡ ಜೋಯಪ್ಪ ನೇತೃತ್ವ ವಹಿಸಿದ್ದ ಭಕ್ತಜನ ಸಂಘ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಂಡAಡ ಜೋಯಪ್ಪ ಮತ್ತು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಭಕ್ತಜನಸಂಘದ ನೂತನ ಅಧ್ಯಕ್ಷರಾಗಿ, ಅಖಿಲ ಕೊಡವ ಸಮಾಜದ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕಲಿಯಾಟಂಡ ಟಿ. ಅಪ್ಪಣ್ಣ (ರಾಜಾ), ಕಾರ್ಯದರ್ಶಿಗಳಾಗಿ ಬಟ್ಟೀರ ಚೋಂದಮ್ಮ ಮೇದಪ್ಪ, ಖಜಾಂಚಿಯಾಗಿ ಅಂಜಪರವAಡ ಕೆ. ಕುಶಾಲಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ಪರದಂಡ ಸದಾ ನಾಣಯ್ಯ, ಅನ್ನಡಿಯಂಡ ಪಿ. ದಿಲೀಪ್ಕುಮಾರ್, ಕಲಿಯಂಡ ಎಸ್. ಗಣೇಶ್, ಕೇಲೇಟಿರ ಎ. ರಂಜನ್, ಕಾಂಡAಡ ಎಂ. ಪೂವಯ್ಯ (ಸಜನ್), ಕುಟ್ಟಂಜೆಟ್ಟಿರ ಎನ್. ಬೋಪಣ್ಣ (ಶ್ಯಾಂ), ಅಪ್ಪಾರಂಡ ಪಿ. ಮಂದಣ್ಣ, ಕುಲ್ಲೇಟಿರ ಅರುಣ್ ಬೇಬ, ಅಲ್ಲಾರಂಡ ಎಸ್. ಅಯ್ಯಪ್ಪ (ಸನ್ನು), ಪ್ರಧಾನ ಅರ್ಚಕರಾದ ಎಲ್ಚಿತ್ತಾಯ ಕುಶಭಟ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಹಾಜರಿದ್ದ ಮಾಜಿ ಆಡಳಿತ ಮಂಡಳಿಯ ಕಾಂಡAಡ ಬಿ. ಜೋಯಪ್ಪ, ಉಪಾಧ್ಯಕ್ಷರಾದ ಪರದಂಡ ಕೆ. ಡಾಲಿ, ಕಾರ್ಯದರ್ಶಿ ಬೊಳಂದAಡ ಲಲಿತಾ ನಂದಕುಮಾರ್, ಖಜಾಂಚಿ ನಂಬಡಮಾಡ ಸುಬ್ರಮಣಿ, ನೂತನ ಸಮಿತಿ ಸದಸ್ಯರುಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.
ನಾಲ್ಕುನಾಡಿನ ವಿವಿಧ ದೇವಸ್ಥಾನಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಹೆಚ್ಚಿನ ಯುವಕರಿಂದಲೇ ಕೂಡಿದ ನೂತನ ಆಡಳಿತ ಮಂಡಳಿಗೆ ಈ ಶ್ರೇಷ್ಠ ಪರಂಪರೆಯನ್ನು ಮುಂದುವರಿಸಿ, ದೇವಸ್ಥಾನದ ಕೀರ್ತಿ ಮತ್ತಷ್ಟು ಉತ್ತುಂಗಕ್ಕೇರುವ ರೀತಿಯಲ್ಲಿ ನಿಸ್ವಾರ್ಥ ಸೇವೆಗೈಯ್ಯುವಂತೆ ಹಿರಿಯರು ಕಿವಿಮಾತು ಹೇಳಿದರು.