ಮಡಿಕೇರಿ, ಮಾ. ೧೯: ಶಕ್ತಿ ದಿನಪತ್ರಿಕೆ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಜ್ಞಾಪಕಾರ್ಥದ ದತ್ತಿನಿಧಿ ಕಥಾ ಸ್ಪರ್ಧೆಯ ಪ್ರಥಮ ಸ್ಥಾನವನ್ನು ಕುಶಾಲನಗರದ ಕುಕ್ಕನೂರು ರೇಷ್ಮಾ ಮನೋಜ್ ಪಡೆದುಕೊಂಡರು.
ದ್ವಿತೀಯ ಸ್ಥಾನವನ್ನು ನಾಪೋಕ್ಲಿನ ಮಧುಸೂಧನ್ ಬಿಳಿಗುಲಿ, ತೃತೀಯ ಸ್ಥಾನವನ್ನು ಮೂರ್ನಾಡಿನ ಕಿಗ್ಗಾಲು ಗಿರೀಶ್ ತಮ್ಮದಾಗಿಸಿಕೊಂಡರು. ಮುಕ್ತ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಯ ೨೩ ಕಥೆಗಾರರು ಭಾಗವಹಿಸಿದ್ದರು.
ಬಾಳೆಲೆಯ ವಿಜಯಲಕ್ಷಿö್ಮ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಳೆಲೆ ಸೆಂಟರ್ ಎಜುಕೇಶನ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ನಡೆದ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿನಿಧಿ ಮುಕ್ತ ಕಥಾ ಸ್ಪರ್ಧೆಯ ಬಹುಮಾನ ವಿತgಣೆ ನಡೆಯಿತು.
ಸಭೆಯಲ್ಲಿ ಕಥಾ ರಚನಾ ಕೌಶಲ್ಯದ ಕುರಿತು ಮಾತನಾಡಿದ ಪತ್ರಕರ್ತೆ ಉಷಾ ಪ್ರೀತಂ, ತಾಯಿ, ಅಜ್ಜಿ ಹೇಳಿದ ಕಥೆಗಳನ್ನು ನೆನಪಿಸಿಕೊಂಡು ಅದಕ್ಕೆ ಸರಳ ಬರಹದ ರೂಪಕ್ಕೆ ಇಳಿಸಿದರೆ ಅತ್ಯುತ್ತಮ ಕಥೆಗಳು ಹೊರ ಹೊಮ್ಮುತ್ತವೆ. ಕಥೆ ಸರಳ ಭಾಷೆಯಲ್ಲಿ ಇದ್ದರೆ ಎಲ್ಲ ವರ್ಗದ ಜನರನ್ನು ತಲುಪುತ್ತದೆ. ಕನ್ನಡದ ಹಲವಾರು ಕಥೆಗಾರರ ಉದಾಹರಣೆಗಳನ್ನು ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಶಕ್ತಿ ದಿನಪತ್ರಿಕೆ ಸಂಸ್ಥಾಪಕರಾದ ಬಿ ಎಸ್ ಗೋಪಾಲಕೃಷ್ಣ ಜ್ಞಾಪಕಾಥÀð ಅವರ ಪುತ್ರ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಹಾಗೂ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ ಅನಂತಶಯನ ಅವರು ದತ್ತಿ ಸ್ಥಾಪಿಸಿದ್ದು, ಇದರಿಂದ ಕಥೆಗಾರರಿಗೆ ವೇದಿಕೆ ದೊರೆತಂತಾಗಿದೆ. ೧೯೫೪ರಲ್ಲಿ ನಂದಾದೀಪ ಎನ್ನುವ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸುವ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಬಿ.ಎಸ್. ಗೋಪಾಲಕೃಷ್ಣ ಅವರು ‘ಕೊಡಗಿನ ಪತ್ರಿಕಾ ರಂಗದ ಭೀಷ್ಮ’ ಎಂದು ಖ್ಯಾತಿ ಗಳಿಸಿಕೊಂಡಿದ್ದಾರೆ. ಜಿಲ್ಲೆಯ ಪ್ರಪ್ರಥಮ ದೈನಿಕ ಪತ್ರಿಕೆ ಶಕ್ತಿಯನ್ನು ಪ್ರಾರಂಭಿಸಿದ ಬಿ.ಎಸ್. ಗೋಪಾಲಕೃಷ್ಣರವರು ಕೊಡಗಿನ ಪ್ರಥಮ ಸಂಜೆ ಪತ್ರಿಕೆ ಸಂಧ್ಯಾವನ್ನು ಆರಂಭಿಸಿದ್ದರು. ಚೇತನ ಎನ್ನುವ ವಾರಪತ್ರಿಕೆಯನ್ನು ಮತ್ತು ಬೆಂಗಳೂರಿನಿAದ ಶಕ್ತಿ ಹೆಸರಿನ ವಾರಪತ್ರಿಕೆಯನ್ನು ಹೊರತಂದಿದ್ದರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ ಗೋಪಾಲಕೃಷ್ಣ ಅವರು, ಹಲವಾರು ಸಾಹಿತ್ಯಿಕ ಕೃತಿಗಳನ್ನು ನೀಡಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಳೆಲೆ ಸೆಂಟರ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಗೌರವ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿದರು.
ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಡಿಞರಂಡ ಪ್ರಭು ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಜುಕೇಶನ್ ಸೊಸೈಟಿಯ ನಿರ್ದೇಶಕ ಕಿರದಂಡ ದೇವಯ್ಯ, ಪ್ರಾಂಶುಪಾಲ ಎನ್.ಕೆ.ಪ್ರಭು, ಶ್ರೀಮಂಗಲ ಹೋಬಳಿ ಕ.ಸಾ.ಪ. ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ಬಿ.ವಿ. ರಾಮಕೃಷ್ಣ, ಶೀಲಾ ಬೋಪಣ್ಣ, ಬಾಳೆಲೆ ಹೋಬಳಿ ಕೋಶಾಧಿಕಾರಿ ಸಿ. ವಿ ಚಂದ್ರಕಲಾ ಉಪಸ್ಥಿತರಿದ್ದರು.