ಸಿದ್ದಾಪುರ, ಮಾ. ೧೮: ಮನೆಯ ಮೇಲೆ ಭಾರೀ ಗಾತ್ರÀದ ಮರವೊಂದು ಬಿದ್ದ ಘಟನೆ ನಡೆದಿದ್ದು, ಮನೆಯ ವರು ಅದೃಷ್ಟವಶಾತ್ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಜ್ಯೋತಿನಗರದಲ್ಲಿ ಘಟನೆ ನಡೆದಿದೆ. ಇಂದು ಸಂಜೆ ಸುರಿದ ಮಳೆಗೆ ಜ್ಯೋತಿನಗರದಲ್ಲಿ ಮರವೊಂದು ಪರಮೇಶ ಎಂಬವರ ಮನೆಯ ಮೇಲೆ ಬಿದ್ದಿದೆ. ಮರ ಬೀಳುವ ಸಂದರ್ಭದಲ್ಲಿ ಮನೆಯ ಒಳಗೆ ಪರಮೇಶ ಅವರ ಪತ್ನಿ ಸೇರಿದಂತೆ ಮೂವರು ಇದ್ದರು.ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಅಲ್ಲದೆ ಮನೆಯಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ. ಸ್ಥಳಕ್ಕೆ ಗ್ರಾ.ಪಂ ಸದಸ್ಯ ಗಣೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಅಲ್ಪಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು.