ವೀರಾಜಪೇಟೆ, ಮಾ. ೧೮: ವೀರಾಜಪೇಟೆ ಪುರಸಭೆಯ ಅಧೀನದಲ್ಲಿರುವ ಸಂತೆ ಸುಂಕ ಎತ್ತಾವಳಿ ಮತ್ತು ಹಂದಿ ಮಾಂಸ ಮಾರುಕಟ್ಟೆ ಮಳಿಗೆ ಮರು ಹರಾಜು, ಸೇರಿದಂತೆ ಹಸಿ ಮೀನು ಮಾರುಕಟ್ಟೆಯಲ್ಲಿರುವ ಒಟ್ಟು ೬ ಮಳಿಗೆಗಳನ್ನು ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕಳೆದ ಸಾಲಿಗಿಂತ ಈ ವರ್ಷ ರೂ. ೫,೦೨,೯೦೦ ಹೆಚ್ಚು ಸಂಗ್ರಹವಾಗಿ ಲಾಭ ಗಳಿಸಿದೆ. ೨೦೨೩-೨೪ರ ಸಾಲಿನಲ್ಲಿ ಮೀನು ಮಳಿಗೆಗಳಲ್ಲಿ ೮.೪೭ ಲಕ್ಷ ರೂ., ಹಂದಿ ಮಾಂಸ ಮಳಿಗೆ ೩೫ ಸಾವಿರ ರೂ., ಸಂತೆ ಸುಂಕ ಎತ್ತವಾಳಿ ರೂ. ೧.೬೦ ಲಕ್ಷ ಆಗಿತ್ತು. ೨೦೨೪-೨೫ರ ಹರಾಜು ಪ್ರಕ್ರಿಯೆಯಲ್ಲಿ ಸಮುದ್ರದ ಮೀನು ಮರಾಟದ ೬ ಮಳಿಗೆ ಹರಾಜು ರೂ. ೧೧.೮೨ ಲಕ್ಷ, ಬಂದಿದ್ದು ರೂ. ೩.೩೫ ಲಕ್ಷ ಲಾಭ ಗಳಿಸಿದೆ, ಹಂದಿ ಮಾಂಸ ಮಳಿಗೆಯಲ್ಲಿ ರೂ. ೨ ಲಕ್ಷ ರೂ, ೧.೬೬ ಲಕ್ಷದಷ್ಟು ಲಾಭ, ಸಂತೆ ಸುಂಕ ಎತ್ತಾವಳಿ ರೂ. ೧೨ ಲಕ್ಷ ಸೇರಿದಂತೆ ಒಟ್ಟು ೫,೦೨ ೯೦೦ ಲಕ್ಷ ರೂ., ಸಂಗ್ರಹವಾಗಿದೆ ಎಂದು ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ.
ಪ್ರಕ್ರಿಯೆಯಲ್ಲಿ ಪುರಸಭೆ ಸದಸ್ಯರಾದ ಆಶಾ ಸುಬ್ಬಯ್ಯ, ಮಹ್ಮದ್ ರಾಫಿ, ಸಿ.ಕೆ. ಪೃಥ್ವಿನಾಥ್, ಅಬ್ದುಲ್ ಜಲೀಲ್, ಹೆಚ್.ಪಿ. ಮಹದೇವ್, ರಜನಿಕಾಂತ್, ಹೆಚ್.ಎಂ. ಪೂರ್ಣಿಮಾ, ಎಸ್.ಹೆಚ್. ಮತೀನ್, ಎಂ.ಕೆ. ದೇಚಮ್ಮ ಹಾಗೂ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.