ಸೋಮವಾರಪೇಟೆ, ಮಾ. ೧೮: ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರ ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆ ಯಡಿಯಲ್ಲಿ ೫ ಕೋಟಿ ರೂಪಾಯಿ ಅನುದಾನ ಒದಗಿಸಿದ್ದು, ಇದರಲ್ಲಿ ೧೮.೪೯ ಲಕ್ಷದಲ್ಲಿ ಕೆರೆಯ ಸುತ್ತಲೂ ಉದ್ಯಾನವನ ನಿರ್ಮಾಣವಾಗ ಬೇಕಿದ್ದರೂ ಪ್ರಸ್ತುತ ತ್ಯಾಜ್ಯ ಸಂಗ್ರಹದ ಸ್ಥಳವಾಗಿ ಮಾರ್ಪಟ್ಟಿದೆ.

ಕರ್ಕಳ್ಳಿ ಶ್ರೀ ಕಟ್ಟೆಬಸವೇಶ್ವರ ದೇವಾಲಯದ ಸಮೀಪ ದೈವಿಕ ಹಿನ್ನೆಲೆಯುಳ್ಳ ೭೦ ಸೆಂಟ್ ವಿಸ್ತೀರ್ಣದ ಕೆರೆಯ ಪ್ರದೇಶದಲ್ಲಿ ೧೮.೪೯ ಲಕ್ಷ ರೂಪಾಯಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಮಾಡಲು ನಗರೋತ್ಥಾನ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಗುದ್ದಲಿ ಪೂಜೆಯನ್ನು ಮಾಡಲಾಗಿದೆ. ಅಂದಿನಿAದ ಇಂದಿನವರೆಗೂ ಕಾಮಗಾರಿ ಕುಂಟುತ್ತಾ ಸಾಗಿದೆ. ಮೂಲ ಗುತ್ತಿಗೆದಾರ ಸ್ಥಳೀಯ ಗುತ್ತಿಗೆದಾರನಿಗೆ ತುಂಡುಗುತ್ತಿಗೆ ನೀಡಿದ್ದು, ಸ್ಥಳೀಯ ಗುತ್ತಿಗೆದಾರ ನಿರೀಕ್ಷಿತ ಕಾಮಗಾರಿ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಉದ್ಯಾನವನ ನಿರ್ಮಾಣ ವಾಗಬೇಕಿದ್ದ ಕೆರೆಯ ಸ್ಥಳವೀಗ ಕಲ್ಲುಮಣ್ಣು, ತ್ಯಾಜ್ಯ ಸಂಗ್ರಹದ ಸ್ಥಳವಾಗಿ ಮಾರ್ಪಟ್ಟಿದೆ. ಬೇರೆ ಸ್ಥಳದಲ್ಲಿ ಕಾಮಗಾರಿ ನಡೆಸಿದ ಸಂದರ್ಭ ಉತ್ಪತ್ತಿಯಾದ ಕಲ್ಲು, ಮಣ್ಣು ಮತ್ತಿತರೆ ತ್ಯಾಜ್ಯ ವಸ್ತುಗಳನ್ನು ಇಲ್ಲಿ ತಂದು ಹಾಕಿರುವುದರಿಂದ ಕೆರೆಯು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.

ಇಂತಹ ಅಸಡ್ಡೆ ವಹಿಸುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ತಕ್ಷಣ ಕೆರೆಯ ಅಸ್ತಿತ್ವವನ್ನು ಉಳಿಸಿಕೊಂಡು ಉದ್ಯಾನವನ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.