ಮಡಿಕೇರಿ, ಮಾ. ೧೮: ದೋಸೆ ಯಾರಿಗೆ ತಾನೆ ಗೊತ್ತಿಲ್ಲ? ಬಗೆ ಬಗೆಯ ವೆರೈಟಿಯ ದೋಸೆಗಳನ್ನು ನೋಡಿದ್ದೀರ... ತಿಂದಿದ್ದೀರ... ಆದರೆ ೧೨೩ ಅಡಿ ಉದ್ದದ ದೋಸೆ ಎಂದರೆ ನಂಬಲು ಆಗುತ್ತದೆಯೇ? ಇಷ್ಟು ಉದ್ದದ ದೋಸೆಯನ್ನು ತಯಾರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೂ, ಇದು ಸುಳ್ಳಲ್ಲ, ನಿಜ... ಬರೋಬ್ಬರಿ ೧೨೩ ಅಡಿ ಉದ್ದದ ದೋಸೆ ತಯಾರಿಯ ಮೂಲಕ ಇದೀಗ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಅಂದಹಾಗೆ ಈ ತಂಡದಲ್ಲಿ ಕೊಡಗಿನ ಇಬ್ಬರು ಯುವಕರ ಪಾತ್ರವೂ ಇರುವುದು ವಿಶೇಷವಾಗಿದೆ.

ಏನಿದು ದೋಸೆಯ ಕಥೆ...?

ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಲ್ಪಟ್ಟಿರುವ ಬೆಂಗಳೂರಿನ ಎಂ.ಟಿ.ಆರ್. ಬ್ರಾö್ಯಂಡ್ ಇದೀಗ ೧೦೦ ವರ್ಷ ಆಚರಿಸಿಕೊಳ್ಳುತ್ತಿದೆ. ಶತಮಾನೋತ್ಸವದ ಹಿನ್ನೆಲೆಯಲ್ಲಿ ಏನಾದರೊಂದು ಹೊಸತನ ಸೃಷ್ಟಿಸಬೇಕೆಂಬ ಚಿಂತನೆಯೊAದಿಗೆ ಭಾರೀ ದೋಸೆ ತಯಾರಿಯ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದು ಮಾತ್ರವಲ್ಲದೆ ಗಿನ್ನಿಸ್ ದಾಖಲೆಯೂ ಈ ಮೂಲಕ ನಿರ್ಮಾಣವಾಗಿದೆ. ಪರಿಣಿತ ಶೆಫ್‌ಗಳು ಸೇರಿ ೭೫ ಮಂದಿಯ ತಂಡ (ಬಾಣಸಿಗರು) ಈ ಸಾಹಸ ಮಾಡಿದೆ. ಈ ಪೈಕಿ ಸುಮಾರು ೫೯ ಮಂದಿ ಹೊಟೇಲ್ ಮ್ಯಾನೇಜ್‌ಮೆಂಟ್ ಮಾಡುತ್ತಿರುವ ಯುವ ವಿದ್ಯಾರ್ಥಿಗಳು ಬೇರೆ ಬೇರೆ ಕಾಲೇಜುಗಳಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಅಕಾಡೆಮಿಕ್ ಸಾಧನೆಯಂತೆ ಇವರ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ತಂಡದಲ್ಲಿ ಬೆಂಗಳೂರು ಎಂ.ಎಸ್. ರಾಮಯ್ಯ ಕಾಲೇಜಿನ ಕೊಡಗಿನವರಾದ ನಾಪೋಕ್ಲುವಿನ ಶಿವಚಾಳಿಯಂಡ ಸಜನ್ ಚಂಗಪ್ಪ ಹಾಗೂ ಟಿ. ಶೆಟ್ಟಿಗೇರಿ ತಾವಳಗೇರಿಯ ನೂರೇರ ದೀಪಕ್ ಅವರುಗಳು ಸೇರಿದ್ದಾರೆ.

ತಾ. ೧೬ರಂದು ಬೆಂಗಳೂರು ಬೊಮ್ಮಸಂದ್ರದ ಎಂ.ಟಿ.ಆರ್. ಫ್ಯಾಕ್ಟರಿಯಲ್ಲಿ ಈ ಸಾಹಸ ಮಾಡಲಾಗಿದೆ. ಇದಕ್ಕಾಗಿ ಕಳೆದ ೬ ತಿಂಗಳಿನಿAದ ಪ್ರಯತ್ನ ನಡೆದಿದ್ದು ೧೧೦ ಬಾರಿ ತಾಲೀಮು ನಡೆಸಲಾಗಿತ್ತು. ಎಂ.ಟಿ.ಆರ್. ಶತಮಾನೋತ್ಸವದ ಹಿನ್ನೆಲೆ ತಾ. ೧೬ರಂದು ಇದಕ್ಕೆ ಮುಹೂರ್ತ ‘ಫಿಕ್ಸ್’ ಮಾಡಲಾಗಿತ್ತು. ೪ ಪ್ರಯತ್ನದಲ್ಲಿ ದೋಸೆ ತಯಾರಿಯಲ್ಲಿ ಕ್ರಾö್ಯಕ್ ಇಲ್ಲದ ಹಾಗೆ ಯಶಸ್ಸು ಕಾಣಬೇಕಿತ್ತು. ಪ್ರಥಮ ಪ್ರಯತ್ನದಲ್ಲೇ ೧೧೦ ಅಡಿ ದೋಸೆ ತಯಾರಿಯಾದರೆ, ಎರಡನೇ ಯತ್ನದಲ್ಲಿ ೧೨೩ ಅಡಿಗೆ ತಲುಪಿ ಗಿನ್ನಿಸ್ ದಾಖಲೆ ಸೃಷ್ಟಿಯಾಗಿದೆ. ಈ ಹಿಂದೆ ತಮಿಳುನಾಡಿನ ಚೆನ್ನೆöÊಯಲ್ಲಿ ೫೩ ಅಡಿ ಉದ್ದದ ದೋಸೆಯ ದಾಖಲೆ ಇತ್ತು. ಇದೀಗ ೧೨೩ ಅಡಿಯ ಮೂಲಕ ಹೊಸ ಇತಿಹಾಸದ ಸಾಹಸ ಸೃಷ್ಟಿಯಾಗಿದೆ ಎಂದ ಸಜನ್ ‘ಶಕ್ತಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿದರು.

ಎಂ.ಟಿ.ಆರ್. ಬ್ರಾö್ಯಂಡ್‌ಗೆ ಲಾರ್‌ಮ್ಯಾನ್ ಕಂಪೆನಿ ಕಿಚನ್ ಪರಿಕರದ ವ್ಯವಸ್ಥೆ ಮಾಡಲಾಗಿತ್ತು. ಹೊಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ವಿವಿಧ ರೀತಿಯ ಕೋರ್ಸ್ಗಳಿರುತ್ತದೆ. ಇದರಲ್ಲಿ ಫುಡ್ ಅಂಡ್ ಬೇವರೇಜ್‌ನಿಂದ ಶಿವಚಾಳಿಯಂಡ ಸಜನ್ ಚಂಗಪ್ಪ ಹಾಗೂ ಕಿಚನ್ ಸರ್ವೀಸ್‌ನಿಂದ ನೂರೆರ ದೀಪಕ್ ದೋಸೆ ತಯಾರಿ ತಂಡದಲ್ಲಿ ಶ್ರಮಿಸಿದ್ದಾರೆ. ಸಜನ್ ನಾಪೋಕ್ಲುವಿನ ಶಿವಚಾಳಿಯಂಡ ಜಗದೀಶ್ ಹಾಗೂ ಸರ ದಂಪತಿಯ ಪುತ್ರ. ದೀಪಕ್ ಟಿ.ಶೆಟ್ಟಿಗೇರಿಯ ನೂರೆರ ಮಾದಪ್ಪ (ಗಿರಿ) ಹಾಗೂ ಅನಿತ ದಂಪತಿಯ ಪುತ್ರ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದೆ.

-ಶಶಿ ಸೋಮಯ್ಯ.