ಸೋಮವಾರಪೇಟೆ, ಮಾ. ೧೭: ಕೊಡಗು ಜಿಲ್ಲೆಯನ್ನು ಒಳಗೊಂಡAತೆ ಕೊಡಗು-ಹಾಸನ ಮಠಾಧೀಶರ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲೆಯ ಸ್ವಾಮೀಜಿಗಳಿಗೂ ಜವಾಬ್ದಾರಿ ನೀಡಲಾಗಿದೆ.
ಅರಸೀಕೆರೆ ಸಮೀಪದ ಕೋಡಿ ಮಠದ ಆವರಣದಲ್ಲಿ ನಡೆದ ಸಭೆಯಲ್ಲಿ ನೂತನ ಪರಿಷತ್ ರಚನೆ ಸಂಬAಧ ಸುದೀರ್ಘ ಚರ್ಚೆ ನಡೆದು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮೊದಲು ಮಾತನಾಡಿದ ಕೋಡಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಪರಸ್ಪರ ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಪ್ರಸ್ತುತದ ಸನ್ನಿವೇಶದಲ್ಲಿ ಒಗ್ಗಟ್ಟು, ಪರಸ್ಪರ ಪ್ರೀತಿ ವಿಶ್ವಾಸ ಅನಿವಾರ್ಯವಾಗಿದೆ ಎಂದರು.
ಜನಸಾಮಾನ್ಯರು ಹಾಗೂ ಮಠ ಮಾನ್ಯಗಳ ನಡುವೆ ಉತ್ತಮ ಸಂಬAಧ, ಸಾಮರಸ್ಯವಿದ್ದರೆ ಸಮಾಜ ನೆಮ್ಮದಿಯಿಂದ ಇರುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂಸ್ಕಾರಯುತ ಜೀವನದ ಮಾರ್ಗದರ್ಶನ ಮಾಡುವುದು ಮಠಾಧೀಶರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಿಸಿದರು.
ನೂತನವಾಗಿ ರಚನೆಗೊಂಡ ಕೊಡಗು-ಹಾಸನ ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್ನ ಗೌರವಾಧ್ಯಕ್ಷರಾಗಿ ಕೋಡಿಮಠದ ಸ್ವಾಮೀಜಿ, ಅಧ್ಯಕ್ಷರಾಗಿ ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಉಪಾಧ್ಯಕ್ಷರಾಗಿ ವೀರಾಜಪೇಟೆ, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಯಳನಾಡು ಮೂರುಕಳಸ ಮಠದ ಶ್ರೀ ಜ್ಞಾನಪ್ರಭು ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿಗಳಾಗಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಹಾಸನ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಖಜಾಂಚಿಯಾಗಿ ಅರಕಲಗೂಡು ಚಿಲುಮೆ ಮಠದ ಜಯದೇವ ಸಾಮೀಜಿ ಆಯ್ಕೆಯಾದರು. ಸಭೆಯಲ್ಲಿ ಕೊಡಗು, ಹಾಸನ ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.