ವೀರಾಜಪೇಟೆ, ಮಾ. ೧೭: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ವೀರಾಜಪೇಟೆ ಇವರ ಮೂಲಕ ಶ್ರೀ ಕ್ಷೇತ್ರದ ಜನಮಂಗಲ ಕಾರ್ಯಕ್ರಮಗಳಲ್ಲಿ ಒಂದಾದ ದೇವಾ ಲಯದ ಜೀರ್ಣೋದ್ಧಾರ ಕಾರ್ಯ ಕ್ರಮದ ಅಡಿಯಲ್ಲಿ ಮೂರ್ನಾಡು ವಲಯದ ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ೨,೫೦,೦೦೦ ಲಕ್ಷದ ಚೆಕ್ ಅನ್ನು ಶ್ರೀ ಭಗವತಿ ದೇವಸ್ಥಾನದ ಸಮಿತಿ ಯವರಿಗೆ ವಿತರಣೆ ಮಾಡಲಾಯಿತು.

ದೇವಾಲಯ ಸಮಿತಿ ವತಿಯಿಂದ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ಕೆ ವೀರೇಂದ್ರ ಹೆಗ್ಗಡೆ ಅವರ ಬಳಿ ಅನುದಾನವನ್ನು ಕೋರಿದ್ದರು. ಸಮಿತಿಯವರ ಮನವಿಯನ್ನು ಪರಿಗ ಣಿಸಿ ವೀರೇಂದ್ರ ಹೆಗ್ಗಡೆಯವರು ಅನು ದಾನ ಮಂಜೂರಾತಿಗೊಳಿಸಿ, ವೀರಾಜ ಪೇಟೆಯ ಗ್ರಾಮಾಭಿವೃದ್ದಿ ಯೋÃಜ ನಾಧಿಕಾರಿಗಳಾದ ದಿನೇಶ್ ದೇವಾಲ ಯದ ಆಡಳಿತ ಮಂಡಳಿಯವರಿಗೆ ಚೆಕ್ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕ ಪ್ರತಾಪ್ ದೇವಾಡಿಗ, ಒಕ್ಕೂಟ ಅಧ್ಯಕ್ಷರಾದ ನಿವ್ಯ, ಪದಾಧಿಕಾರಿಗಳಾದ ಪುಷ್ಪ, ಸೇವಾ ಪ್ರತಿನಿಧಿ ಮಮ್ತಾಜ್, ದೇವಾಲಯದ ಸಮಿತಿ ಅಧ್ಯಕ್ಷರಾದ ಮೇದಪ್ಪ, ಉಪಾಧ್ಯಕ್ಷ ಉದಯ, ಕಾರ್ಯದರ್ಶಿ ಸಂಜಯ ಪೂಣಚ್ಚ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು, ಸಂಘದ ಸದಸ್ಯರು ಉಪಸ್ಥಿತರಿದ್ದರು.