ಸೋಮವಾರಪೇಟೆ, ಮಾ. ೧೫: ಇಲ್ಲಿನ ಪಟ್ಟಣ ಪಂಚಾಯಿತಿಗೆ ಮೂವರನ್ನು ನಾಮ ನಿರ್ದೇಶನ ಗೊಳಿಸಿ ನಗರಾಭಿವೃದ್ಧಿ ಇಲಾಖೆ ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ಶಿಫಾರಸ್ಸು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅವರ ಕೋರಿಕೆ ಮೇರೆ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ನೇಮಕಾತಿ ಆದೇಶ ಹೊರಡಿಸಿದ್ದು, ಪಟ್ಟಣದ ರೇಂಜರ್ ಬ್ಲಾಕ್ ನಿವಾಸಿ ಹೆಚ್.ಎ. ನಾಗರಾಜು, ಎಂ.ಜಿ. ರಸ್ತೆ ನಿವಾಸಿ ಎಸ್.ಕೆ. ವಿನಿ, ಬಸವೇಶ್ವರ ರಸ್ತೆ ನಿವಾಸಿ, ಪ.ಪಂ. ಮಾಜೀ ಸದಸ್ಯ ಉದಯಶಂಕರ್ ಅವರ ಪುತ್ರ ಡಿ. ಕಿರಣ್ ಅವರುಗಳನ್ನು ನಾಮನಿರ್ದೇಶನಗೊಳಿಸಿದ್ದಾರೆ.