ಕರಿಕೆ, ಮಾ. ೧೫: ಅರಣ್ಯ ಇಲಾಖೆಯಲ್ಲಿ ಟಿಸಿಎಂಎಸ್ ಅಡಿಯಲ್ಲಿ ಭಾಗಮಂಡಲ ವಲಯದ ಮೂರು ಉಪ ವಲಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ ಹಾಗೂ ಗಸ್ತು ಅರಣ್ಯ ಪಾಲಕರನ್ನು ಮುಂಬಡ್ತಿ ನೀಡಿ ವಲಯದ ಐಸಿಟಿ ಪ್ರೊಟೆಕ್ಷನ್ ಡ್ಯೂಟಿ ಉಪ ವಲಯ ಅರಣ್ಯಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಭಾಗಮಂಡಲ ವಲಯದ ಕಕ್ಕಬೆ ಉಪ ವಲಯದ ಉಪ ವಲಯ ಅಧಿಕಾರಿಗಳಾದ ಸುರೇಶ್ ಎಂಬಿ ಅವರನ್ನು ತಿತಿಮತಿ ಟಿಂಬರ್ ಡಿಪೋಗೆ ವರ್ಗಾವಣೆಗೊಳಿಸಿಗೊಳಿಸಿದ್ದು ನಂದಿನಿ ಸಿ.ಕೆ. ಅವರನ್ನು ಮುಖ್ಯ ಅರಣ್ಯ ಅಧಿಕಾರಿಗಳ ಮಡಿಕೇರಿ ಕಚೇರಿಗೆ, ಉಪವಲಯ ಅರಣ್ಯ ಅಧಿಕಾರಿ ಅಶೋಕ್ ಇವರನ್ನು ಆನೆಕಾಡು ಟಿಂಬರ್ ಡಿಪೋ ಕುಶಾಲನಗರ ಇಲ್ಲಿಗೆ ವರ್ಗಾವಣೆ ಗೊಳಿಸಲಾಗಿದೆ. ಗಸ್ತು ಅರಣ್ಯ ಪಾಲಕ ಪರಮೇಶ್ ಇವರುಗಳನ್ನು ಮುಂಬಡ್ತಿ ನೀಡಿ ಭಾಗಮಂಡಲ ವಲಯಕ್ಕೆ ನಿಯೋಜಿಸಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳಿಗೆ ಶುಭಾಶಯ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ವಲಯ ಅಧಿಕಾರಿ ರವೀಂದ್ರ ಟಿ.ಎಂ. ಅವರು ಆಯೋಜಿಸಿ ಎಲ್ಲರೂ ಕರ್ತವ್ಯ ನಿಷ್ಟೆಯಿಂದ ಕೆಲಸ ನಿರ್ವಹಿಸಬೇಕೆಂದು ಕಿವಿ ಮಾತು ಹೇಳಿದರು.