ಸೋಮವಾರಪೇಟೆ, ಮಾ. ೧೫: ವಿಷ ಸೇವಿಸಿ ಅವಿವಾಹಿತ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನಡೆದಿದೆ.

ತಣ್ಣೀರುಹಳ್ಳ ಗ್ರಾಮದ ನಿವಾಸಿ ಕುಮಾರ್ ಮತ್ತು ರುಕ್ಮಿಣಿ ಅವರ ಪುತ್ರ ಗಗನ್ (೨೮) ಎಂಬವನೇ ಆತ್ಮಹತ್ಯೆಗೆ ಶರಣಾದ ಯುವಕ. ನಿನ್ನೆ ದಿನ ಸಂಜೆ ೮ ಗಂಟೆ ಸುಮಾರಿಗೆ ಮನೆಯಲ್ಲಿ ವಿಷ ಸೇವಿಸಿದ ಗಗನ್ ಅವರನ್ನು ಸಂಬAಧಿಕರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ಆಸ್ಪತ್ರೆಗೆ ತಲುಪುವುದರೊಳಗೆ ಪ್ರಾಣಪಕ್ಷಿ ಹಾರಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಗಗನ್‌ನ ಅಜ್ಜಿ ನಿಧನರಾಗಿದ್ದು, ತಾಯಿ ತವರು ಮನೆಗೆ ಹೋಗಿದ್ದರು. ಮನೆಯಲ್ಲಿ ಓರ್ವನೇ ಇದ್ದ ಗಗನ್‌ಗೆ ಮಾವ ಮೂರ್ತಿ ಅವರು ಊಟ ನೀಡುತ್ತಿದ್ದರು. ನಿನ್ನೆ ಸಂಜೆ ವೇಳೆಗೆ ಊಟ ಕೊಟ್ಟು ವಾಪಸ್ ಬಂದಿದ್ದರು. ಈ ಸಮಯದಲ್ಲಿ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ದಿನ ಸಂಜೆ ೮ ಗಂಟೆ ಸುಮಾರಿಗೆ ಮನೆಯಲ್ಲಿ ವಿಷ ಸೇವಿಸಿದ ಗಗನ್ ಅವರನ್ನು ಸಂಬAಧಿಕರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ಆಸ್ಪತ್ರೆಗೆ ತಲುಪುವುದರೊಳಗೆ ಪ್ರಾಣಪಕ್ಷಿ ಹಾರಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಗಗನ್‌ನ ಅಜ್ಜಿ ನಿಧನರಾಗಿದ್ದು, ತಾಯಿ ತವರು ಮನೆಗೆ ಹೋಗಿದ್ದರು. ಮನೆಯಲ್ಲಿ ಓರ್ವನೇ ಇದ್ದ ಗಗನ್‌ಗೆ ಮಾವ ಮೂರ್ತಿ ಅವರು ಊಟ ನೀಡುತ್ತಿದ್ದರು. ನಿನ್ನೆ ಸಂಜೆ ವೇಳೆಗೆ ಊಟ ಕೊಟ್ಟು ವಾಪಸ್ ಬಂದಿದ್ದರು. ಈ ಸಮಯದಲ್ಲಿ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗಗನ್, ತನ್ನ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ.

ತಕ್ಷಣ ಸಹೋದರಿ ತನ್ನ ಮಾವನಿಗೆ ವಿಷಯ ತಿಳಿಸಿದ್ದು, ಮಾವ ಮೂರ್ತಿ ಅವರು ವಾಪಸ್ ಮನೆಗೆ ಬಂದ ಸಂದರ್ಭ ಜೀವನ್ಮರಣ ಸ್ಥಿತಿಯಲ್ಲಿದ್ದ ಗಗನ್‌ನನ್ನು ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ಸೇರಿಸಲು ಮುಂದಾದರೂ ಫಲ ನೀಡದೇ ಇಹಲೋಕ ತ್ಯಜಿಸಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಗಗನ್, ಪೋಷಕರೊಂದಿಗೆ ಓರ್ವ ಸಹೋದರಿಯನ್ನು ಅಗಲಿದ್ದಾರೆ.