ವೀರಾಜಪೇಟೆ, ಮಾ. ೧೫: ಕಾಕೋಟು ಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ನೆಸ್‌ಕೆಫೆ ಕೊಡಗು ಕಪ್ ಹಾಕಿ ಪಂದ್ಯಾವಳಿಯಲ್ಲಿ ಬ್ಲೇಸ್ ಮೂರ್ನಾಡು, ಈಶ್ವರಿ ಸ್ಪೋರ್ಟ್ಸ್ ಕ್ಲಬ್ ಬೇಗೂರ್, ಬೇರಳಿನಾಡು, ಕೋಣನಕಟ್ಟೆ ತಂಡಗಳು ಸೆಮಿಫೈನಲ್ಸ್ನಲ್ಲಿ ಸೆಣಸಲಿದೆ.

ಬ್ಲೇಸ್ ಮೂರ್ನಾಡು ತಂಡವು ಬೊಟ್ಟಿಯತ್ ನಾಡು ಕುಂದ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಮೂರ್ನಾಡು ತಂಡದ ಪರ ೪ನೇ ನಿಮಿಷದಲ್ಲಿ ನಾಣಯ್ಯ, ೩೦ನೇ ನಿಮಿಷದಲ್ಲಿ ಡಿವೈಎಸ್ ಅತಿಥಿ ಆಟಗಾರ ರ‍್ಯನ್ ಉತ್ತಪ್ಪ ಗೋಲು ಗಳಿಸಿದರು. ಈವೈಸಿ ಬೇಗೂರು ತಂಡವು ಮೂರ್ನಾಡು ಎಂಆರ್‌ಎಫ್ ತಂಡವನ್ನು ೫-೧ ಗೋಲುಗಳಿಂದ ಪರಾಭವಗೊಳಿಸಿತು. ಈವೈಸಿ ತಂಡದ ಪರ ೪ನೇ ನಿಮಿಷದಲ್ಲಿ ಅತಿಥಿ ಆಟಗಾರ ಆಜಿಂಕ್ಯ, ಕೆನರಾ ಬ್ಯಾಂಕ್‌ನ ಅತಿಥಿ ಆಟಗಾರ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ (೧೧,೩೯,೫೭ನಿ), ಅತಿಥಿ ಆಟಗಾರ ರಜಿತ್ ೫೮(ನಿ), ಮೂರ್ನಾಡು ಎಂಆರ್‌ಎಫ್ ನ ಮುತ್ತಣ್ಣ (೨೧ನಿ)ದಲ್ಲಿ ಗೋಲು ದಾಖಲಿಸಿದರು.

ಬೇರಳಿನಾಡು ತಂಡವು ೬-೫ ಗೋಲುಗಳಿಂದ ಮಲ್ಮ ಸ್ಪೋರ್ಟ್ಸ್ ತಂಡವನ್ನು ಸಡನ್ ಡೆತ್‌ನಲ್ಲಿ ಪರಾಭವಗೊಳಿಸಿತು. ನಿಗಧಿತ ಅವಧಿಯಲ್ಲಿ ಎರಡು ತಂಡಗಳು ೧-೧ ಗೋಲುಗಳ ಸಮಬಲ ಸಾಧಿಸಿದ ಕಾರಣ ಆಯೋಜಕರು ಪೆನಾಲ್ಟಿ ಶೂಟೌಟ್ ನಿಯಮವನ್ನು ಅಳವಡಿಸಲಾಯಿತು. ಅದರಲ್ಲೂ ಸಮಬಲ ಸಾಧಿಸಿದ ಕಾರಣ ಸಡನ್ ಡೆತ್ ನಿಯಮಕ್ಕೆ ಮೊರೆ ಹೋಗ ಬೇಕಾಯಿತು. ಬೇರಳಿ ನಾಡು ತಂಡದ ಪರ ಅತಿಥಿ ಆಟಗಾರ ಪವನ್ ೩, ಮಾಚಯ್ಯ ೨, ಪ್ರಥ್ವಿ ೧, ಮಲ್ಮ ಸ್ಪೋರ್ಟ್ಸ್ ತಂಡದ ಪರ ಮೊಣ್ಣಪ್ಪ ೩, ಸೋನು ೧, ಯಶ್ವಂತ್ ೧ ಗೋಲು ದಾಖಲಿಸಿ ಪಂದ್ಯಾಟದಿAದ ಹೊರಗುಳಿದರು.

ಕೋಣನಕಟ್ಟೆ ತಂಡ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ತಂಡವನ್ನು ೪-೧ ಗೋಲುಗಳಿಂದ ಮಣಿಸಿ ಸೆಮಿ ಫೈನಲ್ಸ್ಗೆ ಅರ್ಹತೆ ಪಡೆದುಕೊಂಡಿತು. ಕೋಣನಕಟ್ಟೆ ಪರ ಅತಿಥಿ ಆಟಗಾರ ಆಭರಣ್ (೧ನಿ), ಅಪ್ಪಯ್ಯ (೧ನಿ), ಸಾವನ್ (೨೭ನಿ), ಅತಿಥಿ ಆಟಗಾರ ಕುಪ್ಪಂಡ ಸೋಮಣ್ಣ (೩೧ನಿ), ಆಶ್ವಿನಿ ಸ್ಪೋರ್ಟ್ಸ್ ಫೌಂಡೆಶನ್ ಪರ ೪೦ನೇ ನಿಮಿಷದಲ್ಲಿ ಅತಿಥಿ ಆಟಗಾರ ದೇಶ್ ಪೂವಯ್ಯ ಅವರ ಏಕೈಕ ಗೋಲಿಗೆ ತೃಪ್ತಿಪಡಬೇಕಾಯಿತು.

ಇತ್ತೀಚೆಗೆ ಪೊನ್ನಂಪೇಟೆಯ ಆಸ್ಟೊçÃಟರ್ಫ್ ಮೈದಾನದಲ್ಲಿ ಲೀಗ್ ಹಂತದಲ್ಲಿ ನಡೆದ ಪಂದ್ಯಾಟದಲ್ಲಿ ಅತಿ ಹೆಚ್ಚಿನ ಅಂಕ ಪಡೆದ ೮ ತಂಡಗಳನ್ನು ನೆಸ್‌ಕೆಫೆ ಕೊಡಗು ಕಪ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಂತರರಾಷ್ಟಿçÃಯ ನಿಯಮದ ಅಡಿಯಲ್ಲಿ ಪಂದ್ಯಾಟವನ್ನು ನಡೆಸಲಾಯಿತು. ಒಂದು ತಂಡದಲ್ಲಿ ೬ ಅತಿಥಿ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಪಂದ್ಯಾಟದ ತೀರ್ಪುಗಾರರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ, ಕರವಂಡ ಅಪ್ಪಣ್ಣ, ನೆಲ್ಲಮಕ್ಕಡ ಪವನ್, ಕೊಂಡಿರ ಕೀರ್ತೀ, ಚಂದಪAಡ ಆಕಾಶ್, ಮೂಕಚಂಡ ನಾಚಪ್ಪ, ಕುಪ್ಪಂಡ ದಿಲನ್, ವಿನೋದ್ ಜೆಸಿಬಿ, ಅರುಣ್, ತಾಂತ್ರಿಕ ಸಮಿತಿ ನಿರ್ದೇಶಕರಾಗಿ ಚೆಯ್ಯಂಡ ಅಪ್ಪಚ್ಚು ಕಾರ್ಯ ನಿರ್ವಹಿಸಿದರು. ಮಾಳೇಟಿರ ಶ್ರೀನಿವಾಸ್ ಹಾಗೂ ಚೆಪ್ಪುಡಿರ ಕಾರ್ಯಪ್ಪ ಪಂದ್ಯಾಟದ ವಿಕ್ಷಕ ವಿವರಣೆ ನೀಡಿದರು.