ಸುAಟಿಕೊಪ್ಪ, ಮಾ. ೧೫: ಜನರ ಬೇಕು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಿಂಗಳಿನ ೨ನೇ ಶನಿವಾರ ಮಾದಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವು ದೆಂದು ಶಾಸಕ ಮಂತರ್ ಗೌಡ ಹೇಳಿದರು.

ಮಾದಾಪುರದ ರಾಜ್ಯ ಹೆದ್ದಾರಿ ಬಳಿ ಮಾದಾಪುರ ಹೋಬಳಿ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಸೋಮವಾರಪೇಟೆ ಶಾಸಕರ ಕಚೇರಿಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಿಂಗಳಿನ ೨ನೇ ಶನಿವಾರ ಮಾದಾಪುರ ಕಾಂಗ್ರೆಸ್ ಕಚೆೆÃರಿಯಲ್ಲಿ ಜನರ ಮನವಿಯನ್ನು ಸ್ವೀಕರಿಸಲಾಗುವುದು.

ಮಾದಾಪುರ ಹೋಬಳಿ ಕಂದಾಯ ಕಚೇರಿ ಸ್ಥಾಪನೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಮಾಜಿ ವಕ್ಪ್ಬೋರ್ಡ್ ಅಧ್ಯಕ್ಷ ಎ.ಬಿ. ಉಮ್ಮರ್ ಮಾದಾಪುರ ವಿಭಾಗದಲ್ಲಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾದ ಹಲವು ಮಂದಿಗೆ ಮನೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರುಗಳಿಗೆ ಮನೆ ನಿರ್ಮಿಸಿಕೊಡಲು ಶಾಸಕರು ಮುಂದಾಗಬೇಕು ಎಂದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ಪಿ. ಮನು ಮೇದಪ್ಪ ಮಾತನಾಡಿ, ಹಲವು ಮನವಿಗಳನ್ನು ಮುಂದಿಟ್ಟರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಸತೀಶ, ಮಾಜಿ ಅಧ್ಯಕ್ಷ ದಾದು ಬೋಪಯ್ಯ, ಕಾರ್ಯದರ್ಶಿ ನಾಸೀರ್ ಮಾತನಾಡಿದರು.

ಅಧ್ಯಕ್ಷತೆಯನ್ನು ಮಾದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಮೇದೂರ ಹರೀಶ್ ಸುಬ್ಬಯ್ಯ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುಂದರ, ಗ್ರಾಮ ಪಂಚಾಯಿತಿ ಸದಸ್ಯ ಪಿ.ಡಿ. ಅಂತೋಣಿ (ತಂಗಚ್ಚ), ಅಜೀಜ್ ಮೇಸ್ತಿç, ಬಾಬು, ಇಬ್ರಾಹಿಂ ಉಪಸ್ಥಿತರಿದ್ದರು.