ವೀರಾಜಪೇಟೆೆ, ಮಾ. ೧೫: ಸೇನೆ ಹಾಗೂ ಹಾಕಿ ಕೊಡಗಿನ ಜನರ ರಕ್ತದಲ್ಲಿಯೇ ಬಂದಿದೆ. ಗ್ರಾಮೀಣ ಮಟ್ಟದಲ್ಲಿ ಹಾಕಿಗೆ ಪ್ರೋತ್ಸ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಯಲ್ಲಿ ಮೈದಾನ ಪುನಶ್ಚೇತನಕ್ಕಾಗಿ ರೂ.೨ ಕೋಟಿ ಮೀಸಲಿಟ್ಟಿದ್ದೇನೆ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.
ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ನೆಸ್ಕೆಫೆ ಕೊಡಗು ಕಪ್ ಹಾಕಿ ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಹಾಕಿ ಆಟಗಾರರಿದ್ದಾರೆ. ಹಲವಾರು ಆಟಗಾರ ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡು ದೇಶದ ಅತ್ಯುನ್ನತ ಪದಕ ಹಾಗೂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕ್ರೀಡೆಯಲ್ಲಿ ಉತ್ತಮ ಪ್ರತಿಭೆಗಳಾಗಿ ಗುರುತಿಸಿಕೊಳ್ಳಬೇಕಾದರೆ ಮೈದಾನಗಳ ಅವಶ್ಯಕತೆ ಇದೆ. ಮೈದಾನಗಳ ಪುನಶ್ಚೇತನ ಪ್ರಥಮ ಹಂತದಲ್ಲಿ ಹೋಬಳಿ ಮಟ್ಟದಲ್ಲಿ ಮಾಡಲಾಗುತ್ತಿದೆ. ನಂತರ ತಾಲೂಕು ಮಟ್ಟದಲ್ಲಿ ನಡೆಸಲಾಗುವುದು. ಪೊನ್ನಂಪೇಟೆ ಕ್ರೀಡಾ ಶಾಲೆಯನ್ನು ಮೇಲ್ದರ್ಜೆಗೆ ಏರಿಸಲು ರೂ. ೫ ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು.
ನೆಸ್ಲೆ ಮಿಡಲ್ ಈಸ್ಟ್ ಹಾಗೂ ನಾರ್ಥ್ ಆಫ್ರಿಕಾದ ಬಿಸ್ನೆಸ್ ಡೆವಲಪ್ಮೆಂಟ್ ಕರ್ನಾಟಕದ ಕಾರ್ಯದರ್ಶಿ ಡಾ. ಅಂಜಪರವAಡ ಬಿ. ಸುಬ್ಬಯ್ಯ, ಕಾಫಿ ಬೆಳಗಾರರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಮಾಪಂಗಡ ಅಶೋಕ್, ಕೊಳುವಂಡ ಸುಬ್ರಮಣಿ, ಕಳ್ಳಿಚಂಡ ಪ್ರಸಾದ್, ಹಾಕಿ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಅಮ್ಮಂಡಿರ ಚೇತನ್, ಖಜಾಂಚಿ ಗುಮ್ಮಟ್ಟಿರ ಮುತ್ತಣ್ಣ ಹಾಕಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
-ಪಳೆಯಂಡ ಪಾರ್ಥ ಚಿಣ್ಣಪ್ಪ