ಸೋಮವಾರಪೇಟೆ, ಮಾ. ೧೫: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ, ಸಜ್ಜಳ್ಳಿ ಭಾಗದಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದೆ. ಈ ಭಾಗದಲ್ಲಿ ಬೀಡುಬಿಟ್ಟಿರುವ ಆನೆಗಳು ಅರಣ್ಯಕ್ಕೆ ತೆರಳದೇ ಇರುವುದರಿಂದ ಸ್ಥಳೀಯರಲ್ಲಿ ಜೀವಭಯ ಸೃಷ್ಟಿಯಾಗಿದೆ.

ಇಂದು ಎಲಿಫೆಂಟ್ ಟಾರ್ಸ್ಕ್ ಫೋರ್ಸ್ನ ಸಿಬ್ಬಂದಿಗಳ ಮೇಲೆ ಧಾಳಿಗೆ ಯತ್ನಿಸಿದ ಸಲಗವೊಂದು, ಸಿಬ್ಬಂದಿಗಳು ತೆರಳುತ್ತಿದ್ದ ವಾಹನಕ್ಕೆ ದಂತದಿAದ ತಿವಿದ ಪರಿಣಾಮ, ವಾಹನದ ಬಾನೆಟ್ ಜಖಂಗೊAಡಿದೆ. ರೈಲ್ವೇ ಬ್ಯಾರಿಕೇಡ್‌ಗೆ ಅಳವಡಿಸಿದ್ದ ಪಿಲ್ಲರ್‌ಗಳನ್ನು ಮುರಿದು ಆರು ಕಾಡಾನೆಗಳು ತೆರಳಿವೆ. ಒಂಟಿ ಸಲಗವೊಂದು ಕಾಜೂರು ಭಾಗದಲ್ಲಿ ಓಡಾಡಿಕೊಂಡಿದ್ದು, ಇದನ್ನು ಅರಣ್ಯಕ್ಕೆ ಅಟ್ಟಲು ತೆರಳಿದ ಕಾಡಾನೆ ಕಾರ್ಯಾಚರಣೆ ತಂಡದ ಮೇಲೆ ಧಾಳಿಗೆ ಮುಂದಾಗಿ, ಪಿಕ್‌ಅಪ್‌ನ ಬಾನೆಟ್‌ನ್ನು ಜಖಂಗೊಳಿಸಿದೆ.

ನAತರ ಆನೆ ಕಂದಕವನ್ನು ದಾಟಿ, ಕಾಫಿ ತೋಟದೊಳಗೆ ತೆರಳಿದೆ. ತೋಟದೊಳಗೆ ಆನೆಯನ್ನು ಕಂಡ ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಜೀವ ಉಳಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಮನುಷ್ಯರು ಜೀವಿಸುವುದೇ ಕಷ್ಟಸಾಧ್ಯವಾಗಿದೆ. ಪ್ರತಿ ಕ್ಷಣ ಜೀವ ಭಯದಲ್ಲಿಯೇ ಓಡಾಡಬೇಕಿದೆ. ಆದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರೋಪಾಯ ಕಂಡುಹಿಡಿಯುತ್ತಿಲ್ಲ. ಬ್ಯಾರಿಕೇಡ್, ಕಂದಕಗಳು ಕೆಲಸಕ್ಕೆ ಬಾರದಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಬಿರು ಬೇಸಿಗೆಯಿದ್ದು, ಅರಣ್ಯದೊಳಗೆ ಆಹಾರದ ಕೊರತೆ ಎದುರಾಗಿದೆ. ಇದರೊಂದಿಗೆ ಹೆಚ್ಚಿನ ತಾಪಮಾನ ಏರುಗತಿಯಲ್ಲಿದೆ. ಅರಣ್ಯಕ್ಕೆ ಒತ್ತಿಕೊಂಡAತೆ ಇರುವ ಕಾಫಿ ತೋಟಗಳಲ್ಲಿ ಇದೀಗ ನೀರು ಹಾಯಿಸುತ್ತಿದ್ದು, ತೋಟದೊಳಗೆ ತಂಪಾದ ವಾತಾವರಣ ನಿರ್ಮಾಣವಾಗಿರುವುದರಿಂದ ಕಾಡಾನೆಗಳು ತೋಟ ಪ್ರವೇಶಿಸುತ್ತಿವೆ.

ಇದರೊಂದಿಗೆ ಆಹಾರ ಮತ್ತು ನೀರು ಲಭಿಸುತ್ತಿರುವುದರಿಂದ ಎಂದಿನAತೆ ಅವುಗಳು ಸಂಚರಿಸುತ್ತಿವೆ. ಈ ಹಿನ್ನೆಲೆ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಓಡಾಡುವವರು ಎಚ್ಚರಿಕೆ ವಹಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರ ಬರುವವರು ಟಾರ್ಚ್ಗಳನ್ನು ಬಳಸಬೇಕು. ಆನೆಗಳ ಚಲನ ವಲನ ಅರಿತುಕೊಳ್ಳಬೇಕು. ಕೆಲ ಕಾಲ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.