ಚೆಯ್ಯಂಡಾಣೆ, ಮಾ. ೧೫: ಮಡಿಕೇರಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಅರ್ವತೋಕ್ಲು ಗ್ರಾಮದ ಕುಮುದ ರಶ್ಮಿ, ಉಪಾಧ್ಯಕ್ಷರಾಗಿ ಮುತ್ತಾರ್ಮುಡಿ ಗ್ರಾಮದ ರೀನಾ ಸುದರ್ಶನ್, ಕಾಂತೂರು ಮೂರ್ನಾಡುವಿನ ಜಮುನಾ, ನಾಪೋಕ್ಲುವಿನ ಕಸ್ತೂರಿ, ಪೇರೂರಿನ ಇಂದಿರಾ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ನಾಪೋಕ್ಲುವಿನ ಪ್ರತೀಜ ಅಚ್ಚಪ್ಪ, ಮರಗೋಡುವಿನ ವಿನಿರಾಯ್, ಕಾರ್ಯದರ್ಶಿಯಾಗಿ ಹೊದ್ದೂರಿನ ತ್ಯಾಗಿ ಅಪ್ಪಯ್ಯ, ಮದೆನಾಡುವಿನ ನಿತ್ಯ ಕುಮಾರಿ, ಮೇಕೇರಿಯ ಅನುಸೂಯ, ಚೆಯ್ಯಂಡಾಣೆಯ ಪೆಮ್ಮಂಡ ಕೌಶಿ ಕಾವೇರಮ್ಮ ಆಯ್ಕೆಯಾದರು.
ಕೋಶಾಧಿಕಾರಿಯಾಗಿ ಕಕ್ಕಬ್ಬೆಯ ಪರದಂಡ ಪ್ರಮೀಳಾ ಪೆಮ್ಮಯ್ಯ ಆಯ್ಕೆಯಾದರೆ, ಕಾರ್ಯಾಲಯ ಕಾರ್ಯದರ್ಶಿಯಾಗಿ ಮಕ್ಕಂದೂರಿನ ನವೀನ ಕುಮಾರಿ, ಸಮಿತಿ ಸದಸ್ಯರಾಗಿ ಮರಗೋಡಿನ ಸಂಗೀತ ಜಯ ಪ್ರಕಾಶ್, ಮುರ್ತಾಮುಡಿಯ ಮಮತಾ, ಚೆಟ್ಟಿಮಾನಿಯ ರೂಪ ಶಿವಕುಮಾರ್, ಮೂರ್ನಾಡುವಿನ ಹೆಚ್.ಎನ್. ಶಶಿ, ಗಾಳಿಬೀಡಿನ ಕವಿತ, ಬಿಳಿಗೇರಿ ಮೇಕೇರಿಯ ಪಾರ್ವತಿ ಸುಬ್ಬಯ್ಯ, ಪಾರಾಣೆಯ ರಶ್ಮಿ, ಕಟ್ಟೆಮಾಡುವಿನ ಚಿತ್ರ ರವರನ್ನು ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರ ಆದೇಶದ ಮೇರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.