ವೀರಾಜಪೇಟೆ, ಮಾ. ೧೬: ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ನೆಸ್‌ಕೆಫೆ ಕೊಡಗು ಕಪ್ ಹಾಕಿ ಪಂದ್ಯಾವಳಿಯಲ್ಲಿ ಬ್ಲೇಸ್ ಮೂರ್ನಾಡ್ ಹಾಗೂ ಕೋಣನಕಟ್ಟೆ ತಂಡಗಳು ಫೈನಲ್ಸ್ನಲ್ಲಿ ಸೆಣಸಾಡಲಿವೆ.

ಪ್ರಥಮ ಸೆಮಿಫೈನಲ್ಸ್ನಲ್ಲಿ ಬ್ಲೇಸ್ ಮೂರ್ನಾಡ್ ತಂಡವು ೨-೦ ಗೋಲುಗಳಿಂದ ಬೇರಳಿನಾಡು ತಂಡವನ್ನು ಪರಾಭವಗೊಳಿಸಿತು. ಬ್ಲೇಸ್ ಮೂರ್ನಾಡು ತಂಡದ ಆಟಗಾರ ಮಾತಂಡ ಅಶ್ವಿನ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು. ೫೩ ನೇ ನಿಮಿಷದಲ್ಲಿ ಬ್ಲೇಸ್ ಮೂರ್ನಾಡು ತಂಡದ ಮೇರಿಯಂಡ ರಾಯ್ ಮತ್ತೊಂದು ಗೋಲು ದಾಖಲಿಸಿ ತಂಡವನ್ನು ಫೈನಲ್ಸ್ ಹಂತಕ್ಕೆ ತಲುಪಿಸಿದರು.

ದ್ವಿತೀಯ ಸೆಮಿ ಫೈನಲ್ಸ್ನಲ್ಲಿ ಕೋಣನಕಟ್ಟೆ ತಂಡವು ಬೇಗೂರು ಈವೈಸಿ ತಂಡವನ್ನು ೪-೨ ಗೋಲುಗಳಿಂದ ಮಣಿಸಿ ಫೈನಲ್ಸ್ ಪ್ರವೇಶಿಸಿತು. ಎರಡು ತಂಡಗಳು ಬಿರುಸಿನ ಆಟಕ್ಕೆ ಒತ್ತು ನೀಡಿತು. ೧೪ನೇ ನಿಮಿಷದಲ್ಲಿ ಬೇಗೂರು ತಂಡದ ರೈಲ್ವೇಸ್ ಆಟಗಾರ ಮುಕ್ಕಾಟಿರ ಪೂಣಚ್ಚ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ೨೪ ನೇ ನಿಮಿಷದಲ್ಲಿ ಪೂಣಚ್ಚ ಮತ್ತೊಂದು ಗೋಲು ದಾಖಲಿಸುವುದರ ಮೂಲಕ ತಂಡದ ಮುನ್ನಡೆ ಕಾಯ್ದುಕೊಂಡರು. ೨೭ನೇ ನಿಮಿಷದಲ್ಲಿ ಕೋಣನಕಟ್ಟೆ ತಂಡದ ಎ.ಜಿ.ಒ.ಸಿ ಆಟಗಾರ ಆಭರಣ್ ಸುದೇವ್ ಗೋಲು ದಾಖಲಿಸಿದರು. ೩೫ನೇ ನಿಮಿಷದಲ್ಲಿ ಕೆನರಾ ಬ್ಯಾಂಕ್ ಆಟಗಾರ ಕುಪ್ಪಂಡ ಸೋಮಯ್ಯ ಗೋಲು ದಾಖಲಿಸಿ ಸಮನಾಗಿಸಿದರು. ೪೦ನೇ ನಿಮಿಷದಲ್ಲಿ ಸಾವನ್, ೫೩ನೇ ನಿಮಿಷದಲ್ಲಿ ಸೋಮಣ್ಣ ಗೋಲು ಬಾರಿಸುವುದರ ಮೂಲಕ ಕೋಣನಕಟ್ಟೆ ತಂಡ ಫೈನಲ್ಸ್ಗೆ ಅರ್ಹತೆ ಪಡೆದುಕೊಂಡರು.

ಪAದ್ಯಾಟದ ತೀರ್ಪುಗಾರರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ, ಕರವಂಡ ಅಪ್ಪಣ್ಣ, ಚಂದಪAಡ ಆಕಾಶ್, ಮೂಕಚಂಡ ನಾಚಪ್ಪ, ವಿನೋದ್ ಜೆಸಿಬಿ, ತಾಂತ್ರಿಕ ಸಮಿತಿ ನಿರ್ದೇಶಕರಾಗಿ ಚೆಯ್ಯಂಡ ಅಪ್ಪಚ್ಚು ಕಾರ್ಯ ನಿರ್ವಹಿಸಿದರು. ಮಾಳೇಟಿರ ಶ್ರೀನಿವಾಸ್ ಹಾಗೂ ಚೆಪ್ಪುಡಿರ ಕಾರ್ಯಪ್ಪ, ಮೂಕಚಂಡ ಬೊಳ್ಳಮ್ಮ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.

ಪಂದ್ಯಾಟದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಒಲಂಪಿಯನ್ ಬಾಳೆಯಡ ಸುಬ್ರಮಣಿ, ಅಂತರರಾಷ್ಟಿçÃಯ ಅಥ್ಲೀಟ್ ಪಾಲೇಕಂಡ ಬೋಪಯ್ಯ, ಹಾಕಿ ಕರ್ನಾಟಕ ಕಾರ್ಯದರ್ಶಿ ಅಂಜಪರವAಡ ಸುಬ್ಬಯ್ಯ, ಕಾಕೋಟುಪರಂಬು ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಮೇವಡ ಚಿಣ್ಣಪ್ಪ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್, ನಿವೃತ ಪ್ರಾಂಶುಪಾಲ ಪಟ್ಟಡ ಪೂವಣ್ಣ ಉಪಸ್ಥಿತರಿದ್ದರು. - ಪಾರ್ಥ ಚಿಣ್ಣಪ್ಪ