ಮಡಿಕೇರಿ, ಮಾ. ೧೬: ಮಾರ್ಟ್ವೊಂದರಲ್ಲಿ ಬಟ್ಟೆ ಖರೀದಿಗೆಂದು ತೆರಳಿದ ಮಹಿಳೆಯೊಬ್ಬರು ತನ್ನ ಮೇಲೆ ಕಳ್ಳತನದ ಸುಳ್ಳು ಆರೋಪ ಮಾಡಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.

ನಗರದ ವಿಶಾಲ್ ಮಾರ್ಟ್ನಲ್ಲಿ ಘಟನೆ ನಡೆದಿದ್ದು, ಶಬೀನಾ ಎಂಬವರು ಇಂದು ಮಾರ್ಟ್ಗೆ ತೆರಳಿ ಬಟ್ಟೆ ಖರೀದಿಸಿ ಬಿಲ್ ಪಾವತಿ ಮಾಡಿ ಹೊರ ಬರುತ್ತಿದ್ದಾಗ ದ್ವಾರದಲ್ಲಿದ್ದ ಸೆನ್ಸಾರ್ ಶಬ್ಧ ಮಾಡಿದೆ. ಈ ಸಂದರ್ಭ ಮಾರ್ಟ್ನ ಸಿಬ್ಬಂದಿ ಶಬೀನಾ ಅವರು ಮಾರ್ಟ್ನಿಂದ ಏನನ್ನೋ ಕಳವು ಮಾಡಿದ್ದಾರೆ ಎಂಬ ಶಂಕೆಯಿAದ ಅವರನ್ನು ಒಳಕ್ಕೆ ಕರೆದೊಯ್ದು ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಆದರೆ, ಈ ಸಂದರ್ಭ ಶಬೀನ ಅವರ ಬಳಿ ಯಾವುದೇ ಕಳವು ಮಾಲು ಪತ್ತೆಯಾಗಿಲ್ಲ. ಅಷ್ಟಕ್ಕೂ ಸುಮ್ಮನಾಗದ ವ್ಯವಸ್ಥಾಪಕ ಗಿರೀಶ್ ಹಾಗೂ ಸಿಬ್ಬಂದಿ, ಶಬೀನಾ ಅವರನ್ನು ಮಾಡಿ ಹೊರ ಬರುತ್ತಿದ್ದಾಗ ದ್ವಾರದಲ್ಲಿದ್ದ ಸೆನ್ಸಾರ್ ಶಬ್ಧ ಮಾಡಿದೆ. ಈ ಸಂದರ್ಭ ಮಾರ್ಟ್ನ ಸಿಬ್ಬಂದಿ ಶಬೀನಾ ಅವರು ಮಾರ್ಟ್ನಿಂದ ಏನನ್ನೋ ಕಳವು ಮಾಡಿದ್ದಾರೆ ಎಂಬ ಶಂಕೆಯಿAದ ಅವರನ್ನು ಒಳಕ್ಕೆ ಕರೆದೊಯ್ದು ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಆದರೆ, ಈ ಸಂದರ್ಭ ಶಬೀನ ಅವರ ಬಳಿ ಯಾವುದೇ ಕಳವು ಮಾಲು ಪತ್ತೆಯಾಗಿಲ್ಲ. ಅಷ್ಟಕ್ಕೂ ಸುಮ್ಮನಾಗದ ವ್ಯವಸ್ಥಾಪಕ ಗಿರೀಶ್ ಹಾಗೂ ಸಿಬ್ಬಂದಿ, ಶಬೀನಾ ಅವರನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಶಬೀನ ಅವರು ಹೊರಬರುವ ಸಂದರ್ಭ ಸೆನ್ಸಾರ್ ಶಬ್ಧ ಮಾಡುತ್ತಿದ್ದು, ಹೊರಗಿನಿಂದ ಒಳಕ್ಕೆ ಹೋಗುವಾಗ ಸೆನ್ಸಾರ್ ಶಬ್ಧ ಮಾಡದಿರುವುದು ಕಂಡುಬAದಿದೆ. ಈ ಹಿನ್ನೆಲೆಯಲ್ಲಿ ಸೆನ್ಸಾರ್‌ನಲ್ಲೇ ಸಮಸ್ಯೆ ಇರುವಂತೆ ಕಂಡುಬAದ ಹಿನ್ನೆಲೆಯಲ್ಲಿ ಕ್ಷಮಾಪಣಾ ಪತ್ರ ನೀಡುವಂತೆ ಪೊಲೀಸರ ಮುಖಾಂತರ ಮನವಿ ಮಾಡಿದರೂ ಮಾರ್ಟ್ನ ವ್ಯವಸ್ಥಾಪಕರು ಒಪ್ಪದ ಹಿನ್ನೆಲೆಯಲ್ಲಿ ಶಬೀನ ವಿಶಾಲ್ ಮಾರ್ಟ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಶಾಲ್ ಮಾರ್ಟ್ನಂತ ಅಂಗಡಿ ಮಳಿಗೆಗಳಿಗೆ ಹೋಗುವ ಗ್ರಾಹಕರು ಎಚ್ಚರಿಕೆಯಿಂದ ಇರುವಂತೆ ಗ್ರಾಹಕರು ಹೇಳುತ್ತಿದ್ದು, ಅಮಾಯಕ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.