ಮಡಿಕೇರಿ, ಮಾ. ೧೫: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ ಪೂರ್ವ ನಿಗದಿಯಂತೆ ತಾ. ೧೭ರ ಭಾನುವಾರದಂದೇ ನಡೆಯಲಿದೆ. ನಿಗದಿಯಾಗಿದ್ದ ಚುನಾವಣೆಯನ್ನು ಲೋಕಸಭಾ ಚುನಾವಣೆ ಘೋಷಣೆ ಆಗಲಿರುವ ಕಾರಣವನ್ನು ಮುಂದಿಟ್ಟು ಸಹಕಾರ ಇಲಾಖೆ ಮುಂದೂಡಿತ್ತು. ಈ ಪ್ರಕ್ರಿಯೆ ವಿರುದ್ಧ ಕೆಲವು ಸಹಕಾರಿಗಳು ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಜಾರಿ ಅರ್ಜಿ ಸಲ್ಲಿಸಿದ್ದರಿಂದ ಒಂದೇ ದಿನದಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿ ನಿಗದಿತ ದಿನಾಂಕದAದೇ ಚುನಾವಣೆ ನಡೆಸುವಂತೆ ಆದೇಶ ನೀಡಿದೆ.

(ಮೊದಲ ಪುಟದಿಂದ) ಚುನಾವಣೆಗೆ ಇನ್ನೂ ಕೇವಲ ಎರಡು ದಿನ ಇರುವಾಗ ಸಹಕಾರ ಇಲಾಖೆ ಚುನಾವಣೆಯನ್ನು ಮುಂದೂಡಿತ್ತು. ಈ ಬಗ್ಗೆ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಬಾಂಡ್ ಗಣಪತಿ ಹಾಗೂ ಸತೀಶ್ ಕುಮಾರ್ ನೇತೃತ್ವದಲ್ಲಿ ಈಗಾಗಲೇ ಅವಿರೋಧವಾಗಿ ಆಯ್ಕೆ ಆಗಿರುವ ಕಿಲನ್ ಗಣಪತಿ ಹಾಗೂ ಹೆಚ್.ಕೆ. ಮಾದಪ್ಪ ಅವರುಗಳು ಉಚ್ಚ ನ್ಯಾಯಾಲಯದಲ್ಲಿ ಮುಂದೂಡಿಕೆ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಚುನಾವಣಾ ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡಿದ್ದು, ದಿಢೀರಾಗಿ ಮುಂದೂಡಿರುವುದರಿAದ ತೊಂದರೆ ಆಗಲಿದೆ. ಯಾವುದೇ ಕಾರಣಕ್ಕೂ ಚುನಾವಣೆಯನ್ನು ತಡೆಯುವ ಹಾಗಿಲ್ಲವೆಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಪ್ರತಿಪಾದಿಸಿದ್ದು, ನಿಗದಿತ ದಿನಾಂಕವಾದ ಮಾರ್ಚ್ ೧೭ರಂದೇ ಚುನಾವಣೆ ನಡೆಸುವಂತೆ ಆದೇಶಿಸಿದೆ. ಹಾಗಾಗಿ ತಾ. ೧೭ರಂದು ಚುನಾವಣೆ ನಡೆಯಲಿದೆ.