ಕುಶಾಲನಗರ/ ಕೂಡಿಗೆ, ಮಾ. ೧೬ : ಕೂಡಿಗೆ ಗ್ರಾಮ ಪಂಚಾಯಿತಿ ಕಚೇರಿ ಕಡತಕ್ಕೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಗ್ರಾಮ ಪಂಚಾಯಿತಿ ಸದಸ್ಯರುಗಳ ಮೇಲೆ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ದೂರು ನೀಡಿದ ಪ್ರಕರಣ ನಡೆದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ತಾ. ೧೪ ರಂದು ಪಂಚಾಯಿತಿಗೆ ಆಗಮಿಸಿದ ಪಂಚಾಯಿತಿ ಸದಸ್ಯರಾದ ಅರುಣ್ರಾವ್, ಅನಂತ್, ಶಿವಕುಮಾರ್ ಮತ್ತು ಇಬ್ಬರು ಸಾರ್ವಜನಿಕರು ಅಭಿವೃದ್ಧಿ ಅಧಿಕಾರಿ ಬಳಿ ಆಡಳಿತ ಮಂಡಳಿಯ ಸಭೆಯ ನಡಾವಳಿಕೆ ಪುಸ್ತಕವನ್ನು ಪಡೆದು ಅದರಲ್ಲಿದ್ದ ಸಭಾ ನಡಾವಳಿಕೆ ದಾಖಲಾದ ಕೆಲವು ಪುಟಗಳಿಗೆ ಹಾನಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಚಟುವಟಿಕೆಗಳು ಪಂಚಾಯಿತಿ ಕಚೇರಿ ಸಿಸಿ ಕ್ಯಾಮರದಲ್ಲಿ ದೃಶ್ಯಗಳು ಸೆರೆಯಾಗಿದ್ದು, ಇದರ ಆಧಾರದ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಮತ್ತು ಅಧ್ಯಕ್ಷರಾದ ಗಿರೀಶ್ ಅವರು ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದು, ಈ ರೀತಿಯ ಕಾನೂನು ಬಾಹಿರ ಕೃತ್ಯ ನಡೆಸಿರುವ ಪಂಚಾಯಿತಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕು ಮತ್ತು ಸಂಬAಧಿಸಿದ ಸದಸ್ಯರು ಹಾಗೂ ಜೊತೆಗೆ ಇದ್ದ ಸಾರ್ವಜನಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಪೊಲೀಸ್ ದೂರು ನೀಡುವುದಾಗಿ ಯೂ ಅಧ್ಯಕ್ಷರಾದ ಗಿರೀಶ್ ‘ಶಕಿ’್ತಗೆ ತಿಳಿಸಿದ್ದಾರೆ.
ಪ್ರತಿದೂರು
ಆರೋಪ ಹೊತ್ತ ಸದಸ್ಯರು ಕೂಡ ಕಾರ್ಯನಿರ್ವಹಣಾಧಿಕಾರಿಗೆ ಪ್ರತಿದೂರು ಸಲ್ಲಿಸಿ ಮಾಸಿಕ ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಬರೆದಿರುವುದಿಲ್ಲ. ಈ ಹಿನ್ನೆಲೆ ಅಡ್ಡಲಾಗಿ ಗೆರೆ ಎಳೆಯಲಾಗಿದೆ ಎಂದು ತಿಳಿಸಿದ್ದಾರೆ.