ವೀರಾಜಪೇಟೆ, ಮಾ. ೧೬: ಕರ್ನಾಟಕ-ಕೇರಳ ಅಂತರರಾಜ್ಯ ಸಂಪರ್ಕ ಕಲ್ಪಿಸುವ ವೀರಾಜಪೇಟೆ ತಾಲೂಕಿನ ಮಾಕುಟ್ಟ ಬಳಿ ಉರುಟಿ ಬ್ರಹ್ಮಗಿರಿ ವನ್ಯಜೀವಿ ಅರಣ್ಯದ ಮಾಕುಟ್ಟ ವಲಯದಲ್ಲಿ ಆಸ್ಪತ್ರೆಯ ತ್ಯಾಜ್ಯ ಎಸೆದಿರುವ ಘಟನೆ ನಡೆದಿದೆ.

ತ್ಯಾಜ್ಯದಲ್ಲಿ ರೋಗಿಗಳಿಗೆ ನೀಡಲಾಗುವ ಗ್ಲುಕೋಸ್ ತುಂಬಿರುವ ಬಾಟಲಿಗಳು ಸೇರಿಕೊಂಡಿವೆ. ಇದರಿಂದ ವನ್ಯಜೀವಿಗಳಿಗೆ ಸಂಚಕಾರವಾಗುವ ಸಾಧ್ಯತೆಗಳಿದೆ. ಸಂಬAಧಪಟ್ಟ ಇಲಾಖೆಯವರು ಇದನ್ನು ಗಮನಿಸಿ ಇದು ಯಾವ ಆಸ್ಪತ್ರೆಯ ಮೆಡಿಕಲ್ ತ್ಯಾಜ್ಯ ಎಂಬುವುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.