ಐಗೂರು, ಮಾ. ೧೫: ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಶುದ್ಧ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಇಲ್ಲಿಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಗುಳಿಗಪ್ಪ ಸಮುದಾಯ ಭವನದ ಪಕ್ಕದಲ್ಲಿ ನಿರ್ಮಿಸಿರುವ ಬೃಹತ್ ಆಕಾರದ ೫೦,೦೦೦ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ನ ಕೆಲಸ ಪೂರ್ಣಗೊಂಡಿದ್ದು, ಹೊಸ ಬಣ್ಣದಿಂದ ಕಂಗೊಳಿಸುತ್ತಿದ್ದು ಕಳೆದ ಒಂದುವರೆ ವರ್ಷದಿಂದ ಐಗೂರು ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರನ್ನು ಉಣಿಸಲು ಕಾಯುತ್ತಾ ನಿಂತಿದೆ. ಕಳೆದ ೨೦೨೩ರ ವಿಧಾನಸಭಾ ಚುನಾವಣೆಗಿಂತಲೂ ಮೊದಲೇ ಈ ನೀರಿನ ಟ್ಯಾಂಕಿನ ಕೆಲಸ ಮುಗಿದಿದ್ದು, ಒಂದು ವರ್ಷದ ಮೊದಲೇ ಗ್ರಾಮದ ಎಲ್ಲಾ ಮನೆಗಳಿಗೆ ನೀರಿನ ಮೀಟರ್ ಅನ್ನು ಅಳವಡಿಸಲಾಗಿದೆ.

ಐಗೂರು ಭಾಗದ ಎಡವಾರೆ, ಕಾಜೂರು, ಐಗೂರು ಮತ್ತು ವಿಜಯನಗರದ ನಿವಾಸಿಗಳು ಸುಮಾರು ಒಂದು ವರ್ಷದಿಂದ ಈ ಯೋಜನೆಯ ಉದ್ಘಾಟನೆಯಾಗಿ ನೀರು ಬರುವುದನ್ನೇ ಕಾಯುತ್ತಾ ಕುಳಿತ್ತಿದ್ದಾರೆ. ಈಗಾಗಲೇ ಐಗೂರಿನ ಚೋರನ ಹೊಳೆಯ ನೀರಿನ ಒಳಹರಿವು ಕಡಿಮೆಯಾಗಿ ಜಲ ಮೂಲಗಳು ಬತ್ತಿ ಹೋಗಿದ್ದು, ಸಕಾಲದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ಬರಬಹುದು. ೧೯೮೩ರ ಮುಖ್ಯಮಂತ್ರಿ ಹೆಗ್ಗಡೆ ಸರ್ಕಾರದಲ್ಲಿ ಅಂದಿನ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ನೀರ್ ಸಾಬ್ ಎಂದೇ ಪ್ರಸಿದ್ಧಿ ಪಡೆದ ನಜೀರ್ ಸಾಬ್ ಅವರ ಅವಧಿಯಲ್ಲಿ ಐಗೂರು ವ್ಯಾಪ್ತಿಯಲ್ಲಿ ಅಳವಡಿಸಿದ್ದ ಬೋರ್‌ವೆಲ್‌ಗಳು ನಿರ್ವಹಣೆಯ ಕೊರತೆಯಿಂದ ಮೂಲೆಗುಂಪಾಗಿದ್ದು ಕೆಲವು ಬೋರ್‌ವೆಲ್‌ಗಳು ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ. ಮುಂದಿನ ದಿನಗಳಲ್ಲಿ ಬರಗಾಲ ಬಂದರೆ ಈ ಇಲ್ಲಿಯ ಗ್ರಾಮಸ್ಥರ ಅಭಿಪ್ರಾಯವಾಗಿದೆ.

ವರ್ಷದಿಂದ ವರ್ಷಕ್ಕೆ ಗ್ರಾಮದಲ್ಲಿ ಮನೆಗಳ ಸಂಖ್ಯೆ ಮತ್ತು ಜನರ ಸಂಖ್ಯೆ ಅಧಿಕವಾಗುತ್ತಾ ಇದ್ದು, ನೀರಿನ ಅವಶ್ಯಕತೆಯ ಪ್ರಮಾಣವು ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ವಿಷಯ ಬಂದಾಗ ಇಲ್ಲಿ ಮುಖ್ಯ ಪಾತ್ರಧಾರಿಗಳು ನೀರುಗಂಟಿ(ವಾಟರ್ ಮೆನ್)ಗಳು. ಇವರಿಗೆ ಸರಕಾರದಿಂದ ನೀಡುವ ಸಂಬಳ ಕಡಿಮೆಯಾಗಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದ್ದು ತಮ್ಮ ಉದ್ಯೋಗದಲ್ಲಿ ಭದ್ರತೆ ಇರುವುದಿಲ್ಲ. ಆದ್ದರಿಂದ ಕೆಲಸದಲ್ಲಿ ಆಸಕ್ತಿ ತೋರುವುದಿಲ್ಲ.

ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಶುದ್ಧ ಕುಡಿಯುವ ನೀರಿನ ಯೋಜನೆಯ ಬೃಹದಾಕಾರದ ಟ್ಯಾಂಕ್ ಉದ್ಘಾಟನೆಯಾಗದ ಬಗ್ಗೆ ಜಿಲ್ಲಾ ಪಂಚಾಯಿತಿ ಅಭಿಯಂತರ ಕೀರ್ತನ್ ಅವರನ್ನು ಸಂಪರ್ಕಿಸಿದಾಗ, ಅಂದಾಜು ಸುಮಾರು ರೂ. ೮೩ ಲಕ್ಷದಿಂದ ೯೦ ಲಕ್ಷದವರೆಗಿನ ಈ ಯೋಜನೆಯಲ್ಲಿ ಇನ್ನೂ ಬಾಕಿ ಕೆಲಸ ಇದ್ದು, ಟ್ಯಾಂಕಿನಿAದ ದುರ್ಗಾಪರಮೇಶ್ವರಿ ಎಸ್ಟೇಟಿನವರೆಗೆ ಸುಮಾರು ಒಂದು ಕಿಲೋಮೀಟರ್‌ವರೆಗೆ ಪೈಪ್ ಅಳವಡಿಸುವ ಕೆಲಸ ಬಾಕಿ ಇದೆ. ಜೊತೆಗೆ ಈ ಮಧ್ಯೆ ಅನುದಾನದ ಕೊರತೆಯಿಂದ ಕೆಲಸ ನಿಧಾನವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಐಗೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಾರನ ಪ್ರಮೋದ್ ಅವರಲ್ಲಿ ಮಾಹಿತಿ ಬಯಸಿದಾಗ ಈಗಾಗಲೇ ಬೃಹತ್ ಆಕಾರದ ನೀರಿನ ಟ್ಯಾಂಕಿಗೆ ನೀರು ಶೇಖರಣೆಗೆ ಬೋರ್‌ವೆಲ್‌ಗಳ ಅವಶ್ಯಕತೆ ಇದ್ದು, ಬೋರ್‌ವೆಲ್‌ಗಳಿಗೆ ಸ್ಥಳ ಗುರುತಿಸಲಾಗಿದ್ದು, ಆದಷ್ಟು ಬೇಗ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಪ್ರಯತ್ನಿಸಲಾಗುವುದು ಎಂದರು.

- ಸುಕುಮಾರ.ಬೋರ್‌ವೆಲ್‌ಗಳ ಅವಶ್ಯಕತೆ ಬಂದರೂ ಬರಬಹುದು ಎಂಬುದು