ಸೋಮವಾರಪೇಟೆ, ಮಾ.೧೬ : ಇಲ್ಲಿನ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವವು ತಾ. ೧೭ರಿಂದ ೧೯ರವರೆಗೆ ನಡೆಯಲಿದೆ.

ತಾ. ೧೬ರಂದು (ಇಂದು) ಬೆಳಿಗ್ಗೆ ೫.೩೦ಕ್ಕೆ ಗಣಪತಿ ಹೋಮದೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ೬.೩೦ಕ್ಕೆ ಧ್ವಜಾರೋಹಣ ನೆರವೇರಲಿದೆ. ಸಂಜೆ ೬.೩೦ಕ್ಕೆ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಶ್ರೀಕೃಷ್ಣಕುಮಾರ್ ಅವರಿಂದ ವರ್ಷಕ್ಕೊಂದು ಬಾರಿ ಜರುಗುವ ವಿಶೇಷ ಆಶ್ಲೇಷ ಬಲಿ ಪೂಜೆ ನಡೆಯಲಿದೆ.

ತಾ. ೧೭ರಂದು ಜಾತ್ರೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಅಪ್ಪಚ್ಚುರಂಜನ್‌ರವರು ಮಧ್ಯಾಹ್ನ ೧೨.೩೦ಕ್ಕೆ ಚಾಲನೆ ನೀಡಲಿದ್ದಾರೆ. ೩ ದಿನಗಳು ವಿಶೇಷ ಪೂಜೆ, ದೈವಕೋಲಗಳು ನಡೆಯಲಿದೆ ಎಂದು ತಿಳಿಸಿದರು.