ಮಡಿಕೇರಿ, ಮಾ. ೧೫: ಉಪಾಧ್ಯಕ್ಷರ ಸಹಿತ ಆಡಳಿತಾರೂಢ ಬಿಜೆಪಿಯ ಕೆಲ ಸದಸ್ಯರು ನಗರಸಭೆಯ ೨೦೨೪-೨೫ನೇ ಸಾಲಿನ ಆಯವ್ಯಯ ಮಂಡನೆ ಸಭೆಯಿಂದ ನಿರ್ಗಮಿಸುವ ಮೂಲಕ ಗೊಂದಲಕ್ಕೆ ಕಾರಣರಾದರು. ಪೌರಾಯುಕ್ತರ ವರ್ಗಾವಣೆ ವಿಳಂಬವನ್ನು ಖಂಡಿಸಿದ ಸದಸ್ಯರು ಗುಂಪುಗಾರಿಕೆ ಆರೋಪಕ್ಕೆ ಕೈಗನ್ನಡಿ ಹಿಡಿದರು. ವಾಗ್ವಾದ, ಟೀಕೆ, ವ್ಯಂಗ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ನಗರಸಭೆ ಸಭಾಂಗಣದಲ್ಲಿ ಮುಂದಿನ ಸಾಲಿನ ಆಯವ್ಯಯದ ಬಜೆಟ್ ಸಂಬAಧ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಸಭೆ ಆಯೋಜನೆಗೊಂಡಿತ್ತು. ಸಭೆ ಅಜೆಂಡಾ ಪ್ರಕಾರ ಆರಂಭವಾಗುವ ಮುನ್ನ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಪೌರಾಯುಕ್ತರನ್ನು ವರ್ಗಾವಣೆ ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಆದರೂ, ವಿಳಂಬವಾಗಿದೆ ಎಂದು ಆಕ್ಷೇಪಿಸಿ ಪೌರಾಯುಕ್ತರು ಸಭೆಯಲ್ಲಿರುವ ಹಿನ್ನೆಲೆ ತಾನು ಸಭೆಯಲ್ಲಿರುವುದಿಲ್ಲ ಎಂದು ಕೈಮುಗಿದು ಸಭಾತ್ಯಾಗ ಮಾಡಿದರು.

ಇದರ ಬೆನ್ನಲ್ಲೆ ಸದಸ್ಯ ಕೆ.ಎಸ್. ರಮೇಶ್ ಕೂಡ ಆಯವ್ಯಯ ಸಭೆ ಫೆಬ್ರವರಿಯಲ್ಲಿ ನಡೆಸಬೇಕಾಗಿತ್ತು.

(ಮೊದಲ ಪುಟದಿಂದ) ಅಭಿವೃದ್ಧಿ ಚಿಂತನೆಯಿAದ ಬಂದಿದ್ದೇನೆ. ಬಜೆಟ್ ಮಂಡನೆಗೆ ತÀನ್ನ ಆಕ್ಷೇಪವಿಲ್ಲ ಎಂದು ಹೇಳಿ ಸಭೆಯಿಂದ ಹೊರನಡೆದರು. ಉಪಾಧ್ಯಕ್ಷೆ ಸವಿತಾ ರಾಕೇಶ್ ತಮ್ಮ ಅಸಮಾಧಾನ ವ್ಯಕ್ತಪಡಿಸಿ ತೆರಳಿದರೆ, ಶ್ವೇತಾ ಪ್ರಶಾಂತ್, ಕಾಳಚಂಡ ಅಪ್ಪಣ್ಣ, ಮಂಜುಳಾ ಮುರುಗ, ಸಬಿತಾ ಅವರುಗಳು ಕೂಡ ಒಬ್ಬರ ಹಿಂದೆ ಒಬ್ಬರು ಪೌರಾಯುಕ್ತರ ವರ್ಗಾವಣೆ ವಿಳಂಬಕ್ಕೆ ಅತೃಪ್ತಿ ವ್ಯಕ್ತಪಡಿಸಿ ನಿರ್ಗಮಿಸಿ ತಮ್ಮ ಅಸಮಾಧಾನ ಹೊರಹಾಕಿದರು.

ಬಿಜೆಪಿ ಸದಸ್ಯರುಗಳಾದ ಮಹೇಶ್ ಜೈನಿ, ಅರುಣ್ ಶೆಟ್ಟಿ, ಉಮೇಶ್ ಸುಬ್ರಮಣಿ, ಚಿತ್ರಾವತಿ, ಶಾರದ, ಕಲಾವತಿ, ಚಂದ್ರಶೇಖರ್ ಸಭೆಯಲ್ಲಿ ಪಾಲ್ಗೊಂಡರು.

ವಿಪಕ್ಷಗಳ ಟೀಕೆ

ವಿಪಕ್ಷ ಎಸ್.ಡಿ.ಪಿ.ಐ, ಕಾಂಗ್ರೆಸ್, ಜೆಡಿಎಸ್ ಸದಸ್ಯರುಗಳು ಸದಸ್ಯರ ನಡೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಇದು ಗಂಭೀರ ಸಭೆಯಾಗಿದೆ. ಆದರೆ, ಆಡಳಿತಾರೂಢ ಸದಸ್ಯರು ತೆರಳಿರುವುದು ಹಾಸ್ಯಾಸ್ಪದ. ಚರಿತ್ರೆಯಲ್ಲಿ ಈ ರೀತಿ ನಡೆದಿರಲಿಲ್ಲ. ಇದು ನಗೆಪಾಟಲಿಗೀಡಾಗುವ ವಿಚಾರವಾಗಿದೆ ಎಂದರು. ನಗರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಭಿನ್ನಾಭಿಪ್ರಾಯಕ್ಕೆ ಕಾರಣಕ್ಕೆ ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ. ಅಧ್ಯಕ್ಷರು ತಮ್ಮ ಕಾರ್ಯವ್ಯಾಪ್ತಿ ಉಪಯೋಗಿಸಿಕೊಂಡು ಪರಿಣಾಮಕಾರಿ ಕೆಲಸ ಮಾಡಬಹುದಿತ್ತು. ಇದೀಗ ತಮ್ಮ ಅವಧಿ ಮುಗಿದಿದ್ದು, ಈ ಸಮಯದಲ್ಲಿ ಕೋಟ್ಯಂತರ ರೂಪಾಯಿ ಆದಾಯ ನಷ್ಟದೊಂದಿಗೆ ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆಯಾಗಿದೆ. ಆಡಳಿತಾರೂಢ ಬಿಜೆಪಿ ಸದಸ್ಯರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿ ಚುನಾವಣೆ ಎದುರಿಸಿ ಎಂದು ಟೀಕಿಸಿದರು.

ಬಿಜೆಪಿ ಸದಸ್ಯ ಮಹೇಶ್ ಜೈನಿ ಮಾತನಾಡಿ, ಪೌರಾಯುಕ್ತರ ವರ್ಗಾವಣೆ ನಮ್ಮ ಕೆಲಸವಲ್ಲ. ಈ ಸಂಬAಧ ಪೂರಕ ಕೆಲಸಗಳನ್ನು ಮಾಡಿದ್ದೇವೆ. ಸರಕಾರ ವರ್ಗಾವಣೆ ಮಾಡುವ ಜವಾಬ್ದಾರಿ ಹೊತ್ತಿದೆ. ಸಭಾತ್ಯಾಗ ಮಾಡಿದ ಸ್ಥಾಯಿ ಸಮಿತಿ ಅಧ್ಯಕ್ಷರು ಪೌರಾಯುಕ್ತರು ನೀಡುವ ಕಡತಗಳಿಗೆ ಸಹಿ ಹಾಕುತ್ತಾರೆ. ಆ ಸಂದರ್ಭವೇ ತಮ್ಮ ಅಸಮಾಧಾನ ತೋರಬಹುದಿತ್ತು ಎಂದು ಕುಟುಕಿದರು.

ಜನರ ಸೇವೆಗಿರುವ ಜನಪ್ರತಿನಿಧಿಗಳ ಈ ನಡೆಯ ಬಗ್ಗೆ ತಮ್ಮ ಮಾತಿನ ಮೂಲಕ ಬಿಜೆಪಿ ಸದಸ್ಯ ಉಮೇಶ್ ಸುಬ್ರಮಣಿ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ಯಾವ ಬಣದಲ್ಲಿಯೂ ಗುರುತಿಸಿಕೊಂಡಿಲ್ಲ. ತಾನು ಜನರ ಬಣ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ. ಸಭೆಯಿಂದ ತೆರಳಿರುವುದು ಖಂಡನೀಯ ಎಂದು ತಮ್ಮದೇ ಪಕ್ಷದ ಸದಸ್ಯರ ನಿರ್ಗಮನದ ಬಗ್ಗೆ ಅಪಸ್ವರ ಎತ್ತಿದರು.

ಬಜೆಟ್ ಮಂಡನೆ

ಸದಸ್ಯರ ನಿರ್ಗಮನದ ನಂತರ ಅಧ್ಯಕ್ಷೆ ಅನಿತಾ ಪೂವಯ್ಯ ೨೦೨೪-೨೫ನೇ ಸಾಲಿನ ಬಜೆಟ್ ಮಂಡಿಸಿದರು. ರೂ. ೧೧,೯೫,೫೫,೮೯೬ ಆರಂಭಿಕ ಶಿಲ್ಕು ಇದ್ದು, ಮುಂದಿನ ಸಾಲಿನಲ್ಲಿ ರೂ. ೩೪,೨೯,೨೮,೭೫೦ ಆದಾಯ, ರೂ. ೪೫,೦೮,೫೩,೭೫೦ ನಿರೀಕ್ಷಿತ ಖರ್ಚು ಹೊಂದಲಾಗಿದೆ. ರೂ. ೧,೧೬,೩೦,೮೯೬ ಉಳಿತಾಯದ ನಿರೀಕ್ಷೆ ಇದೆ ಎಂದು ತಿಳಿಸಿದರು. ಪ್ರಮುಖ ಆದಾಯಗಳು, ರಾಜ್ಯ ಮತ್ತು ಕೇಂದ್ರ ಪುರಸ್ಕೃತ ಅನುದಾನಗಳು, ಪ್ರಮುಖ ವೆಚ್ಚಗಳ ಕುರಿತು ಬಜೆಟ್ ಮಂಡಿಸಿದರು.

೪೦ ಲಕ್ಷದ ಪ್ರವಾಸ ಬೇಡ

ರೂ. ೪೦ ಲಕ್ಷವನ್ನು ಅಧ್ಯಯನ ಪ್ರವಾಸ ಉದ್ದೇಶಕ್ಕೆ ವಿನಿಯೋಗಿಸುವುದು ಬೇಡ. ಅದನ್ನು ವಾರ್ಡ್ ಅಭಿವೃದ್ಧಿಗೆ ಬಜೆಟ್‌ನಲ್ಲಿ ಎಸ್.ಡಿ.ಪಿ.ಐ. ಸದಸ್ಯರು ಆಗ್ರಹಿಸಿದರು. ಮಾಂಸ ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿದ ನಂತರ ಟೆಂಡರ್‌ದಾರರಿಗೆ ಮಳಿಗೆ ನೀಡಬೇಕು, ೮ ತಿಂಗಳು ಕಳೆದರು ನಗರಸಭೆ ಮಳಿಗೆಗಳ ಟೆಂಡರ್ ಆಗಿಲ್ಲ. ಈ ಬಗ್ಗೆ ಕ್ರಮವಹಿಸಬೇಕು, ನಗರದ ಶೌಚಾಲಯಗಳು ಬಳಸಲು ಯೋಗ್ಯದ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ಕ್ರಮವಹಿಸಬೇಕು ಎಂದರು.

ಇಂದು ಮತ್ತೇ ಸಭೆ

ಬಜೆಟ್ ಕುರಿತು ವಿಸ್ತೃತ ಚರ್ಚೆಗೆ ತಾ. ೧೬ ರಂದು (ಇಂದು) ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಅಧ್ಯಕ್ಷತೆ ಅನಿತಾ ಪೂವಯ್ಯ ತಿಳಿಸಿದರು. ಸಭೆಯಲ್ಲಿ ಪೌರಾಯುಕ್ತ ವಿಜಯ, ಕಂದಾಯಾಧಿಕಾರಿ ತಾಹೀರ್, ವಿವಿಧ ಹಂತದ ಅಧಿಕಾರಿಗಳು ಹಾಜರಿದ್ದರು.