ಮಡಿಕೇರಿ, ಮಾ. ೧೪: ಹಿಂದಿ ಸಿನಿಮಾ ಪರದೆಯ ಜನಪ್ರಿಯ ನಟ ಕೊಡಗಿನವರಾದ ಕಂಬೆಯAಡ ಗುಲ್ಷನ್ ದೇವಯ್ಯ ಅವರಿಗೆ ೨೦೨೪ರ ಬಾಲಿವುಡ್ ಲೈಫ್ ಓ ಟಿ ಟಿ ಮಾಧ್ಯಮದ ಉತ್ತಮ ನಟ ಪ್ರಶಸ್ತಿ ದೊರೆತಿದೆ.

ಬಾಲಿವುಡ್ ಲೈಫ್ ವಾರ್ಷಿಕವಾಗಿ ಅತ್ಯುತ್ತಮ ಕಲಾತ್ಮಕ ಹಾಗೂ ತಾಂತ್ರಿಕ ಸಿನಿಮಾ, ನಟ-ನಟಿ ಹಾಗೂ ಚಿತ್ರ ನಿರ್ಮಾಪಕರನ್ನು ಗುರುತಿಸಿ ಗೌರವಿಸುತ್ತದೆ. ಗುಲ್ಷನ್ ದೇವಯ್ಯ, ನೆಟ್ ಫ್ಲಿಕ್ಸ್ನಲ್ಲಿ ಪ್ರಸಾರವಾದ, ರಾಜ್ ಅಯಿಂಡ್ ಡಿ ಕೆ ನಿರ್ದೇಶನದ ‘ಗನ್ಸ್ ಆ್ಯಂಡ್ ಗುಲಾಬ್ಸ್' ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಗನ್ಸ್ ಆ್ಯಂಡ್ ಗುಲಾಬ್ಸ್, ಸರಕಾರೀ ಅಧಿಕೃತ ಗಾಂಜಾ ಬೆಳೆಗಾರಿಕೆಗೆ ಸಂಬAಧಿತ ಅನಧಿಕೃತ ವ್ಯವಹಾರಗಳ ಸುತ್ತ ಹೆಣೆಯಲಾದ ಕಥೆ. ಈ ಕಥೆಯಲ್ಲಿ ಚಾರ್ ಕಟ್ ಆತ್ಮಾರಾಮ್ ಎಂಬ ಪಾತ್ರದಲ್ಲಿ ಗುಲ್ಷನ್ ಅತ್ಯುತ್ತಮವಾಗಿ ಅಭಿನಯಿಸಿ ಬಾಲಿವುಡ್ ಲೈಫ್ ಓ ಟಿ ಟಿ ಸರಣಿಯ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆಯೂ ಗುಲ್ಷನ್ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಮೂಲತಃ ಕಕ್ಕಬೆಯವರಾದ ಬೆಂಗಳೂರು ನಿವಾಸಿ ಕಂಬೆಯAಡ ದೇವಯ್ಯ ಹಾಗೂ ಪುಷ್ಪ ದಂಪತಿಯ ಪುತ್ರ.