ಗೋಣಿಕೊಪ್ಪ ವರದಿ, ಮಾ. ೧೩: ಕೆ. ಬಾಡಗ ಗ್ರಾಮದ ಪೇರ್ಮಾಡು ಶ್ರೀ ಈಶ್ವರ ದೇವಸ್ಥಾನ ವಾರ್ಷಿಕ ಹಬ್ಬ ಜರುಗಿತು. ಕೊಡಿಮರ ನಿಲ್ಲಿಸುವ ಶಾಸ್ತçದ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ದೇವರ ಬೊಳಕ್, ಹರಕೆ ಬೊಳಕ್, ಪೂಜಾ ಕಾರ್ಯಗಳು ನೆರವೇರಿದವು. ಮಹಾಶಿವರಾತ್ರಿ ಪ್ರಯುಕ್ತ ಶ್ರಾವಣ ನಕ್ಷತ್ರದಲ್ಲಿ ದೊಡ್ಡ ಹಬ್ಬ ನಡೆಯಿತು. ರುದ್ರಾಭಿಷೇಕ, ಸಾಯಂಕಾಲ ದೇವರ ಅವಭೃತ ಸ್ನಾನ ನೆರವೇರಿತು. ದೇವರ ದರ್ಶನ, ವಸಂತ ಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಕ್ತರು ಪಾಲ್ಗೊಂಡರು.